ಭಾರತಕ್ಕೆ ಚಿನ್ನದ ಪದಕ ತಂದ ‘ನೀರಜ್’ ಹೆಸರಿನವರಿಗೆ ಉಚಿತ ಪೆಟ್ರೋಲ್‌ ಘೋಷಿಸಿದ ಬಂಕ್‌ ಮಾಲೀಕ

ಭಾರತಕ್ಕೆ ಚಿನ್ನದ ಪದಕ ತಂದ ‘ನೀರಜ್’ ಹೆಸರಿನವರಿಗೆ ಉಚಿತ ಪೆಟ್ರೋಲ್‌ ಘೋಷಿಸಿದ ಬಂಕ್‌ ಮಾಲೀಕ

ನವದೆಹಲಿ: ಟೋಕಿಯೋ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಹೆಮ್ಮೆಯ ಪುತ್ರ ನೀರಜ್​​ ಚೋಪ್ರಾಗೆ ದೇಶದ ಪ್ರಮುಖ ಗಣ್ಯರಿಂದ ಬಹುಮಾನಗಳ ಮಹಾಪೂರವೇ ಹರಿದು ಬರುತ್ತಿದೆ. ಹೀಗಿರುವಾಗಲೇ ನೀರಜ್​​ ಚೋಪ್ರಾ ಹೆಸರಿನವರಿಗೂ ಒಂದು ವಿಶೇಷ ಆಫರ್​​ ಇದೆ. ಚಿನ್ನದ ಹುಡುಗ ನೀರಜ್​​ ಚೋಪ್ರಾ ಐತಿಹಾಸಿಕ ಗೆಲುವು ಸಂಭ್ರಮಿಸಲು ಗುಜರಾತಿನ ಭರೂಚ್‌ನಲ್ಲಿರುವ ಪೆಟ್ರೋಲ್ ಬಂಕ್ ಮಾಲೀಕ ಗ್ರಾಹಕರಿಗೆ ವಿಶೇಷ ಆಫರ್​​ವೊಂದು ಘೋಷಿಸಿದ್ದಾರೆ. ದೇಶಕ್ಕೆ ಚಿನ್ನದ ಪದಕ ತಂದ ನೀರಜ್​​ ಚೋಪ್ರಾರ ಹೆಸರಿನವರಿಗೆ 500 ರೂಪಾಯಿವರೆಗೆ ಉಚಿತ ಪೆಟ್ರೋಲ್ ನೀಡುವುದಾಗಿ ಬಂಕ್ ಮಾಲೀಕ ಆಯುಬ್​​​ ಪಠಾಣ್ ಹೇಳಿದ್ದಾರೆ.

blank

ಈ ಸಂಬಂಧ ಮಾತಾಡಿದ ಪೆಟ್ರೋಲ್ ಬಂಕ್ ಮಾಲೀಕ ಆಯುಬ್​​​ ಪಠಾಣ್, ನೀರಜ್ ಚೋಪ್ರಾ ಗೆಲುವು ಸಂಭ್ರಮಿಸಲು ನಾವು ಎರಡು ದಿನದ ಮಟ್ಟಿಗೆ 500 ರೂಪಾಯಿವರೆಗೂ ಉಚಿತ್ರ ಪೆಟ್ರೋಲ್​​​ ನೀಡಲಿದ್ದೇವೆ. ನೀರಜ್ ಚೋಪ್ರಾರ ಹೆಸರು ಹೊಂದಿರುವವರು ಯಾವುದೇ ಸರ್ಕಾರದ ಐಡಿ ಕಾರ್ಡ್​ ತೋರಿಸಿದರೆ ಪೆಟ್ರೋಲ್​​ ಹಾಕುತ್ತೇವೆ ಎಂದರು.

ಇದನ್ನೂ ಓದಿ: ಟೋಕಿಯೋದಿಂದ ಭಾರತಕ್ಕೆ ಬಂದ ಒಲಿಂಪಿಕ್ಸ್ ಹೀರೋಗಳು; ಏರ್​ಪೋರ್ಟ್​ನಲ್ಲಿ ಅದ್ಧೂರಿ ಸ್ವಾಗತ

ಇನ್ನು, ನೀರಜ್​​ ಚೋಪ್ರಾಗೆ ಮೊದಲು ಹರಿಯಾಣ ಸರ್ಕಾರ 6 ಕೋಟಿ ನಗದು ಹಣ ಘೋಷಿಸಿತ್ತು. ಬಳಿಕ ಆನಂದ್​​ ಮಹೇಂದ್ರಾ ಹೊಸ XUV 700 ಕಾರ್​​ ನೀಡುವುದಾಗಿ ಭರವಸೆ ನೀಡಿದರು. ಭಾರತೀಯ ವಿಮಾನಯಾನ ಸಂಸ್ಥೆ ಇಂಡಿಗೊ ಚೋಪ್ರಾಗೆ ಒಂದು ವರ್ಷದ ಅನಿಯಮಿತ ಉಚಿತ ಪ್ರಯಾಣದ ಕೊಡುಗೆ ಘೋಷಿಸಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಚೋಪ್ರಾಗೆ 1 ಕೋಟಿ ನಗದು ಬಹುಮಾನ ಘೋಷಿಸಿದೆ.

blank

Source: newsfirstlive.com Source link