‘ಲವ್​ ಯು ರಚ್ಚು’ ಚಿತ್ರದ ಶೂಟಿಂಗ್​​ ವೇಳೆ ಫೈಟರ್​​ ಸಾವು ಕೇಸ್​​​; ಐವರು ಆರೋಪಿಗಳ ವಿರುದ್ಧ FIR

‘ಲವ್​ ಯು ರಚ್ಚು’ ಚಿತ್ರದ ಶೂಟಿಂಗ್​​ ವೇಳೆ ಫೈಟರ್​​ ಸಾವು ಕೇಸ್​​​; ಐವರು ಆರೋಪಿಗಳ ವಿರುದ್ಧ FIR

‘ಲವ್​ ಯು ರಚ್ಚು’ ಚಿತ್ರದ ಶೂಟಿಂಗ್ ವೇಳೆ ಅವಘಡ ಸಂಭವಿಸಿದ ಪರಿಣಾಮ ವಿದ್ಯುತ್ ಶಾಕ್ ತಗುಲಿ ಫೈಟರ್​​ ಒಬ್ಬರು ಸಾವನ್ನಪ್ಪಿದ್ದರು. ಈ ಪ್ರಕರಣ ಸಂಬಂಧ ಬಿಡದಿ ಪೊಲೀಸರು ಈಗ ಐವರ ವಿರುದ್ಧ ಎಫ್​​ಐಆರ್​​ ದಾಖಲಿಸಿದ್ದಾರೆ.

ಬಿಡದಿಯ ಜೋಗನಪಾಳ್ಯದಲ್ಲಿ ಶೂಟಿಂಗ್ ನಡೆಯುತ್ತಿದ್ದಾಗ 11 KV ವಿದ್ಯುತ್ ತಂತಿ ತಗುಲಿ ಫೈಟರ್ ಅಸಿಸ್ಟೆಂಟ್ ವಿವೇಕ್ ಎಂಬುವರು ಸಾವನ್ನಪ್ಪಿದ ಕೂಡಲೇ ಬಿಡದಿ ಪೊಲೀಸರು ನಿನ್ನೆಯೇ​ ಸ್ವಯಂ ದೂರು ದಾಖಲಿಸಿಕೊಂಡಿದ್ದರು. ಈಗ ಪೊಲೀಸ್​​ ಎಫ್​​ಐಆರ್ ಮಾಡಿದ್ದು, ಪ್ರಕರಣದಲ್ಲಿ​ ನಿರ್ದೇಶಕ ಶಂಕರ್ ರಾಜ್ A1, ನಿರ್ಮಾಪಕ ಗುರುದೇಶ ಪಾಂಡೆ A2, ಸಾಹಸ ನಿರ್ದೇಶಕ ವಿನೋದ್ A3, ಸಿನಿಮಾ ಇನ್​​​ಚಾರ್ಜ್​​ ಪರ್ನಾಂಡೀಸ್ A4, ಕ್ರೇನ್ ಆಪರೇಟರ್ ಮಹೇದವರ್ A5 ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಅಸಿಸ್ಟೆಂಟ್ ಫೈಟರ್‌ ವಿವೇಕ್‌ ಸಾವಿಗೆ ಕಾರಣವೇನು? ಘಟನೆ ಬಗ್ಗೆ ಆಸ್ಪತ್ರೆಯಲ್ಲಿರೋ ಗಾಯಾಳು ಹೇಳಿದ್ದೇನು?

ಐವರು ಆರೋಪಿಗಳ ವಿರುದ್ಧ 304, 337, 149 ಅಡಿಯಲ್ಲಿ ಬಿಡದಿ ಪೊಲೀಸರು ಎಫ್​​ಐಆರ್​​ ದಾಖಲಿಸಿಕೊಂಡಿದ್ದಾರೆ. ವಿದ್ಯುತ್ ತಂತಿ ಸ್ಪರ್ಶದಿಂದ ತಮಿಳುನಾಡು ಮೂಲಕದ ಫೈಟರ್​​ ವಿವೇಕ್(28) ದುರ್ಮರಣ ಹೊಂದಿದ್ದರು. ಜೊತೆಗೆ ಮತ್ತೊಬ್ಬ ಫೈಟರ್ ರಂಜಿತ್ ಎಂಬಾತನಿಗೂ ವಿದ್ಯುತ್ ತಗುಲಿ ಗಂಭೀರ ಗಾಯವಾಗಿದೆ.

Source: newsfirstlive.com Source link