ಕೋಟ್ಯಂತರ ಬೆಲೆ ಬಾಳುವ 80 ಕೆಜಿ ತೂಕದ ತಿಮಿಂಗಿಲದ ವಾಂತಿ ವಶ -ಐವರು ಅರೆಸ್ಟ್​

ಕೋಟ್ಯಂತರ ಬೆಲೆ ಬಾಳುವ 80 ಕೆಜಿ ತೂಕದ ತಿಮಿಂಗಿಲದ ವಾಂತಿ ವಶ -ಐವರು ಅರೆಸ್ಟ್​

ಬೆಂಗಳೂರು: ಕೋಟ್ಯಂತರ ಬೆಲೆ ಬಾಳುವ ತಿಮಿಂಗಿಲದ ವಾಂತಿ (ಆ್ಯಂಬರ್ ಗ್ರಿಸ್) ಸೇರಿದಂತೆ ಪುರಾತನ ವಸ್ತುಗಳನ್ನ ಅಕ್ರಮವಾಗಿ ಮಾರಾಟಕ್ಕೆ ಯತ್ನ ಮಾಡುತ್ತಿದ್ದ ಐವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧನ ಮಾಡಿದ್ದಾರೆ.

ಮಜೀಬ್ ಪಾಶಾ (48), ಮಹಮ್ಮದ್ ಮುನ್ನಾ (45), ಗುಲಾಬ್ ಚಂದ್ (40) ಸಂತೋಷ್ (31), ಜಗನ್ನಾಥಾಚಾರ್ (52) ಬಂಧಿತ ಆರೋಪಿಗಳಾಗಿದ್ದಾರೆ. ಬರೋಬ್ಬರಿ 80 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳ ಸಹಿತ ಆರೋಪಿಗಳ ಬಂಧನ ಮಾಡಲಾಗಿದೆ.

blank

ಬಾಗಲಗುಂಟೆ ಬಳಿಯ ಕಟ್ಟಡವೊಂದರಲ್ಲಿ ಪುರಾತನ ವಸ್ತುಗಳನ್ನು ಸಂಗ್ರಹಿಸಲಾಗಿದೆ ಎಂದು ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಆರೋಪಿಗಳ ಬಳಿ 80 ಕೆಜಿ ಆ್ಯಂಬರ್​ ಗ್ರಿಸ್​ ಪತ್ತೆಯಾಗಿದೆ. ಅಲ್ಲದೇ ಬ್ರಿಟಿಷ್ ಈಸ್ಟ್ ಇಂಡಿಯಾ ಕಾಲದ ರೆಡ್ ಮರ್ಕ್ಯೂರಿ ಬಾಟಲ್, ಸ್ಟೀಮ್ ಫ್ಯಾನ್ ಸೇರಿದಂತೆ ಹಲವು ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

blank

Source: newsfirstlive.com Source link