ನಾನು ಸಚಿವನಾಗಿದ್ದಾಗ ಪ್ರೀತಮ್ ಗೌಡ ಹುಟ್ಟೇ ಇರಲಿಲ್ಲ- ಸಚಿವ ಸೋಮಣ್ಣ ಟಾಂಗ್

ನಾನು ಸಚಿವನಾಗಿದ್ದಾಗ ಪ್ರೀತಮ್ ಗೌಡ ಹುಟ್ಟೇ ಇರಲಿಲ್ಲ- ಸಚಿವ ಸೋಮಣ್ಣ ಟಾಂಗ್

ಮಂಡ್ಯ: ಶಾಸಕ ಪ್ರೀತಮ್ ಗೌಡ ಇತಿಮಿತಿಯಲ್ಲಿ ನೋಡಬೇಕು. ಒಂದು ಸಾರಿ ಎಂಎಲ್ಎ ಆದ ತಕ್ಷಣಕ್ಕೆ ದೇವರಲ್ಲ ಎಂದು ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿ ವಿ.ಸೋಮಣ್ಣ ಅವರು, ಪ್ರೀತಮ್ ಗೌಡ ಇನ್ನು ಹುಡುಗ ಪಾಪ.. ನಾನು ಸಚಿವ ಆಗಿದ್ದಾಗ ಪ್ರೀತಮ್ ಗೌಡ ಹುಟ್ಟೇ ಇರಲಿಲ್ಲ. ದೇವೇಗೌಡರ ಕುಟುಂಬಕ್ಕೆ 50 ವರ್ಷ ರಾಜಕೀಯ ಇತಿಹಾಸವಿದೆ. ರಾಷ್ಟ್ರದ ಪ್ರಧಾನಿಗಳಾಗಿದ್ದವರು. ನಾನು ಕೂಡ ದೇವೇಗೌಡರ ಮನೆ ಹೋಗಿದ್ದೆ. ಪ್ರೀತಮ್​ ಗೌಡ ಅವರು ಇಂತಹ ಮಾತುಗಳನ್ನು ಬಿಡಬೇಕು ಎಂದು ಸಲಹೆ ನೀಡಿದರು.

ಆ.15ಕ್ಕೆ ನೀವ್ಯಾರು ಯೋಚನೆ ಮಾಡಿರದ ಯೋಜನೆ ಕೊಡ್ತೇವೆ..
ಆ.15ಕ್ಕೆ ಇದುವರೆಗೂ ಯಾರು ಊಹೆ ಮಾಡದ ಜನಪರ ಕಾರ್ಯಕ್ರಮಗಳನ್ನ ಷೋಷಣೆ ಮಾಡುತ್ತೇವೆ. 15ರಿಂದ 20 ದಿನಗಳಲ್ಲಿ ಸರ್ಕಾರ ಟೇಕಾಫ್​ ಆಗಿದೆ ಅಂತಾ ಎಲ್ಲರಿಗೂ ಅನಿಸುತ್ತದೆ. ಖಾತೆ ವಿಚಾರದಲ್ಲಿ ಯಾರಿಗೂ ಅಸಮಾಧಾನ ಇಲ್ಲ. ಬಸವರಾಜ ಬೊಮ್ಮಾಯಿ ಬುದ್ಧಿವಂತರಿದ್ದಾರೆ. ತಮ್ಮ ಕರ್ತವ್ಯ ನಿರ್ವಹಣೆ ಮಾಡ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಒಳ್ಳೆಯ ಕೆಲಸ ಮಾಡ್ತಿದೆ ಎಂದು ಸ್ವಾತಂತ್ರ್ಯ ದಿನಾಚರಣೆಯಂದು ಹೊಸ ಜನಪರ ಯೋಜನೆಗಳು ಘೋಷಣೆ ಆಗಲಿದೆ ಎಂಬ ವಿ.ಸೋಮಣ್ಣ ಬಗ್ಗೆ ಸುಳಿವು ನೀಡಿದರು.

Source: newsfirstlive.com Source link