ವಿಶ್ವದ ಅತೀ ಎತ್ತರದ ಪ್ರದೇಶದಲ್ಲಿ ಏರ್​​​ ಟ್ರಾಫಿಕ್​​ ಕಂಟ್ರೋಲ್​​​ ಟವರ್ ನಿರ್ಮಿಸಿದ ಭಾರತೀಯ ಸೇನೆ

ವಿಶ್ವದ ಅತೀ ಎತ್ತರದ ಪ್ರದೇಶದಲ್ಲಿ ಏರ್​​​ ಟ್ರಾಫಿಕ್​​ ಕಂಟ್ರೋಲ್​​​ ಟವರ್ ನಿರ್ಮಿಸಿದ ಭಾರತೀಯ ಸೇನೆ

ಭಾರತೀಯ ವಾಯು ಸೇನೆ ವಿಶ್ವದ ಅತೀ ಎತ್ತರದಲ್ಲಿ ಚಲಿಸುವ​​​​ ಏರ್​​​ ಟ್ರಾಫಿಕ್​​ ಕಂಟ್ರೋಲ್​​​ ಟವರ್​​​​ ನಿರ್ಮಿಸಿದೆ. ಪೂರ್ವ ಲಡಾಖ್​​ನಲ್ಲಿರುವ ಅಡ್ವಾನ್ಸ್ ಲ್ಯಾಂಡಿಂಗ್​​ ಪ್ರದೇಶದಲ್ಲಿ ಸೇನಪಡೆ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಿಸಿರುವ ಈ ಏರ್​​​ ಟ್ರಾಫಿಕ್​​ ಕಂಟ್ರೋಲ್​​​ ಟವರ್ ಸ್ಥಿರ ವಿಮಾನ ಮತ್ತು ಹೆಲಿಕಾಪ್ಟರ್‌ಗಳ ಕಾರ್ಯಾಚರಣೆಗಳನ್ನು ನಿಯಂತ್ರಿಸುತ್ತದೆ ಎಂದು ತಿಳಿಸಲಾಗಿದೆ.

ಚೀನಾ ಗಡಿಯಲ್ಲಿ ಭಾರತೀಯ ವಾಯು ಸೇನೆ ತನ್ನ ಶಕ್ತಿ ಸಾಮರ್ಥ್ಯ ಪ್ರದರ್ಶಿಸಲು ಇದನ್ನು ನಿರ್ಮಿಸಿದೆ. ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಭಾರತಕ್ಕೆ ನುಸುಳುವ ಭಯೋತ್ಪಾದಕರ ಹೆಡೆಮುರಿ ಕಟ್ಟಲು ಸೇರಿದಂತೆ ಹಲವು ಕಾರ್ಯಾಚರಣೆಗಳಿಗೆ ಈ ಏರ್​​​ ಟ್ರಾಫಿಕ್​​ ಕಂಟ್ರೋಲ್​​​ ಟವರ್​​​​ ಸಹಾಯ ಮಾಡಲಿದೆ.

ಇದನ್ನೂ ಓದಿ: #CompleteDetails ಲಡಾಖ್​ನಲ್ಲಿ ಭಾರೀ ಬದಲಾವಣೆ; ಕೊನೆಗೂ ಮಂಡಿಯೂರಿದ ಚೀನಾ

ಇನ್ನು, ಚೀನಾ ಗಡಿಯಲ್ಲಿರುವ ಪೂರ್ವ ಲಡಾಖ್​​ನಲ್ಲಿ ಭಾರತ ಸ್ಟ್ರಾಂಗ್ ಆಗಿದೆ. ವಾಯುಸೇನೆಯು ತನ್ನ ಯುದ್ಧ ವಿಮಾನಗಳನ್ನು ಲ್ಯಾಂಡ್ ಮಾಡಲು ಇಲ್ಲಿ ಅಡ್ವಾನ್ಸ್ ಲ್ಯಾಂಡಿಂಗ್​ ಪ್ರದೇಶವನ್ನ ನಿರ್ಮಿಸಲಾಗಿದೆ. ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಭಾರತದ ವಾಯುಪಡೆ ತನ್ನ ಕಾರ್ಯಾಚರಣೆಗೆ ಈ ಪ್ರದೇಶ ಬಳಸಲಿದೆ. ಅದಕ್ಕಾಗಿ ರನ್​ ವೇ ಪ್ರದೇಶವನ್ನು ಮತ್ತಷ್ಟು ನವೀಕರಣಗೊಳಿಸಿದೆ.

ಇದನ್ನೂ ಓದಿ: ಚೀನಾ ಗಡಿಯಲ್ಲಿ ಭಾರತೀಯರ ಕೈ ಸೇರಿವೆ ಅತ್ಯಾಧುನಿಕ ರೈಫಲ್ಸ್.. ಚೀನಾಗೆ ಹೆಚ್ಚಿದ ಆತಂಕ

Source: newsfirstlive.com Source link