ಲಾರ್ಡ್ಸ್​​​ ಅಂಗಳದಲ್ಲಿ 2ನೇ ಟೆಸ್ಟ್ -ಗೆಲುವಿಗಾಗಿ ಭಾರತ ಮಾಡಬೇಕಿದೆ ವರ್ಕೌಟ್​​

ಲಾರ್ಡ್ಸ್​​​ ಅಂಗಳದಲ್ಲಿ 2ನೇ ಟೆಸ್ಟ್ -ಗೆಲುವಿಗಾಗಿ ಭಾರತ ಮಾಡಬೇಕಿದೆ ವರ್ಕೌಟ್​​

ನಾಟಿಂಗ್​ಹ್ಯಾಮ್​ ಟೆಸ್ಟ್​​ನಲ್ಲಿ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ, 2ನೇ ಟೆಸ್ಟ್​​ಗೂ ಮುನ್ನ ಭಾರತ ಕೆಲ ಏರಿಯಾಗಳ ಮೇಲೆ ವರ್ಕೌಟ್​ ಮಾಡಲೇಬೇಕಿದೆ. ಈ ಹಿನ್ನಡೆಗಳನ್ನ ತಿದ್ದಿಕೊಳ್ಳದಿದ್ರೆ, ಲಾರ್ಡ್ಸ್​​ ಅಂಗಳದಲ್ಲಿ ತಂಡಕ್ಕೆ ಹಿನ್ನಡೆಯಾಗೋದು ಖಚಿತ. ಯಾವೆಲ್ಲಾ ಅಂಶಗಳು ಹಿನ್ನಡೆಯಾಗ್ತಿದೆ ಅನ್ನೋದರ ಒಂದು ರಿಪೋರ್ಟ್​ ಇಲ್ಲಿದೆ.

ಇಂಡೋ – ಇಂಗ್ಲೆಂಡ್​​ ನಡುವಿನ ಮೊದಲ ಟೆಸ್ಟ್​​ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿದೆ. ಇದೀಗ ಎಲ್ಲರ ಚಿತ್ತ ನಾಟಿಂಗ್​ಹ್ಯಾಮ್​ನಿಂದ ಲಾರ್ಡ್ಸ್​ ಅಂಗಳಕ್ಕೆ ಶಿಫ್ಟ್​​ ಆಗಿದೆ. ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಕ್ರಿಕೆಟ್​ ಕಾಶಿಯಲ್ಲಿ ಗೆಲ್ಲಬೇಕಂದ್ರೆ, ವೀಕ್​​ನೆಸ್​ಗಳ ಮೇಲೆ ಭಾರತ ವರ್ಕೌಟ್​ ಮಾಡಬೇಕಿದೆ.

blank

ಆರಂಭಿಕರಿಂದ ಬೇಕು ಕಿಕ್​ಸ್ಟಾರ್ಟ್​, ಪುಟಿದೇಳಬೇಕು ಮಿಡಲ್​ ಆರ್ಡರ್​​!
ಮೊದಲ ಟೆಸ್ಟ್​ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್​ – ರಾಹುಲ್​ ಭರವಸೆಯ ಪ್ರದರ್ಶನ ನೀಡಿದ್ದಾರೆ. ಇದೇ ಪ್ರದರ್ಶನ 2ನೇ ಟೆಸ್ಟ್​ನಲ್ಲೂ ಮರುಕಳಿಸಬೇಕು. ಇನ್ನು ಸತತ ವೈಫಲ್ಯ ಅನುಭವಿಸ್ತಾ ಇರೋ ಮಿಡಲ್​ ಆರ್ಡರ್​ ಪುಟಿದೇಳಲೇಬೇಕಿದೆ. ಜೊತೆಗೆ ಬಿಗ್​ ಸ್ಟಾರ್​​ಗಳು ಕ್ರಿಸ್​ನಲ್ಲಿ ಹೆಚ್ಚು ಹೊತ್ತು ನಿಂತು, ಬಿಗ್​ ಇನ್ನಿಂಗ್ಸ್​ ಕಟ್ಟಬೇಕಿದೆ. ಬಿಗ್​ ಪಾರ್ಟನರ್​​ಶಿಪ್​ಗಳಂತೂ ಅಗತ್ಯವಾಗಿ ಬೇಕಿದೆ.
ತಾಳ್ಮೆಯ ಹಾಗೂ ಎಚ್ಚರಿಕೆಯ ಆಟದ ಅಗತ್ಯತೆ ತಂಡಕ್ಕೆ ಹೆಚ್ಚಿದೆ. ನಾಟಿಂಗ್​ಹ್ಯಾಮ್​ ಟೆಸ್ಟ್​ನಲ್ಲಿ ರಾಹುಲ್​, ರೋಹಿತ್​, ಜಡೇಜಾ ಈ ಮೂವರು ತಾಳ್ಮೆಯಿಂದ ಆಡಿದ್ರು ನಿಜ. ಆದ್ರೆ, ಇವರನ್ನೂ ಸೇರಿದಂತೆ ಭಾರತದ ಎಲ್ಲಾ ಆಟಗಾರರು ಔಟ್​ ಆಗಿದ್ದು, ಕೆಟ್ಟ ಹೊಡೆತಗಳಿಗೆ ಕೈ ಹಾಕಿ. ಈ ಬೇಜವ್ಧಾರಿಯುತ ನಡೆಯೇ ಗೆಲುವಿಗೆ ಮುಳುವಾಗೋ ಸಾಧ್ಯತೆಯಿದೆ.

blank

ಇದೆಲ್ಲದರ ಜೊತೆಗೆ ತಂಡವನ್ನ ಕಾಡಿದ್ದು ಜೋ ರೂಟ್​​..! ಸಾಲಿಡ್​​ ಫಾರ್ಮ್​ನಲ್ಲಿರೋ ಇಂಗ್ಲೆಂಡ್​ ನಾಯಕನನ್ನ ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದ್ರೆ ಭಾರತದ ಗೆಲುವಿನ ಹಾದಿ ಸುಗಮವಾಗಲಿದೆ. ಇನ್ನು ಜೇಮ್ಸ್​ ಆ್ಯಂಡರ್ಸನ್​, ಸ್ಟುವರ್ಟ್​​ ಬ್ರಾಡ್​ರಂತಹ ಕ್ಲಾಸ್​ ಬೌಲರ್ಸ್​, ಯುವ ಪ್ರತಿಭೆ ಒಲಿ ರಾಬಿನ್ಸನ್​ರ ಕರಾರುವಕ್​ ದಾಳಿಯನ್ನ ಸಮರ್ಥವಾಗಿ ಎದುರಿಸಬೇಕಿದೆ. ಈ ಎಲ್ಲಾ ವೀಕ್​ನೆಸ್​​ಗಳ ಮೇಲೆ ವರ್ಕೌಟ್​​ ಮಾಡಿದ್ದೇ ಆದ್ರೆ, ಕೊಹ್ಲಿ ಪಡೆಗೆ ಗೆಲುವಿನ ಹಾದಿ ಸಲೀಸಾಗಲಿದೆ.

Source: newsfirstlive.com Source link