ಚೆನ್ನೈಗೆ ತಲಾ ಧೋನಿ ಎಂಟ್ರಿ- ಇಂದಿನಿಂದಲೇ ಸಿಎಸ್​ಕೆ ಕ್ಯಾಪ್ಟನ್ ಸಮರಾಭ್ಯಾಸ

ಚೆನ್ನೈಗೆ ತಲಾ ಧೋನಿ ಎಂಟ್ರಿ- ಇಂದಿನಿಂದಲೇ ಸಿಎಸ್​ಕೆ ಕ್ಯಾಪ್ಟನ್ ಸಮರಾಭ್ಯಾಸ

ಎರಡನೇ ಹಂತದ 14ನೇ ಆವೃತ್ತಿಯ ಐಪಿಎಲ್​​​ ಮುಂದಿನ ತಿಂಗಳು ಸೆಪ್ಟೆಂಬರ್​ 19ರಿಂದ ಮರು ಆಯೋಜನೆಯಾಗಲಿದೆ. ದ್ವಿತೀಯಾರ್ಧ ಭಾಗ ಯುಎಇನಲ್ಲಿ ನಡೆಯಲಿದ್ದು, ಬಿಸಿಸಿಐ ಅಂತಿಮ ಹಂತದ ಸಿದ್ಧತೆ ಮಾಡಿಕೊಳ್ತಿದೆ. ಇತ್ತ ಫ್ರಾಂಚೈಸಿಗಳು ಕೂಡ ಯುಎಇಗೆ ಹಾರೋಕೆ ಪ್ರಿಪರೇಷನ್​ ಕೂಡ ಮಾಡಿಕೊಳ್ತಿವೆ. ಸದ್ಯ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಕೂಡ ತಯಾರಿ ಮಾಡಿಕೊಳ್ತಿದೆ. ಸಿಎಸ್​ಕೆ ತಂಡದ ಕ್ಯಾಪ್ಟನ್​ ಎಂ.ಎಸ್​.ಧೋನಿ, ಚೆನ್ನೈಗೆ ಬಂದಿಳಿದಿದ್ದಾರೆ. ಸದ್ಯ ಚೆನ್ನೈ ಕ್ಯಾಂಪ್​ ಸೇರಿರುವ ಧೋನಿ, ಆಗಸ್ಟ್​ 13ರಂದು ದುಬೈ ಫ್ಲೈಟ್​​ ಹತ್ತೋಕೆ ಸಿದ್ಧತೆ ನಡೆಸಿದ್ದಾರೆ.

ಈ ವರ್ಷ ಏಪ್ರಿಲ್​​ನಲ್ಲಿ ಆರಂಭವಾದ ಐಪಿಎಲ್​​​ಗಾಗಿ ಒಂದು ತಿಂಗಳ ಮೊದಲೇ ಅಭ್ಯಾಸ ಶಿಬಿರ ಆರಂಭಿಸಿದ್ದ ಧೋನಿ, ಇದೀಗ ಮತ್ತೆ ಅದೇ ಹಾದಿ ತುಳಿದಿದ್ದಾರೆ. ಈಗಲೂ ಸಹ ಉಳಿದರ್ಧ ಭಾಗದ ಐಪಿಎಲ್​​ಗೆ ಒಂದು ತಿಂಗಳಿಗೂ ಮುಂಚೆಯೇ ಅಭ್ಯಾಸ ಆರಂಭಿಸಲು ಪ್ಲಾನ್​ ಹಾಕಿಕೊಂಡಿದ್ದಾರೆ. ಇನ್ನು 2020ರಲ್ಲಿ ಯುಎಇನಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್​​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಅತ್ಯಂತ ಕಳಪೆ ಪ್ರದರ್ಶನ ತೋರಿತ್ತು. 14ನೇ ಆವೃತ್ತಿ ಭಾರತದಲ್ಲಿ ನಡೆದಿದ್ದು, ಧೋನಿ ತಂಡ ಅತ್ಯದ್ಭುತ ಪ್ರದರ್ಶನ ತೋರಿ, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ.

Source: newsfirstlive.com Source link