3ನೇ ಅಲೆ ಎದುರಿಸಲು ಅಗತ್ಯ ತಯಾರಿ: ಡಾ. ದೇವಿಶೆಟ್ಟಿ ಸಮಿತಿಯ ಮಹತ್ವದ ಸಲಹೆ

3ನೇ ಅಲೆ ಎದುರಿಸಲು ಅಗತ್ಯ ತಯಾರಿ: ಡಾ. ದೇವಿಶೆಟ್ಟಿ ಸಮಿತಿಯ ಮಹತ್ವದ ಸಲಹೆ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್‌ ಮೂರನೇ ಅಲೆ ಎದುರಿಸಲು ಮಾಡಿಕೊಳ್ಳಬೇಕಾದ ಅಗತ್ಯ ಸಿದ್ಧತೆಗಳ ಕುರಿತು ಡಾ. ದೇವಿಶೆಟ್ಟಿ ನೇತೃತ್ವದ ಉನ್ನತ ಮಟ್ಟದ ತಜ್ಞರ ಸಮಿತಿ ಬಿಬಿಎಂಪಿಗೆ ಮಹತ್ವದ ಸಲಹೆಗಳನ್ನು ನೀಡಿದೆ. ಈಗ ಕೊರೋನಾ ಮೂರನೇ ಅಲೆ ತಡೆಗಾಗಿ ಬಿಬಿಎಂಪಿ ಡಾ. ದೇವಿಶೆಟ್ಟಿ ನೇತೃತ್ವದ ಉನ್ನತ ಮಟ್ಟದ ತಜ್ಞರ ಸಮಿತಿ ನೀಡಿದ ಸಲಹೆಗಳನ್ನು ಪಾಲಿಸಲು ಮುಂದಾಗಿದೆ.

ಡಾ. ದೇವಿಶೆಟ್ಟಿ ನೇತೃತ್ವದ ತಜ್ಞರ ಸಮಿತಿ ನೀಡಿದ ಸಲಹೆಗಳು ಹೀಗಿವೆ…

  • ಮೂರನೇ ಅಲೆಗೆ ಈಗಿನಿಂದಲೇ ಸಿದ್ಧತೆಗಳನ್ನ ಮಾಡಿಕೊಳ್ಳಬೇಕು
  • ಪ್ರತಿಯೊಬ್ಬರಿಗೂ ಲಸಿಕೆ ಹಾಕಲು ಒತ್ತಾಯ
  • ಲಸಿಕೆ ಹಾಕಿಸಿಕೊಂಡವರೂ ಮಾಸ್ಕ್​ ಧರಿಸೋದು ಕಡ್ಡಾಯ
  • ಸಭೆ ಸಮಾರಂಭಗಳಿಗೆ ನಿರ್ಬಂಧ ವಿಧಿಸಿ
  • ರಾತ್ರಿ ವೇಳೆ ನಡೆಯುವ ಎಲ್ಲಾ ಕಾರ್ಯಕ್ರಮಗಳನ್ನ ಬ್ಯಾನ್​ ಮಾಡಿ
  • ಕಟ್ಟುನಿಟ್ಟಿನ ನೈಟ್​ ಕರ್ಫ್ಯೂ ಜಾರಿಯಾಗಬೇಕು
  • ರಾಜ್ಯದ ಗಡಿ ಜಿಲ್ಲೆಗಳಲ್ಲಿ ವೀಕೆಂಡ್​ ಕರ್ಫ್ಯೂ ಮುಂದುವರೆಸಲು ನಿರ್ದೇಶನ

ಇದನ್ನೂ ಓದಿ: ತನಗೆ ಸಾರಿಗೆ ಇಲಾಖೆ ಬೇಡ ಎಂದು ಶ್ರೀರಾಮಲು ಪಟ್ಟು -ಸಚಿವರ ದೆಹಲಿ ಯಾತ್ರೆ, ವರಿಷ್ಠರ ಭೇಟಿ ಕಸರತ್ತು!

Source: newsfirstlive.com Source link