ರಚಿತಾ ರಾಮ್​ಗೆ ತರಾಟೆ ತೆಗೆದುಕೊಂಡಿದ್ಯಾಕೆ ಅಭಿಮಾನಿಗಳು..?!

ರಚಿತಾ ರಾಮ್​ಗೆ ತರಾಟೆ ತೆಗೆದುಕೊಂಡಿದ್ಯಾಕೆ ಅಭಿಮಾನಿಗಳು..?!

‘ಲವ್ ಯೂ ರಚ್ಚು’ ಚಿತ್ರದ ಶೂಟಿಂಗ್ ವೇಳೆ ಫೈಟರ್​​ ವಿವೇಕ್​ ಸಾವನ್ನಪ್ಪಿದ ಕುರಿತಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರನ್ನು ಅರೆಸ್ಟ್​ ಮಾಡಿದ್ದಾರೆ. ಇತ್ತ ನಟ ಅಜೇಯ್​ ರಾವ್​ ಕೂಡ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳುವ ಕಾರ್ಯ ಮಾಡಿದ್ದಾರೆ. ಈ ನಡುವೆ ನಟಿ ರಚಿತಾ ರಾಮ್​​ ತಮ್ಮ ಇನ್ಸ್​​ಸ್ಟಾದಲ್ಲಿ ಹೊಸ ಪೋಸ್ಟ್​ ಮಾಡಿದ್ದಾರೆ. ಆದರೆ ರಚಿತಾ ರಾಮ್ ಅವರ ನಡೆಗೆ ಅಸಮಾಧಾನ ವ್ಯಕ್ತಪಡಿಸಿರುವ ಅಭಿಮಾನಿಗಳು, ಕ್ಲಾಸ್ ತೆಗೆದುಕೊಂಡಿದ್ದಾರೆ.

ಫೈಟರ್​ ಸಾವಿನ ಕುರಿತಂತೆ ಯಾವುದೇ ಪೋಸ್ಟ್​ ಮಾಡದ ರಚಿತಾ ರಾಮ್ ಅವರು, ಇಂದು ಬೆಳಗ್ಗೆ ತಮ್ಮ ಫೋಟೋವೊಂದನ್ನು ಪೋಸ್ಟ್​ ಮಾಡಿದ್ದರು. ಈ ಪೋಸ್ಟ್​ಗೆ ಕಾಮೆಂಟ್ ಮಾಡಿರುವ ಕೆಲವರು, ಕ್ರೇನ್​ ಬಿದ್ದು ನಿಮ್ಮ ಸಿನಿಮಾದಲ್ಲಿ ಒಬ್ಬ ಸಾವನ್ನಪ್ಪಿದ್ದಾನೆ. ಅದು ಬಿಟ್ಟು ನೀವು ಹೊಸ ಫೋಟೋ ಪೇಸ್ಟ್​​ ಮಾಡಿದ್ದೀರಿ.. ಆದರೆ ಇದುವರೆಗೂ ನೀವು ಫೈಟರ್​ ಬಗ್ಗೆ ಒಂದು ಪೋಸ್ಟ್ ಕೂಡ ಮಾಡಿಲ್ಲ. ನಿಮ್ಮಿಂದ ಇಂತಹ ನಡೆಯನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ನಿಮ್ಮ ಮೇಲಿನ ಗೌರವವನ್ನು ಕಳೆದುಕೊಂಡಿದ್ದೀರಿ ಎಂದು ಕ್ಲಾಸ್​ ತೆಗೆದುಕೊಂಡಿದ್ದಾರೆ.

ಅಭಿಮಾನಿಯ ಕಾಮೆಂಟ್​ಅನ್ನು 100ಕ್ಕೂ ಹೆಚ್ಚು ಮಂದಿ ಲೈವ್ ಮಾಡಿದ್ದಾರೆ. ಇತ್ತ ಅಭಿಮಾನಿಗಳು ಕ್ಲಾಸ್ ತೆಗೆದುಕೊಳ್ಳುತ್ತಿದಂತೆ ಎಚ್ಚೆತ್ತುಕೊಂಡಿರುವ ರಚಿತಾ ರಾಮ್​, ಫೈಟರ್​ ಸಾವಿಗೆ ಸಂತಾಪ ಸೂಚಿಸಿ ಮತ್ತೊಂದು ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ‘ಲವ್ ಯೂ ರಚ್ಚು’ ಶೂಟಿಂಗ್​ನಲ್ಲಿ ಅವಘಡ -ಕೊನೆಗೂ ಮೌನ ಮುರಿದ ರಚಿತಾ ಹೇಳಿದ್ದೇನು?

blank

Source: newsfirstlive.com Source link