ಫೈಟರ್ ವಿವೇಕ್​​ ​​ಸಾವು ಪ್ರಕರಣ; ನಿರ್ಮಾಪಕ ಗುರುದೇಶ್​​ ಪಾಂಡೆ, ಫರ್ನಾಂಡೀಸ್​​​​ ನಾಪತ್ತೆ

ಫೈಟರ್ ವಿವೇಕ್​​ ​​ಸಾವು ಪ್ರಕರಣ; ನಿರ್ಮಾಪಕ ಗುರುದೇಶ್​​ ಪಾಂಡೆ, ಫರ್ನಾಂಡೀಸ್​​​​ ನಾಪತ್ತೆ

ಲವ್​ ಯು ರಚ್ಚು’ ಚಿತ್ರದ ಶೂಟಿಂಗ್ ವೇಳೆ ಫೈಟರ್​​ ಸಾವು ಪ್ರಕರಣ ಸಂಬಂಧ ಬಿಡದಿ ಪೊಲೀಸರು ಈಗ ಐವರು ಆರೋಪಿಗಳ ವಿರುದ್ಧ ಎಫ್​​ಐಆರ್​​ ದಾಖಲಿಸಿದ್ದಾರೆ. ಸಿನಿಮಾ ನಿರ್ದೇಶಕ ಶಂಕರ್ ರಾಜ್ A1, ನಿರ್ಮಾಪಕ ಗುರುದೇಶ ಪಾಂಡೆ A2, ಸಾಹಸ ನಿರ್ದೇಶಕ ವಿನೋದ್ A3, ಸಿನಿಮಾ ಇನ್​​​ಚಾರ್ಜ್​​ ಪರ್ನಾಂಡೀಸ್ A4, ಕ್ರೇನ್ ಆಪರೇಟರ್ ಮಹೇದವರ್ A5 ವಿರುದ್ಧ ಎಫ್​​ಐಆರ್​​ ಮಾಡಲಾಗಿದೆ.

ಪ್ರಕರಣ ಸಂಬಂಧ ಪೊಲೀಸರು ಇನ್ನೇನು ವಿಚಾರಣೆ ಶುರು ಮಾಡಬೇಕು ಎನ್ನುವಾಗಲೇ ಪ್ರಮುಖ ಆರೋಪಿಗಳಾದ ನಿರ್ಮಾಪಕ ಗುರುದೇಶ್​​ ಪಾಂಡೆ ಮತ್ತು ಪ್ರೊಡಕ್ಷನ್ ಮ್ಯಾನೇಜರ್​​​ ಫರ್ನಾಂಡೀಸ್​​ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ‘ಲವ್​ ಯು ರಚ್ಚು’ ಚಿತ್ರದ ಶೂಟಿಂಗ್​​ ವೇಳೆ ಫೈಟರ್​​ ಸಾವು ಕೇಸ್​​​; ಐವರು ಆರೋಪಿಗಳ ವಿರುದ್ಧ FIR

11 ಗಂಟೆಗೆ ವಿದ್ಯುತ್​​ ಸ್ಪರ್ಶದಿಂದ ಸಾವನ್ನಪ್ಪಿದ ಫೈಟರ್ ಅಸಿಸ್ಟೆಂಟ್ ವಿವೇಕ್ ಮರಣೋತ್ತರ ಪರೀಕ್ಷೆ ನಡೆಯಲಿದೆ. ಬಳಿಕ 12 ಗಂಟೆ ವೇಳೆ ಪೊಲೀಸರು ಪ್ರಕರಣದ ಆರೋಪಿಗಳನ್ನು ಕೋರ್ಟ್​ ಮುಂದೆ ಹಾಜರು ಮಾಡಲು ಮುಂದಾಗಿದ್ದಾರೆ. ಆದರೀಗ, ಪೊಲೀಸರು ಮೂವರನ್ನು ಬಂಧಿಸಿದ್ದು, ನಾಪತ್ತೆಯಾದ ಇಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

Source: newsfirstlive.com Source link