ಎಚ್ಚರ ಎಚ್ಚರ ಎಚ್ಚರ..!! ಡೆಡ್ಲಿ ಮರ್​ಬರ್ಗ್ ವೈರಸ್​ ಪತ್ತೆ; ಸೋಂಕು ಹರಡಿದ್ರೆ ಶೇ.88 ರಷ್ಟು ಸಾವು

ಎಚ್ಚರ ಎಚ್ಚರ ಎಚ್ಚರ..!! ಡೆಡ್ಲಿ ಮರ್​ಬರ್ಗ್ ವೈರಸ್​ ಪತ್ತೆ; ಸೋಂಕು ಹರಡಿದ್ರೆ ಶೇ.88 ರಷ್ಟು ಸಾವು

ನವದೆಹಲಿ: ಕೊರೊನಾದಿಂದ ಇನ್ನೂ ಚೇತರಿಸಿಕೊಳ್ಳಲಾಗದೇ ಇಡೀ ಜಗತ್ತು ತತ್ತರಿಸಿ ಹೋಗುತ್ತಿದೆ. ಇದರ ಮಧ್ಯೆ ಇನ್ನೊಂದು ವೈರಸ್​ ರೋಗದ ಸಾವಲು ಜಗತ್ತನ್ನ ಕಾಡುವ ಆತಂಕ ಎದುರಾಗಿದೆ. ಹೌದು..ಇದೀಗ ಪಶ್ಚಿಮ ಆಫ್ರಿಕಾದಲ್ಲಿರುವ ಮೃತ ವ್ಯಕ್ತಿಯೊಬ್ಬರಲ್ಲಿ ಮಾರಣಾಂತಿಕ ವೈರಸ್​ ಕಾಯಲೆ ಮರ್​ಬರ್ಗ್​​ ಸೋಂಕು ಇರೋದನ್ನ ವಿಶ್ವ ಆರೋಗ್ಯ ಸಂಸ್ಥೆ ದೃಢಪಡಿಸಿದೆ.

ಪಶ್ಚಿಮ ಆಫ್ರಿಕಾದ ಗಿನಿ (Guinea) ದೇಶದಲ್ಲಿ ಇದೇ ಮೊದಲ ಬಾರಿಗೆ ಮರ್​ಬರ್ಗ್​​ (Marburg virus) ವೈರಸ್​ ಪತ್ತೆಯಾಗಿದೆ ಅಂತಾ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಎಬೊಲಾ ವೈರಸ್​​ಗೆ ಸಂಬಂಧಿಸಿದ ವೈರಸ್ ಇದಾಗಿದ್ದು, ತುಂಬಾ ಮಾರಣಾಂತಿಕವಾಗಿದೆ. ಒಂದು ವೇಳೆ ಈ ವೈರಸ್ ಬಂದರೆ ಸಾವಿನ ಪ್ರಮಾಣ ಶೇಕಡಾ 88 ರಷ್ಟಿದೆ.

ಗಿನಿಯ ದಕ್ಷಿಣ ಗುಕೆಡೌನಲ್ಲಿ ಆಗಸ್ಟ್​ 2 ರಂದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಇವರ ಅನುಮಾನಗೊಂಡಿದ್ದ ವೈದ್ಯಾಧಿಕಾರಿಗಳ ತಂಡ ಮೃತ ವ್ಯಕ್ತಿಯ ಸ್ಯಾಂಪಲ್​ ಅನ್ನ ಸಂಗ್ರಹಿಸಿ ಲ್ಯಾಬ್​ಗೆ ಕಳುಹಿಸಲಾಗಿತ್ತು. ಇದೀಗ ಅದರ ವರದಿ ಬಂದಿದ್ದು, ಡಬ್ಲ್ಯೂಹೆಚ್​​ಓ ಕೂಡ ಮೃತ ವ್ಯಕ್ತಿಗೆ ಮರ್​ಬರ್ಗ್​ ಸೋಂಕು ಇತ್ತು. ಇನ್ನು ಪೋಸ್ಟ್ ಮಾರ್ಟಂ ವರದಿಯಲ್ಲಿ ಎಬೊಲಾ ಪತ್ತೆಯಾಗಿಲ್ಲ ಅಂತಲೂ ಖಚಿತಪಡಿಸಿದೆ.

ಬಾವಲಿಗಳಲ್ಲಿ ಈ ವೈರಸ್ ಇರುತ್ತೆ​​
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ WHOn ರಿಜಿನಲ್ ಡೈರೆಕ್ಟರ್ ಫಾರ್ ಆಫ್ರಿಕದ ಡಾ.ಮಾತ್ಸಿದಿಸೋ ಮೊಯೆತಿ, ಮರ್​ಬರ್ಗ್ ದೂರದವರೆಗೆ ಹರಡುವ ಸಾಧ್ಯತೆ ಇದೆ. ಹೀಗಾಗಿ ನಾವು ಕೂಡಲೇ ಅದನ್ನ ಟ್ರ್ಯಾಕ್ ಮಾಡಬೇಕಿದೆ. ಈ ಸಂಬಂಧ ನಾವು ಈಗಾಗಲೇ ಕಾರ್ಯಗತವಾಗಿದ್ದೇವೆ. ಈ ಹಿಂದೆ ಗಿನಿಯಲ್ಲಿ ಎಬೊಲಾ ಸೋಂಕಿನ ವಿರುದ್ಧ ಹೋರಾಡಿದ ಮಾದರಿಯಲ್ಲಿಯೇ ತ್ವರಿತ ಪ್ರಕ್ರಿಯೆಗಳನ್ನ ಕಾರ್ಯಗತಗೊಳಿಸಲು ನಾವು ಆರೋಗ್ಯ ಅಧಿಕಾರಿಗಳ ಸಂಪರ್ಕದಲ್ಲಿದ್ದೇವೆ ಅಂತಾ ತಿಳಿಸಿದ್ದಾರೆ.

ಕಳೆದ ಎರಡು ತಿಂಗಳ ಹಿಂದೆಯೇ ಗಿನಿಯಲ್ಲಿ ಎಬೊಲಾ ವೈರಸ್ ನ್ಯೂಟ್ರಲ್ ಆಗಿದೆ ಅಂತಾ ವಿಶ್ವಸಂಸ್ಥೆ ಘೋಷಣೆ ಮಾಡಿತ್ತು. ಇದೀಗ ಮಾರ್​ಬರ್ಗ್​ ವೈರಸ್ ಪತ್ತೆಯಾಗಿದೆ ಎಂದಿದೆ. ಇನ್ನು ಕಳೆದ ವರ್ಷ ಈ ದೇಶದಲ್ಲಿ ಎಬೋಲಾ ವೈರಸ್ ವ್ಯಾಪಕವಾಗಿ ಹರಡಿತ್ತು ಮತ್ತು 12 ಜನರ ಪ್ರಾಣ ತೆಗೆದಿತ್ತು.

ಮರ್​ಬರ್ಗ್ ಲಕ್ಷಣಗಳೇನು..?

 • ವಾಕರಿಕೆ
 • ವಾಂತಿ
 • ಎದೆ ನೋವು
 • ಗಂಟಲು ನೋವು
 • ಹೊಟ್ಟೆ ನೋವು
 • ಕಾಮಾಲೆ ಸಾಧ್ಯತೆ
 • ಮೇದೋಜೀರಕ ಗ್ರಂಥಿಯ ಉರಿಯೂತ
 • ತೂಕ ನಷ್ಟ
 • ಸನ್ನಿ
 • ಪಿತ್ತಜನಕಾಂಗದ ವೈಫಲ್ಯ
 • ರಕ್ತಸ್ರಾವ
 • ಬಹು ಅಂಗಗಳ ವೈಫಲ್ಯ
 • ರೋಗಲಕ್ಷಣಗಳು ಹೆಚ್ಚು ತೀವ್ರವಾಗುತ್ತ

Source: newsfirstlive.com Source link