ಕ್ರೀಡೆಯಲ್ಲಿ ಅಲ್ಲ, ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ‘ಚಿನ್ನ’

ನವದೆಹಲಿ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಒಂದು ಚಿನ್ನವನ್ನು ಗೆದ್ದಿರುವುದರ ಜೊತೆ ಈಗ ಮತ್ತೊಂದು ‘ಚಿನ್ನ’ವನ್ನು ಗೆದ್ದಿದೆ. ಆದರೆ ಇದು ಕ್ರೀಡೆಯಲ್ಲಿ ಅಲ್ಲ.

ಒಲಿಂಪಿಕ್ಸ್ ಕ್ರೀಡಾಕೂಟ ಸಮಯದಲ್ಲಿ ಫೇಸ್‍ಬುಕ್ ಎಂಗೇಜ್‍ಮೆಂಟ್‍ನಲ್ಲಿ ವಿಶ್ವದಲ್ಲೇ ಭಾರತ ಮೊದಲ ಸ್ಥಾನ ಪಡೆದಿದೆ.

ಫೇಸ್‍ಬುಕ್ ಜುಲೈ 23 ರಿಂದ ಆಗಸ್ಟ್ 8ರವರೆಗೆ ಒಲಿಂಪಿಕ್ಸ್ ಗೆ ಸಂಬಂಧಿಸಿದಂತೆ ಫೇಸ್‍ಬುಕ್ ಮತ್ತು ಇನ್‍ಸ್ಟಾಗ್ರಾಮ್ ಟ್ರೆಂಡ್ಸ್ ಬಿಡುಗಡೆ ಮಾಡಿದೆ. ಫೇಸ್‍ಬುಕ್‍ನಲ್ಲಿ ಅತಿ ಹೆಚ್ಚು ಒಲಿಂಪಿಕ್ಸ್ ವಿಚಾರದ ಬಗ್ಗೆ ಚರ್ಚೆ ನಡೆಸಿದ ದೇಶಗಳ ಪೈಕಿ ಭಾರತ ಮೊದಲ ಸ್ಥಾನ ಪಡೆದರೆ ನಂತರ ಅಮೆರಿಕ, ಬ್ರೆಜಿಲ್, ಫಿಲಿಪೈನ್ಸ್ ಮತ್ತು ಮೆಕ್ಸಿಕೋ ಪಡೆದಿವೆ.

ಕ್ರೀಡೆಗಳ ಪೈಕಿ ಟ್ರ್ಯಾಕ್ ಮತ್ತು ಫೀಲ್ಡ್ ಬಳಿಕ ಜಿಮ್ನಾಸ್ಟಿಕ್, ರೋಯಿಂಗ್, ಬಾಕ್ಸಿಂಗ್, ಸ್ವಿಮ್ಮಿಂಗ್ ಬಗ್ಗೆ ಜಾಸ್ತಿ ಟ್ರೆಂಡ್ ಆಗಿದೆ.

ಅತಿ ಹೆಚ್ಚು ಗಮನ ಸೆಳೆದ ಕ್ರೀಡಾಪಟುಗಳ ಪೈಕಿ ಭಾರತದ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಎರಡನೇ ಸ್ಥಾನ ಪಡೆದಿದ್ದಾರೆ. ಅಮೇರಿಕದ ಆರ್ಟಿಸ್ಟಿಕ್ ಜಿಮ್ನಾಸ್ಟ್ ಸಿಮೋನೆ ಬೈಲ್ಸ್ ಮೊದಲ ಸ್ಥಾನ ಪಡೆದಿದ್ದಾರೆ. ನೀರಜ್ ಚೋಪ್ರಾ ಚಿನ್ನ ಸಾಧನೆ, ಅಮೆರಿಕ ತಂಡದ ಬಾಸ್ಕೇಟ್‍ಬಾಲ್ ಗೆಲುವು ಜಾಸ್ತಿ ಚರ್ಚೆಯಾಗಿದೆ. ಇದನ್ನೂ ಓದಿ : ಐಪಿಎಲ್‍ಗೆ ವಿಶೇಷ ನಿಯಮ ಜಾರಿ ಮಾಡಿದ ಬಿಸಿಸಿಐ

blank

ಇನ್‍ಸ್ಟಾಗ್ರಾಮ್‍ನಲ್ಲಿ ಭಾರತದ ಕ್ರೀಡಾಪಟುಗಳ ಪೈಕಿ ನೀರಜ್ ಚೋಪ್ರಾ ಹೊಸದಾಗಿ 28 ಲಕ್ಷ, ಪಿವಿ ಸಿಂಧು 7 ಲಕ್ಷ, ಮೇರಿ ಕೋಮ್ 2 ಲಕ್ಷ ಹೊಸ ಫಾಲೋವರ್ ಗಳನ್ನು ಸಂಪಾದಿಸಿದ್ದಾರೆ.

ವಿಶ್ವದಲ್ಲೇ ಫೇಸ್‍ಬುಕ್ ಅತಿ ಹೆಚ್ಚು ಬಳಕೆದಾರರು ಭಾರತದಲ್ಲಿದ್ದಾರೆ. ಭಾರತದಲ್ಲಿ 34 ಕೋಟಿ ಜನ ಫೇಸ್‍ಬುಕ್ ಬಳಕೆ ಮಾಡುತ್ತಿದ್ದರೆ ಅಮೆರಿಕದಲ್ಲಿ 20 ಕೋಟಿ ಜನ ಬಳಸುತ್ತಿದ್ದಾರೆ.

Source: publictv.in Source link