ಭಾರತದ ವಿಮಾನಗಳ ಮೇಲೆ ಹೇರಿದ್ದ ನಿಷೇಧವನ್ನು ಸೆ.21ರವರೆಗೆ ವಿಸ್ತರಿಸಿದ ಕೆನಡಾ

ಒಟ್ಟಾವಾ: ಕೋವಿಡ್-19 ತಡೆಗಟ್ಟುವ ಸಲುವಾಗಿ ಕೆನಡಾ ಭಾರತದಿಂದ ತೆರಳುವ ಅಂತರಾಷ್ಟ್ರೀಯ ವಿಮಾನ ಹಾರಾಟದ ಮೇಲೆ ವಿಧಿಸಿದ್ದ ನಿಷೇಧವನ್ನು ಸೆಪ್ಟೆಂಬರ್ 21ರವರೆಗೆ ವಿಸ್ತರಿಸಿದೆ ಎಂದು ಫೆಡರಲ್ ಸಾರಿಗೆ ಸಚಿವಾಲಯ ತಿಳಿಸಿದೆ.

ಕೆನಾಡದ ಸಾರ್ವಜನಿಕ ಆರೋಗ್ಯ ಏಜೆನ್ಸಿಯು ಸಾರ್ವಜನಿಕ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡಿದ್ದು, ಟ್ರಾನ್ಸ್ ಪೋರ್ಟ್ ಕೆನಡಾ ಏರ್‍ಮೆನ್‍ಗೆ ನೋಟಿಸ್ ವಿಸ್ತರಿಸಿದೆ. ಭಾರತದಿಂದ ಕೆನಡಾಕ್ಕೆ ವಾಣಿಜ್ಯ ಮತ್ತು ಖಾಸಗಿ ಪ್ರಯಾಣಿಕರ ವಿಮಾನವನ್ನು 2021ರ ಸೆಪ್ಟೆಂಬರ್ 21ರವರೆಗೆ ನಿರ್ಬಂಧಿಸಲಾಗಿದೆ.

ಈ ಮುನ್ನ ಏಪ್ರಿಲ್ 22ರಂದು ಭಾರತದಿಂದ ಕೆನಡಾಕ್ಕೆ ವಿಮಾನ ಹಾರಾಟವನ್ನು ನಿಷೇಧಿಸಲಾಗಿತ್ತು. ಇದೀಗ ಐದನೇ ಬಾರಿಗೆ ಈ ನಿಷೇಧವನ್ನು ವಿಸ್ತರಿಸಲಾಗಿದೆ. ಈ ಹಿಂದೆ ಹೇರಲಾಗಿದ್ದ ನಿಷೇಧ ಆಗಸ್ಟ್ 21ರಂದು ಮುಕ್ತಾಯಗೊಳ್ಳಬೇಕಿತ್ತು, ಆದರೆ ಇದೀಗ ಸೆಪ್ಟೆಂಬರ್ 21ರವರೆಗೆ ವಿಸ್ತರಿಸಲಾಗಿದೆ. ಆದರೆ ಸರಕು ಅಥವಾ ವೈದ್ಯಕೀಯ ವರ್ಗಾವಣೆಗೆ ನಿಷೇಧ ಅನ್ವಯವಾಗುವುದಿಲ್ಲ. ಇದನ್ನೂ ಓದಿ:ಆ.21ರವರೆಗೆ ಭಾರತದ ವಿಮಾನಗಳ ಮೇಲೆ ನಿಷೇಧ ಹೇರಿದ ಕೆನಡಾ

Source: publictv.in Source link