ಆಕಸ್ಮಿಕ ಬೆಂಕಿ; ಸುಟ್ಟು ಕರಕಲಾದ ಮನೆ, ಅಪಾರ ಹಾನಿ

ಆಕಸ್ಮಿಕ ಬೆಂಕಿ; ಸುಟ್ಟು ಕರಕಲಾದ ಮನೆ, ಅಪಾರ ಹಾನಿ

ಬಳ್ಳಾರಿ: ತಡರಾತ್ರಿ ಆಕಸ್ಮಿಕ ಬೆಂಕಿ ತಗುಲಿ ಮನೆಯೊಂದು ಸಂಪೂರ್ಣ ಸುಟ್ಟು ಅಪಾರ ಹಾನಿ ಸಂಭವಿಸಿದ ಘಟನೆ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ. ಹರಪನಹಳ್ಳಿ ಪಟ್ಟಣದ ಆಂಜನೇಯ ಬಡವಾಣೆಯಲ್ಲಿ ಬೆಂಕಿಯ ಕೆನ್ನಾಲಿಗೆಗ ಇಡೀ ಗುಡಿಸಲು ಸುಟ್ಟು ಭಸ್ಮವಾಗಿದೆ.

ಬಡಾವಣೆಯ ನಿವಾಸಿ ಬಡಿಗೇರ ಮೂರ್ತಿ ಎಂಬುವರಿಗೆ ಸೇರಿದ ಮನೆ ಇದಾಗಿದೆ. ಕುಟುಂಬಸ್ಥರು ಎಲ್ಲಿಗೆ ಹೋದ ಸಂದರ್ಭದಲ್ಲಿ ಆಕಸ್ಮಿಕವಾಗಿ ಮನೆಗೆ ಬೆಂಕಿ ಬಿದ್ದಿದೆ ಎನ್ನಲಾಗಿದೆ. ಇಡೀ ಬಡವಾಣೆ ಜನರೆಲ್ಲಾ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಸಾಧ್ಯವಾಗದೆ ಮನೆಯಲ್ಲಿದ್ದ 2 ಸಾವಿರ ಹಣ ಮತ್ತು ಬಟ್ಟೆ ಸೇರಿದಂತೆ ಸಾವಿರಾರು ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ.

blank

ಇದನ್ನೂ ಓದಿ: 3ನೇ ಎದುರಿಸಲು ಅಗತ್ಯ ತಯಾರಿ: ಡಾ. ದೇವಿಶೆಟ್ಟಿ ಸಮಿತಿಯ ಮಹತ್ವದ ಸಲಹೆ

ಸದ್ಯ ಘಟನಾ ಸ್ಥಳಕ್ಕಾಗಮಿಸಿದ ಕರ್ನಾಟಕ ರಾಜ್ಯ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಮುಂದಾಗಿದ್ದಾರೆ. ಸೌಧೆ ಒಲೆಯಿಂದಲೇ ಬೆಂಕಿ ಬಿದ್ದಿರುವ ಶಂಕೆ ವ್ಯಕ್ತವಾಗಿದ್ದು, ಬಡ ರೈತ ಕಣ್ಣೀರು ಹಾಕುತ್ತಿದ್ದಾರೆ.

Source: newsfirstlive.com Source link