ಪೂಜಾರ, ರಹಾನೆ, ಕೊಹ್ಲಿ ವೈಫಲ್ಯ ಟೀಮ್​​​ ಇಂಡಿಯಾಕ್ಕೆ ನಷ್ಟ -ಮ್ಯಾನೇಜ್​ಮೆಂಟ್​ಗೆ ಟೆನ್ಶನ್ ಶುರು?

ಪೂಜಾರ, ರಹಾನೆ, ಕೊಹ್ಲಿ ವೈಫಲ್ಯ ಟೀಮ್​​​ ಇಂಡಿಯಾಕ್ಕೆ ನಷ್ಟ -ಮ್ಯಾನೇಜ್​ಮೆಂಟ್​ಗೆ ಟೆನ್ಶನ್ ಶುರು?

ಟೀಮ್ ಇಂಡಿಯಾಕ್ಕೆ ಈ ಮೂವರೇ ಆಧಾರ ಸ್ಥಂಬಗಳು, ವಿಶ್ವ ಟೆಸ್ಟ್​ ತಂಡಗಳ ಪೈಕಿ ಬಲಿಷ್ಠ ಮಧ್ಯಮ ಕ್ರಮಾಂಕ ಹೊಂದಿರುವ ತಂಡ ಟೀಮ್ ಇಂಡಿಯಾ. ಆದ್ರೆ, ಇವತ್ತು ಇದೇ ಟೀಮ್ ಇಂಡಿಯಾಕ್ಕೆ ಮಧ್ಯಮ ಕ್ರಮಾಂಕವೇ ತಲೆನೋವಾಗಿ ಪರಿಣಮಿಸಿದೆ.

ಟೀಮ್ ಇಂಡಿಯಾ ಟೆಸ್ಟ್​ ತಂಡ ಎಂದಾಕ್ಷಣ ನೆನೆಪಿಗೆ ಬರೋದು ವಿರಾಟ್​ ಕೊಹ್ಲಿ, ಚೇತೇಶ್ವರ ಪೂಜಾರ ಆ್ಯಂಡ್ ಅಜಿಂಕ್ಯಾ ರಹಾನೆ.. ಈ ತ್ರಿಮೂರ್ತಿ ಬ್ಯಾಟ್ಸ್​ಮನ್​ಗಳ ಕ್ರೀಸ್​ನಲ್ಲಿ ನೆಲೆ ನಿಂತರೆ ಎದುರಾಳಿ ತಬ್ಬಿಬ್ಬು ಆಗೋದು ಗ್ಯಾರಂಟಿ. ಎಷ್ಟರ ಮಟ್ಟಿಗೆ ಎದುರಾಳಿಗಳಿಗೆ ಕಂಟಕವಾಗೋ ಇವರೇ, ಟೆಸ್ಟ್​ ತಂಡದ ಶಕ್ತಿ. ಸದ್ಯ ವಿಶ್ವ ಕ್ರಿಕೆಟ್​ನಲ್ಲಿ ಬಲಿಷ್ಠ ಮಿಡಲ್ ಆರ್ಡರ್ ಎಂಬ ಖ್ಯಾತಿಗೂ ಈ ಕ್ಲಾಸ್​ ಬ್ಯಾಟ್ಸ್​ಮನ್​​ಗಳೇ ಕಾರಣ. ಆದ್ರೆ, ಇವತ್ತು ಇದೇ ಆಧಾರ ಸ್ಥಂಭವೇ, ಟೀಮ್ ಇಂಡಿಯಾ ಹಿನ್ನಡೆಗೆ ಕಾರಣವಾಗ್ತಿದ್ದಾರೆ.

blank

ಪೂಜಾರ, ರಹಾನೆ, ಕೊಹ್ಲಿ ವೈಫಲ್ಯಕ್ಕೆ ಕಾರಣವೇನು?

ಹೌದು..! ಹಿಂದೆ ಮಧ್ಯಮ ಕ್ರಮಾಂಕದಲ್ಲಿ ರನ್​ ಶಿಖರ್​ ಕಟ್ಟುತ್ತಿದ್ದ ಈ ಮೂವರು, ಈಗ ಸತತ ವೈಫಲ್ಯ ಅನುಭವಿಸಿದ್ದಾರೆ. ಇದು ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್​ನಲ್ಲೂ ಮುಂದುವರಿದಿದೆ. ಇದೇ ಈಗ ಟೀಮ್​​​​ ಮ್ಯಾನೇಜ್​ಮೆಂಟ್​ಗೆ ಚಿಂತೆಗೆ ದೂಡಿದರ ಜೊತೆಗೆ ಈ ಆಟಗಾರರ ವಿಚಾರದಲ್ಲಿ ತಮ್ಮನ್ನ ವಿಮರ್ಶಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿಸಿದೆ.

blank

ರಹಾನೆ-ಪೂಜಾರನಾ ಬಿಟ್ಟು ಸಾಗಬೇಕಾ ಟೀಮ್ ಇಂಡಿಯಾ?

ಸದ್ಯ ಇಂಥದ್ದೊಂದು ಪ್ರಶ್ನೆ ಟೀಮ್ ಇಂಡಿಯಾದಲ್ಲಿ ಉದ್ಬವಿಸಿದೆ. ಆದ್ರೆ ಈ ಪ್ರಶ್ನೆಗೆ ಉತ್ತರ ಸಲಭವಾಗಿಲ್ಲ. ಲೆಕ್ಕವಿಲ್ಲದಷ್ಟು ಪಂದ್ಯಗಳ ಜೊತೆಯಾಗಿ ಗೆಲ್ಲಿಸಿರುವ ಈ ಜೋಡಿ, ಟೆಸ್ಟ್​ ಕ್ರಿಕೆಟ್​​ನಲ್ಲಿ ಭಾರತಕ್ಕೆ ನೀಡಿರೋ ಕೊಡುಗೆ ಅಪಾರ. ಆದ್ರೆ ಇವರಿಬ್ಬರ ಸತತ ಫೈಫಲ್ಯ ಇಂಗ್ಲೆಂಡ್ ಸರಣಿಯಲ್ಲಿ ಮುಂದುವರಿದಿದೆ. ಸೇಫ್​​ ಡಿಫೆನ್ಸ್​​ ಬ್ಯಾಟಿಂಗ್ ಅಪ್ರೋಚ್​, ಬ್ಯಾಟಿಂಗ್ ಟೆಕ್ನಿಕ್ ಪೂಜಾರಾಗೆ ಮುಳುವಾಗ್ತಿದೆ.

ಅಷ್ಟೇ ಅಲ್ಲ, ಟೀಮ್ ಇಂಡಿಯಾದ ವೈಸ್​ ಕ್ಯಾಪ್ಟನ್ ರಹಾನೆಯೂ ಇದಕ್ಕಿಂತ ಬಿನ್ನವಾಗಿಲ್ಲ. ಸದ್ಯ ವೈಫಲ್ಯದ ಒತ್ತಡಕ್ಕೆ ಸಿಲುಕಿರುವ ರಹಾನೆ, ಗೊಂದಲದ ಮನಸ್ಥಿತಿಯ ಬ್ಯಾಟಿಂಗ್​​ನಿಂದಲೇ ಬೇಕಾಬಿಟ್ಟಿ ವಿಕೆಟ್ ಕೈಚೆಲ್ಲುತ್ತಿದ್ದಾರೆ. ಜಸ್ಟ್, ಪೂಜಾರ-ರಹಾನೆ ಬ್ಯಾಟಿಂಗ್ ವೈಫಲ್ಯ ಮಾತ್ರವೇ ಭಾರತಕ್ಕೆ ಹಿನ್ನಡೆಯಾಗ್ತಿಲ್ಲ. ರನ್ ಮಷಿನ್ ಕೊಹ್ಲಿಯೂ ಕೆಟ್ಟ ಫಾರ್ಮ್​ ಕೂಡ, ಸೇನಾ ರಾಷ್ಟ್ರಗಳಲ್ಲಿ ಇನ್ನಿಲ್ಲದಂತೆ ಕಾಡ್ತಿದೆ. ಕೆಳ ವರ್ಷಗಳಿಂದ ಕೊಹ್ಲಿಯನ್ನೇ ನೆಚ್ಚಿಕೊಂಡಿದ್ದ ಮ್ಯಾನೇಜ್​ಮೆಂಟ್​​ಗೆ, ಈಗ ಕೊಹ್ಲಿಯ ಅಸ್ಥಿರ ಫಾರ್ಮ್​ ಪದೇ ಪದೇ ನಿರಾಸೆ ಮೂಡಿಸ್ತಿರೋದರ ಜೊತೆಗೆ ಟೀಮ್ ಇಂಡಿಯಾವನ್ನ ಚಿಂತೆಗೀಡು ಮಾಡಿದೆ.

Source: newsfirstlive.com Source link