ದೇವೇಗೌಡರ ಮನೆಗೆ ಭೇಟಿ ನೀಡಿದ್ದಕ್ಕೆ ಕಿಡಿ; ‘ಪ್ರೀತಂಗೌಡಗೆ ತಿಳುವಳಿಕೆ ಕೊರತೆ’ ಎಂದ ಸಿಎಂ

ದೇವೇಗೌಡರ ಮನೆಗೆ ಭೇಟಿ ನೀಡಿದ್ದಕ್ಕೆ ಕಿಡಿ; ‘ಪ್ರೀತಂಗೌಡಗೆ ತಿಳುವಳಿಕೆ ಕೊರತೆ’ ಎಂದ ಸಿಎಂ

ಇಬೆಂಗಳೂರು: ನಮ್ಮ ಶಾಸಕ ಪ್ರೀತಂಗೌಡ ಮೊದಲ ಬಾರಿಗೆ ಚುನಾಯಿತರಾಗಿದ್ದು, ಅವರಿಗೆ ತಿಳುವಳಿಕೆ ಕೊರತೆ ಇರುತ್ತೆ ಅಂತಾ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಹೇಳಿದ್ದಾರೆ.

ಬಸವರಾಜ್ ಬೊಮ್ಮಾಯಿ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಮಾಜಿ ಪ್ರಧಾನಿ ದೇವೇಗೌಡರ ಮನೆಗೆ ಭೇಟಿ ನೀಡಿರುವ ವಿಚಾರಕ್ಕೆ ಪ್ರೀತಂಗೌಡ ಕಿಡಿಕಾರಿದ್ದರು. ಈ ವಿಚಾರಕ್ಕೆ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ ಅವರು.. ನನಗೆ ಅವರು ಯುವ ಗೆಳೆಯ. ಅವರನ್ನ ಕರೆದು ಮಾತನ್ನಾಡುತ್ತೇನೆ. ಎಲ್ಲವನ್ನೂ ಸರಿಪಡಿಸಿಕೊಂಡು ಹೋಗುವ ವಿಶ್ವಾಸವಿದೆ ಎಂದರು.

blank

ದೇವೇಗೌಡರ ಮನೆಗೆ ಹೋಗಿರುವ ಬಗ್ಗೆ ಆರ್‌ಎಸ್‌ಎಸ್​ಗೆ ದೂರು ನೀಡುತ್ತೇನೆಂಬ ಪ್ರೀತಂಗೌಡರ ಹೇಳಿಕೆ ಪ್ರತಿಕ್ರಿಯಿಸಿದ ಅವರು.. ಎಲ್ಲರೂ ಸರ್ವ ಸ್ವತಂತ್ರರು. ನಾನು ಮಾತುಕತೆಯಲ್ಲಿ ನಂಬಿಕೆ ಇಟ್ಟವನು. ಮಾತನಾಡಿದರೆ ಎಲ್ಲವೂ ಬಗೆ ಹರಿಯುತ್ತದೆ ಎಂಬ‌ ನಂಬಿಕೆ ನನಗಿದೆ. ಈಗಾಗಲೇ ಪ್ರೀತಂಗೌಡರ ಜೊತೆ ಚರ್ಚಿಸಿದ್ದೇನೆ ಅಂತಾ ಹೇಳಿದರು.

ಇದನ್ನೂ ಓದಿ:ಸಿಎಂ ಆದ 24 ಗಂಟೆಯೊಳಗೆ ದೇವೇಗೌಡರ ಮನೆಗೇಕೆ ಹೋಗಬೇಕಿತ್ತು? -ಗುಡುಗಿದ ಬಿಜೆಪಿ ಶಾಸಕ

Source: newsfirstlive.com Source link