ಒಬ್ಬಳೇ ಮಹಿಳಾ ಅಥ್ಲೀಟ್, ಪುರುಷೊಂದಿಗೆ ಕ್ರೀಡಾಕೂಟಕ್ಕೆ ಕಳಿಸಲ್ಲ

ಚೆನ್ನೈ: ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಕಡೈಯಾಲುಮೂಡು ಪಟ್ಟಣದ ಪ್ರತಿಭಾನ್ವಿತ ಅಥ್ಲೀಟ್, 18 ವರ್ಷದ ಸಮೀಹಾ ಬಾರ್ವಿನ್ ಅವರನ್ನು ವಿಚಿತ್ರ ಕಾರಣಕ್ಕೆ ಭಾರತದ ಅಥ್ಲೆಟಿಕ್ಸ್ ತಂಡದಿಂದ ಕೈಬಿಡಲಾಗಿದೆ.

ಆ.23ರಿಂದ ಪೋಲೆಂಡ್‍ನಲ್ಲಿ 4ನೇ ವಿಶ್ವ ಕಿವುಡರ ಅಥ್ಲೆಟಿಕ್ಸ್ ನಡೆಯಲಿದೆ. 4ನೇ ವಿಶ್ವ ಕಿವುಡರ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಲಿರುವ ತಂಡದ ಏಕೈಕ ವನಿತಾ ಅಥ್ಲೀಟ್ ಎಂಬ ಕಾರಣಕ್ಕೆ ಅಥ್ಲೆಟಿಕ್ಸ್ ತಂಡದಿಂದ ಕೈಬಿಡಲು ಕಾರಣವಾಗಿದೆ. ತಂಡಕ್ಕೆ ಐದು ಮಂದಿ ಪುರುಷ ಅಥ್ಲೀಟ್‍ಗಳೂ ಆಯ್ಕೆಯಾಗಿದ್ದಾರೆ. ಆದರೆ ಇವರ ಜೊತೆಗೆ ಒಬ್ಬಳೆ ಮಹಿಳಾ ಕ್ರೀಡಾಪಟುವನ್ನು ಕಳುಹಿಸಲು ಸಾಧ್ಯವಿಲ್ಲ ಎಂದು ಭಾರತ ಕ್ರೀಡಾ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ.

ಅರ್ಹತಾ ಪರೀಕ್ಷೆಯಲ್ಲಿ ಯಶಸ್ವಿಯಾದ ಏಕೈಕ ಮಹಿಳಾ ಕ್ರೀಡಾಳಾಗಿರುವ ಸಮೀಹಾ, ಲಾಂಗ್ ಜಂಪ್ ಮತ್ತು 100 ಮೀ. ರೇಸ್‍ನಲ್ಲಿ ಪ್ರತಿನಿಧಿಸಬೇಕಿತ್ತು. 2017ರ ಜಾಖರ್ಂಡ್‍ನಲ್ಲಿ ನಡೆದ ರಾಷ್ಟ್ರಮಟ್ಟದ ಚಾಂಪಿಯನ್‍ಶಿಪ್, 2018 ಮತ್ತು 2019ರಲ್ಲಿ ನಡೆದ ಕ್ರೀಡಾಕೂಟದಲ್ಲಿ ಸಮೀಹಾ ಚಿನ್ನದ ಪದಕವನ್ನು ಪಡೆದುಕೊಂಡಿದ್ದರು. ಇದನ್ನೂ ಓದಿ: ಕೆಜಿಎಫ್ ನಟಿ ಮೌನಿ ರಾಯ್ ಹಾಟ್ ಲುಕ್‍ಗೆ ನೆಟ್ಟಿಗರು ಫಿದಾ

ಸಮೀಹಾ ಬಾರ್ವಿನ್ ಜೊತೆಗೆ ಒಬ್ಬ ಸಹಾಯಕರನ್ನು ಕಳುಹಿಸಲು ಹಣದ ಕೊರತೆಯಿದೆ. ಸಣ್ಣ ಕಾಫಿ ಶಾಪ್ ನಡೆಸುತ್ತಿರುವ ಸಮೀಹಾ ಕುಟುಂಬ ತೀವ್ರ ಆರ್ಥಿಕ ಸಮಸ್ಯೆಯಲ್ಲಿದೆ. ಆಕೆಯ ಪ್ರವಾಸದ ಖರ್ಚನ್ನು ಕುಟುಂಬವೇ ಭರಿಸುವುದು ಕಷ್ಟ ಎಂದು ಕನ್ಯಾಕುಮಾರಿ ಸಂಸದ ವಿ. ವಿಜಯ್‍ಕುಮಾರ್ ಅವರು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರಿಗೆ ಜುಲೈ 26ರಂದು ಪತ್ರ ಬರೆದಿದ್ದರು. ಅವರಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಭಾರತದ ತಂಡ ಆ. 14ರಂದು ಪೆÇೀಲೆಂಡ್‍ಗೆ ತೆರಳಲಿದೆ.

Source: publictv.in Source link