T20 ವಿಶ್ವಕಪ್​​ಗೆ ಬಲಿಷ್ಠ ನ್ಯೂಜಿಲೆಂಡ್ ತಂಡ ಪ್ರಕಟ- ರಾಸ್​ ಟೇಲರ್​​​ಗಿಲ್ಲ ಸ್ಥಾನ

T20 ವಿಶ್ವಕಪ್​​ಗೆ ಬಲಿಷ್ಠ ನ್ಯೂಜಿಲೆಂಡ್ ತಂಡ ಪ್ರಕಟ- ರಾಸ್​ ಟೇಲರ್​​​ಗಿಲ್ಲ ಸ್ಥಾನ

​​ಮುಂಬರುವ ಟಿ20 ವಿಶ್ವಕಪ್​​​ ಮತ್ತು ಟೀಮ್​ ಇಂಡಿಯಾ ವಿರುದ್ಧದ ಟಿ20 ಹಾಗೂ ಟೆಸ್ಟ್​ ಸರಣಿಗೆ ನ್ಯೂಜಿಲೆಂಡ್​, 16 ಸದಸ್ಯರ ಬಲಿಷ್ಠ ತಂಡವನ್ನ ಪ್ರಕಟಿಸಿದೆ. ತಂಡವನ್ನ ಕೇನ್​​​ ವಿಲಿಯಮ್ಸನ್​ ಮುನ್ನಡೆಸಲಿದ್ದಾರೆ. ಆದರೆ ರಾಸ್​ ಟೇಲರ್ ಮತ್ತು ಕಾಲಿನ್​ ಡಿ ಗ್ರ್ಯಾಂಡ್​​​​​ ಹೋಮ್​​​ ಅವರನ್ನ ತಂಡದಿಂದ ಕೈಬಿಟ್ಟಿದೆ. ಹಾಗೇ ಟಿ20 ಕ್ರಿಕೆಟ್​​ನಲ್ಲಿ ಅದ್ಭುತ ಪ್ರದರ್ಶನ ತೋರಿದ ಫಿನ್​​​​ ಅಲೆನ್​ರನ್ನು ಕೂಡ, ತಂಡದಿಂದ ಹೊರಗಿಡಲಾಗಿದೆ.

2014 ಮತ್ತು 2016ರ ಟಿ20 ವಿಶ್ವಕಪ್‌ನಲ್ಲಿ ಹಾಂಗ್​​ಕಾಂಗ್ ತಂಡವನ್ನ ಪ್ರತಿನಿಧಿಸಿದ್ದ ಮಾರ್ಕ್ ಚಾಪ್​​​​​​ಮನ್​ ತಂಡದಲ್ಲಿ ಸ್ಥಾನ ಪಡೆದು ಅಚ್ಚರಿ ಮೂಡಿಸಿದ್ದಾರೆ. ಕೇವಲ ನಾಲ್ಕು ಟಿ20 ಪಂದ್ಯಗಳನ್ನಷ್ಟೇ ಆಡಿರುವ ಟಾಡ್ ಆಸ್ಟಲ್ ಕೂಡ ಚಾನ್ಸ್​ ಪಡೆದುಕೊಂಡಿದ್ದಾರೆ.
ಫಾಸ್ಟ್​ ಬೌಲಿಂಗ್​ ವಿಭಾಗದಲ್ಲಿ ಸ್ಟ್ಯಾಂಡ್​ ಬೈ ಸೇರಿ 6 ಬೌಲರ್​ಗಳು ಸ್ಥಾನ ಪಡೆದುಕೊಂಡಿದ್ರೆ, ಸ್ಪಿನ್​ ಕೋಟಾದಲ್ಲಿ ಇಬ್ಬರು ಕಾಣಿಸಿಕೊಂಡಿದ್ದಾರೆ. ಆಲ್​​ರೌಂಡರ್​ ಕೋಟಾದಲ್ಲಿ ಇಬ್ಬರಿಗೆ ಚಾನ್ಸ್​ ಸಿಕ್ಕಿದೆ. ಇನ್ನು ಆರಂಭಿಕರಾಗಿ ಡೆವೋನ್​​ ಕಾನ್ವೆ, ಮಾರ್ಟಿನ್ ಗಪ್ಟಿಲ್ ಕಣಕ್ಕಿಳಿಯೋದು ಕನ್ಫರ್ಮ್​ ಆಗಿದೆ.

ವೇಗದ ಬೌಲರ್ ಆಡಮ್ ಮಿಲ್ನೆ ಅವರನ್ನ ಸ್ಟ್ಯಾಂಡ್‌ಬೈ ಎಂದು ಹೆಸರಿಸಲಾಗಿದೆ. ಇದೇ ತಂಡವು ಈ ವರ್ಷಾಂತ್ಯದಲ್ಲಿ ಮೂರು ಟಿ20 ಪಂದ್ಯಗಳಿಗಾಗಿ ಭಾರತ ಪ್ರವಾಸ ಕೈಗೊಳ್ಳಲಿದೆ.

ಟಿ20 ವಿಶ್ವಕಪ್ ಮತ್ತು ಭಾರತ ಟಿ20ಗಾಗಿ ಕಿವೀಸ್ ತಂಡ:

ಕೇನ್ ವಿಲಿಯಮ್ಸನ್ (ನಾಯಕ), ಗ್ಲೆನ್ ಫಿಲಿಪ್ಸ್, ಮಾರ್ಟಿನ್ ಗಪ್ಟಿಲ್, ಡೆವೋನ್​​ ಕಾನ್ವೆ, ಮಾರ್ಕ್ ಚಾಂಪ್​​ಮನ್​, ಜಿಮ್ಮಿ ನೀಶಮ್, ಡಾರ್ಲಿ ಮಿಚೆಲ್, ಟಿಮ್​ ಸೀಫರ್ಟ್​​ (ಕೀಪರ್​​), ಮಿಚೆಲ್​​ ಸ್ಯಾಂಟ್ನರ್​, ಕೈಲ್ ಜೇಮೀಸನ್, ಟ್ರೆಂಟ್ ಬೌಲ್ಟ್, ಲಾಕಿ ಫರ್ಗುಸನ್, ಇಶ್ ಸೋಧಿ, ಟಿಮ್ ಸೌಥಿ, ಆಡಮ್ ಮಿಲ್ನೆ (ಸ್ಟ್ಯಾಂಡ್​ಬೈ, ಸದ್ಯ ಅವರು ಇಂಜುರಿ)

Source: newsfirstlive.com Source link