ಬೂಮ್ರಾ ಕಮ್​​ಬ್ಯಾಕ್​ ಮಾಡಿದ್ದಾರೆ ಅನ್ನೋದಕ್ಕೆ ಕೆಎಲ್​​ ರಾಹುಲ್​ ಕಿಡಿ

ಬೂಮ್ರಾ ಕಮ್​​ಬ್ಯಾಕ್​ ಮಾಡಿದ್ದಾರೆ ಅನ್ನೋದಕ್ಕೆ ಕೆಎಲ್​​ ರಾಹುಲ್​ ಕಿಡಿ

ಟೀಮ್​ ಇಂಡಿಯಾಗೆ ಕಾಲಿಟ್ಟಾಗಿನಿಂದ ಈ ವೇಗಿ ಅದ್ಭುತ ಪ್ರದರ್ಶನ ತೋರುತ್ತಲೇ ಬಂದಿದ್ದ. ಅದ್ಯಾಕೋ ಆಸ್ಟ್ರೇಲಿಯಾ-ಇಂಗ್ಲೆಂಡ್, ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​​ ಫೈನಲ್​​​ನಲ್ಲೂ ಮಂಕಾದ. ಇದು ಆತನ ಭವಿಷ್ಯಕ್ಕೆ ಕುತ್ತು ತಂದಿತ್ತು ಎಂದೇ ಹೇಳಲಾಗಿತ್ತು. ಇದೀಗ ಭರ್ಜರಿ ಕಮ್​​ಬ್ಯಾಕ್​ ಮಾಡಿದ್ದು, ಟೀಕಾಕಾರರಿಗೆ ಉತ್ತರ ನೀಡಿದ್ದಾರೆ.

blank

ಟೀಮ್​ ಇಂಡಿಯಾ ವೇಗಿ ಜಸ್​ಪ್ರಿತ್​ ಬೂಮ್ರಾ, ನಿಖರ​ ಯಾರ್ಕರ್ – ​ಕರಾರುವಕ್​ ದಾಳಿಯಿಂದಲೇ ಬ್ಯಾಟ್ಸ್​​ಮನ್​ಗಳ ನಿದ್ದೆಗೆಡಿಸುತ್ತಿದ್ದ. ಆದರೆ ಇತ್ತೀಚಿನ ಸತತ ವೈಫಲ್ಯ ಆತನ ಭವಿಷ್ಯಕ್ಕೆ ಕುತ್ತು ತರುವಂತೆ ಮಾಡಿತ್ತು. ಇದು ಸಾಲದೆಂಬಂತೆ ಬೂಮ್ರಾರನ್ನ, ತಂಡದಿಂದ ಕೈ ಬಿಡುವಂತೆ ಟೀಕಾಕಾರರು ಹೇಳಿದ್ರು. ಜೊತೆಗೆ ಬೂಮ್ರಾ ಫಾರ್ಮ್​​ಗೆ ಮರಳೋದು ಕಷ್ಟ ಅಂದವರೇ ಹೆಚ್ಚು. ಇದೀಗ ಯಾರ್ಕರ್ ಕಿಂಗ್​ ಭರ್ಜರಿ ಕಮ್​​​ಬ್ಯಾಕ್​ ಮಾಡಿದ್ದು, ಅದ್ಭುತ ಪ್ರದರ್ಶನದ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

ಆಸ್ಟ್ರೇಲಿಯಾ – ಇಂಗ್ಲೆಂಡ್​ ಸರಣಿಯಲ್ಲಿ ಬೂಮ್ರಾ ನೀಡಿದ್ದು ಸಾಧಾರಣ ಪ್ರದರ್ಶನ. ಆ ಬಳಿಕ ನಡೆದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ ಫೈನಲ್​​​ನಲ್ಲೂ ವಿಕೆಟ್​​ ಲೆಸ್​ ಆಗಿದ್ರು. ಹೀಗಾಗಿ ಬೂಮ್ರಾರನ್ನ ಮೊದಲ​ ಟೆಸ್ಟ್​​ಗೆ ಆಯ್ಕೆ ಮಾಡಿದ್ದಕ್ಕೆ, ಮ್ಯಾನೇಜ್​​​ಮೆಂಟ್​​ ವಿರುದ್ಧ ಟೀಕೆಗಳು ಕೇಳಿ ಬಂದಿದ್ವು. ಆದರೀಗ ನಿನ್ನೆ ಮುಗಿದ​ ಟೆಸ್ಟ್​​​​​​​​​​ನಲ್ಲಿ 9 ವಿಕೆಟ್​ ಪಡೆಯೋ ಮೂಲಕ ಭರ್ಜರಿ ಬೌನ್ಸ್​​ಬ್ಯಾಕ್​​ ಮಾಡಿದ್ದು, ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ. ಇದೀಗ ಕಮ್​​​ಬ್ಯಾಕ್​ಗೆ ಕಾರಣ ಏನು ಅನ್ನೋದನ್ನೂ ಅವರೇ ಹೇಳಿದ್ದಾರೆ.

blank

‘ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​​ ಫೈನಲ್​ ವೈಫಲ್ಯದ ನಂತರ ಮಾನಸಿಕ ಹೊಂದಾಣಿಕೆ ಮಾಡಿಕೊಂಡೆ. ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಪಂದ್ಯದ ಕ್ಷಣವನ್ನ ಎಂಜಾಯ್​ ಮಾಡೋದಕ್ಕೆ ಪ್ರಯತ್ನಪಟ್ಟೆ. ಹಾಗಂತ ಇಂಗ್ಲೆಂಡ್​ ಟೆಸ್ಟ್​​ಗಾಗಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಕೇವಲ ನನ್ನ ಆಟದ ಕೌಶಲ್ಯ ಮತ್ತು ಟೆಕ್ನಿಕಲ್​ಗಳನ್ನು ಇಂಪ್ರೂವ್​ ಮಾಡಿಕೊಳ್ಳುವತ್ತ ಚಿತ್ತ ಹರಿಸಿದೆ’
ಈಗ ಬೂಮ್ರಾ ಕಮ್​​ಬ್ಯಾಕ್​ ಮಾಡಿದ್ದಾರೆ ಅಂತ ಎಲ್ಲರೂ ಹೇಳ್ತಿದ್ದಾರೆ. ಆದ್ರೆ, ತಂಡದ ಸಹ ಆಟಗಾರ ಕೆ.ಎಲ್​ ರಾಹುಲ್ ಮಾತ್ರ ಇದು ಬೂಮ್ರಾ ಬೌನ್ಸ್​ಬ್ಯಾಕ್​ ಅಲ್ಲ.. ಅವರು ಎಂದಿಗೂ ನಮ್ಮ ತಂಡದ ನಂ1 ಬೌಲರ್​ ಎಂದು ಹೇಳಿದ್ದಾರೆ.

ಈಗ ಬೂಮ್ರಾ ಕಮ್​​ಬ್ಯಾಕ್​ ಮಾಡಿದ್ದಾರೆ ಅಂತ ಎಲ್ಲರೂ ಹೇಳ್ತಿದ್ದಾರೆ. ಆದ್ರೆ, ತಂಡದ ಸಹ ಆಟಗಾರ ಕೆ.ಎಲ್​ ರಾಹುಲ್ ಮಾತ್ರ ಇದು ಬೂಮ್ರಾ ಬೌನ್ಸ್​ಬ್ಯಾಕ್​ ಅಲ್ಲ.. ಅವರು ಎಂದಿಗೂ ನಮ್ಮ ತಂಡದ ನಂ1 ಬೌಲರ್​ ಎಂದು ಹೇಳಿದ್ದಾರೆ.

blank

‘ಅದ್ಯಾಕೋ ಗೊತ್ತಿಲ್ಲ ಎಲ್ಲರೂ ಜಸ್​​ಪ್ರಿತ್​ ಬೂಮ್ರಾ ಕಮ್​​​ಬ್ಯಾಕ್​ ಮಾಡಿದ್ದಾರೆ ಅಂತಿದ್ದಾರೆ. ಆದರೆ ಬೂಮ್ರಾ ಎಲ್ಲಾ ಸಮಯ, ಎಲ್ಲಾ ಪಂದ್ಯ, ಎಲ್ಲಾ ಕಂಡೀಷನ್​​ನಲ್ಲೂ ಸಾಮರ್ಥ್ಯ ಪ್ರೂವ್​ ಮಾಡ್ತಿದ್ದು, ನಮಗೆ ಅವರು ನಂಬರ್​​​ 01​ ಬೌಲರ್​ ಆಗಿದ್ದಾರೆ. ಸದ್ಯ ಅವರ ಪ್ರದರ್ಶನ ಖುಷಿ ಹೆಚ್ಚಿಸಿದೆ. ಟೆಸ್ಟ್​ ಕ್ರಿಕೆಟ್​ ಆಡಿದಾಗನಿಂದಲೂ ಅವರು ನಮಗೆ ಮ್ಯಾಚ್​​​ ವಿನ್ನರ್​’

ಬೂಮ್ರಾ ಹೇಗೆ ಕಮ್​ಬ್ಯಾಕ್​ ಮಾಡಿದ್ರು, ಅವರು ನಂಬರ್​ ಒನ್​ ಬೌಲರ್​ ಹೌದೋ ಅಲ್ವೋ ಅನ್ನೋದು ಚರ್ಚೆಯ ವಿಚಾರವಷ್ಟೇ. ಇದರ ಹೊರತಾಗಿ ನಾಟಿಂಗ್​ಹ್ಯಾಮ್​ ಟೆಸ್ಟ್​ನಲ್ಲಿ ಯಾರ್ಕರ್​​ ಸ್ಪೆಷಲಿಸ್ಟ್​ ನೀಡಿರೋ ಪ್ರದರ್ಶನ ಭಾರತದ ಬಲವನ್ನಂತೂ ಹೆಚ್ಚಿಸಿದೆ. ಸರಣಿಯ ಮುಂದಿನ ಪಂದ್ಯದಲ್ಲೂ ಇದೇ ಸ್ಥಿರತೆಯನ್ನ ಕಾಯ್ದುಕೊಳ್ಳಲಿ ಅನ್ನೋದಷ್ಟೇ ಎಲ್ಲರ ಆಶಯವಾಗಿದೆ.

Source: newsfirstlive.com Source link