ವಿದ್ಯಾರ್ಥಿನಿಯರ ಮೇಲೆ ಲಾಠಿ ಚಾರ್ಜ್ – ತನಿಖೆಗೆ ಆದೇಶಿಸಿದ ಶಿಕ್ಷಣ ಸಚಿವ

ರಾಂಚಿ: ಜಾರ್ಖಂಡ್ ಅಕಾಡೆಮಿಕ್ ಕೌನ್ಸಿಲ್ ಘೋಷಿಸಿದ 10ನೇ ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಯ ಫಲಿತಾಂಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಮರು ಪರಿಶೀಲನೆ ನಡೆಸುವಂತರೆ ಒತ್ತಾಯಿಸಿದ ವಿದ್ಯಾರ್ಥಿನಿಯರ ಮೇಲೆ ಪೊಲೀಸರು ನಡೆಸಿದ್ದ ಲಾಠಿ ಚಾರ್ಜ್ ಕುರಿತಂತೆ ತನಿಖೆ ನಡೆಸಿ ಎಂದು ಶಿಕ್ಷಣ ಸಚಿವ ಜಾಗರಣಾಥ್ ಮಹತೋ ಆದೇಶಿಸಿದ್ದಾರೆ.

ಆಗಸ್ಟ್ 6ರಂದು ರಾಜ್ಯ ಸಚಿವ ಬನ್ನ ಗುಪ್ತಾ ಅವರ ಎದುರಿಗೆ ಪ್ರತಿಭಟನೆ ನಡೆಸಲು ಧನ್ಭಾದ್ ಕಲೆಕ್ಟರೇಟ್‍ನಲ್ಲಿ ವಿದ್ಯಾರ್ಥಿನಿಯರು ಜಮಾಯಿಸಿದ್ದರು. ಈ ವೇಳೆ ಗುಪ್ತಾರವರು ಸಭೆ ನಡೆಸುತ್ತಿದ್ದಾಗ ಪ್ರತಿಭಟನಾ ನಿರತ ವಿದ್ಯಾರ್ಥಿನಿಯರು ಗೇಟ್ ಬಳಿ ಬಲವಂತವಾಗಿ ಬಂದಿದ್ದಾರೆ. ಈ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಲು ಮುಂದಾಗಿದ್ದಾರೆ.

ಈ ಬಗ್ಗೆ ಜಾಗರಣಾಥ್ ಮಹತೋ, ಮರು ಮೌಲ್ಯಮಾಪನ ಪರಿಶೀಲಿಸಬಹುದು. ಪರೀಕ್ಷೆಯಲ್ಲಿ ವಿಫಲವಾದ ಯಾವುದೇ ವಿದ್ಯಾರ್ಥಿಗಳು, ಮತ್ತೊಮ್ಮೆ ಪರೀಕ್ಷೆಯನ್ನು ಸ್ವೀಕರಿಸಬಹುದು. ಸದ್ಯ ಲಾಠಿ ಚಾರ್ಚ್ ಕುರಿತಂತೆ ತನಿಖೆ ನಡೆಸಲು ಧನ್ಬಾದ್ ಡಿಸಿಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ಮತ್ತೊಂದೆಡೆ ಬಿಜೆಪಿ ಜಾರ್ಖಂಡ್ ಟ್ವಿಟ್ಟರ್‍ನಲ್ಲಿ, ಜಾರ್ಖಂಡ್‍ನ ದಬ್ಬಾಳಿಕೆ ಸರ್ಕಾರ ಜನರ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ನಿನ್ನೆ ಧನ್ಭಾದ್‍ನಲ್ಲಿರುವ ವಿದ್ಯಾರ್ಥಿನಿಯರ ಮೇಲೆ ಲಾಠಿ ಚಾರ್ಜ್ ಮಾಡಿರುವುದು ನಾಚಿಕೆಗೇಡಿನ ಕೆಲಸವಾಗಿದೆ. ಜನರು ಶೀಘ್ರವೇ ಅವರಿಗೆ ಉತ್ತರಿಸಲಿದ್ದಾರೆ ಟ್ವೀಟ್ ಮಾಡಿದೆ. ಇದನ್ನೂ ಓದಿ:ನೀರಜ್ ಚೋಪ್ರಾಗೆ ಸಿನಿಮಾ ಆಫರ್ ನೀಡಿದ ಅಕ್ಷಯ್ ಕುಮಾರ್

Source: publictv.in Source link