ಲಂಡನ್​​ ತಲುಪಿದ ಕೊಹ್ಲಿ ಬಾಯ್ಸ್​- ಕ್ವಾರಂಟೀನ್​​​ನಲ್ಲೇ ಉಳಿದ ಪೃಥ್ವಿ, ಸೂರ್ಯ ಕುಮಾರ್

ಲಂಡನ್​​ ತಲುಪಿದ ಕೊಹ್ಲಿ ಬಾಯ್ಸ್​- ಕ್ವಾರಂಟೀನ್​​​ನಲ್ಲೇ ಉಳಿದ ಪೃಥ್ವಿ, ಸೂರ್ಯ ಕುಮಾರ್

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್​ ಪಂದ್ಯ ಡ್ರಾನಲ್ಲಿ ಮುಕ್ತಾಯವಾದ ಬೆನ್ನಲ್ಲೆ, ಟೀಮ್ ಇಂಡಿಯಾ 2ನೇ ಟೆಸ್ಟ್​ಗೆ ಸಿದ್ಧಗೊಳ್ತಿದೆ. ಸದ್ಯ ನಾಟಿಂಗ್​​ಹ್ಯಾಮ್​​ ತೊರೆದಿರುವ ವಿರಾಟ್​ ಬಳಗ, ಲಂಡನ್​ಗೆ ಪ್ರಯಾಣ ಬೆಳೆಸಿ ಲಾರ್ಡ್ಸ್​ ಅಂಗಳಕ್ಕೆ ತಲುಪಿದೆ. ಆದರೆ ಇಂಗ್ಲೆಂಡ್​ ಪ್ರವಾಸ ಕೈಗೊಂಡಿರುವ ಪೃಥ್ವಿ ಶಾ ಮತ್ತು ಸೂರ್ಯಕುಮಾರ್ ಯಾದವ್​, ನಾಟಿಂಗ್​​ಹ್ಯಾಮ್​​​​ನಲ್ಲೇ ತಂಗಲಿದ್ದು, ಕ್ವಾರಂಟೀನ್​ ಪೂರೈಸಲಿದ್ದಾರೆ. ಇನ್ನು ಆಗಸ್ಟ್​ 12ರಿಂದ ಕ್ರಿಕೆಟ್​ ಕಾಶಿ ಲಾರ್ಡ್ಸ್​ನಲ್ಲಿ 2ನೇ ಟೆಸ್ಟ್​ ಪಂದ್ಯ ನಡೆಯಲಿದ್ದು, ಇಂದು ಮತ್ತು ನಾಳೆ ಟೀಮ್​ ಇಂಡಿಯಾ ಭರ್ಜರಿ ಅಭ್ಯಾಸ ನಡೆಸಲಿದೆ.

ಲಾರ್ಡ್ಸ್​ ಅಂಗಳಕ್ಕೆ ತೆರಳುವ ಮುನ್ನ ಟೀಮ್​ ಇಂಡಿಯಾದ ಎಲ್ಲ ಆಟಗಾರರಿಗೆ, ಕೊರೊನಾ ಟೆಸ್ಟ್ ನಡೆಸಲಾಗಿದೆ. ಪೃಥ್ವಿ ಶಾ ಹಾಗೂ ಸೂರ್ಯಕುಮಾರ್ ಯಾದವ್ ಕ್ವಾರಂಟೀನ್​ ಆಗಸ್ಟ್ 13ಕ್ಕೆ ಮುಕ್ತಾಯಗೊಳ್ಳಲಿದೆ. ಹಾಗಾಗಿ ಮುಂದಿನ ಪಂದ್ಯಕ್ಕೆ ಅಲಭ್ಯರಾಗಲಿದ್ದು, ಮೂರನೇ ಟೆಸ್ಟ್​​ ಪಂದ್ಯದ ಸೆಲೆಕ್ಷನ್ಸ್​ಗೆ ಲಭ್ಯರಾಗಲಿದ್ದಾರೆ.

Source: newsfirstlive.com Source link