‘ಲವ್ ಯೂ ರಚ್ಚು’ ಶೂಟಿಂಗ್​ನಲ್ಲಿ ಅವಘಡ -ಕೊನೆಗೂ ಮೌನ ಮುರಿದ ರಚಿತಾ ಹೇಳಿದ್ದೇನು?

‘ಲವ್ ಯೂ ರಚ್ಚು’ ಶೂಟಿಂಗ್​ನಲ್ಲಿ ಅವಘಡ -ಕೊನೆಗೂ ಮೌನ ಮುರಿದ ರಚಿತಾ ಹೇಳಿದ್ದೇನು?

‘ಲವ್ ಯೂ ರಚ್ಚು’ ಚಿತ್ರದ ಶೂಟಿಂಗ್ ವೇಳೆ ಫೈಟರ್​​ ಸಾವು ಪ್ರಕರಣ ಸಂಬಂಧ ಮೌನ ಮುರಿದಿರುವ ನಟಿ ರಚಿತಾ ರಾಮ್​, ಮೊದಲ ಬಾರಿಗೆ ಘಟನೆ ಬಗ್ಗೆ ತಮ್ಮ ಇನ್​​ಸ್ಟಾದಲ್ಲಿ ಪೋಸ್ಟ್​​ ಮಾಡಿ ಮಾಹಿತಿ ನೀಡಿದ್ದಾರೆ.

ವಿದ್ಯುತ್​ ಅವಘಡದಿಂದ ಸಾವನ್ನಪ್ಪಿದ ಫೈಟರ್​​ ವಿವೇಕ್​ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಸಿಗಲಿ ಎಂದು ರಚಿತಾ ರಾಮ್​ ಪೋಸ್ಟ್​​ನಲ್ಲಿ ಬರೆದುಕೊಂಡಿದ್ದಾರೆ.

ಘಟನೆ ಸಂಬಂಧ ಈಗಾಗಲೇ ಪ್ರಕರಣ ದಾಖಲಿಸಿಕೊಂಡಿರುವ ಬಿಡದಿ ಪೊಲೀಸರು ಐವರ ವಿರುದ್ಧ ಎಫ್​​ಐಆರ್ ದಾಖಲು ಮಾಡಿ, ಮೂವರನ್ನು ಬಂಧನ ಮಾಡಿದ್ದಾರೆ. ಬಂಧಿಸಿರುವ ಆರೋಪಿಗಳನ್ನು ರಾಮನಗರ ಕೋರ್ಟ್​​ಗೆ ಹಾಜರು ಪಡಿಸಿದ್ದರು. ಸದ್ಯ ಮೂವರು ಆರೋಪಿಗಳನ್ನು ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಇದನ್ನೂ ಓದಿ: ಫೈಟರ್ ವಿವೇಕ್​​ ​​ಸಾವು ಪ್ರಕರಣ; ನಿರ್ಮಾಪಕ ಗುರುದೇಶ್​​ ಪಾಂಡೆ, ಫರ್ನಾಂಡೀಸ್​​​​ ನಾಪತ್ತೆ

blank

Source: newsfirstlive.com Source link