ಶೂಟಿಂಗ್​​​ನಲ್ಲಿ ಫೈಟರ್​ ಸಾವು; ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡಲು ಮುಂದಾದ ಗುರುದೇಶ ಪಾಂಡೆ

ಶೂಟಿಂಗ್​​​ನಲ್ಲಿ ಫೈಟರ್​ ಸಾವು; ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡಲು ಮುಂದಾದ ಗುರುದೇಶ ಪಾಂಡೆ

ಬೆಂಗಳೂರು: ‘ಲವ್ ಯೂ ರಚ್ಚು’ ಚಿತ್ರದ ಶೂಟಿಂಗ್ ವೇಳೆ ಸಾವನ್ನಪ್ಪಿದ ಫೈಟರ್​​ ವಿವೇಕ್​ ಕುಟುಂಬಕ್ಕೆ ಸಿನಿಮಾ ನಿರ್ಮಾಪಕ ಗುರುದೇಶ ಪಾಂಡೆ 10 ಲಕ್ಷ ರೂಪಾಯಿ ಪರಿಹಾರ ನೀಡೋದಾಗಿ ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಘಟನೆ ಬಳಿಕ ನಾಪತ್ತೆಯಾಗಿರುವ ಗುರುದೇಶ ಪಾಂಡೆ ಅವರು ಸದ್ಯ ವಿವೇಕ್​ ಅವರ ಚಿಕ್ಕಪ್ಪ ಗೋಪಿ ಅವರಿಗೆ ಕರೆ ಮಾಡಿ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಅಜ್ಞಾತ ಸ್ಥಳದಿಂದ ಗೋಪಿ ಅವರಿಗೆ ಗುರುದೇಶ ಪಾಂಡೆ ಕರೆ ಮಾಡಿದ್ದಾರೆ ಎನ್ನಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಗೋಪಿ ಅವರು, ನಮಗೆ ನಮ್ಮ ಸ್ಟಂಟ್​ ಯೂನಿಯನ್​​ನಿಂದ ಕರೆ ಮಾಡಿದ್ದರು. 10 ಲಕ್ಷ ರೂಪಾಯಿ ಸಹಾಯ ಮಾಡುತ್ತೇವೆ. ಈಗ ಏನು ಕಾರ್ಯಗಳನ್ನು ಮಾಡಬೇಕು ಅದನ್ನು ನೋಡಿ ಅಂದಿದ್ದಾರೆ. ಘಟನೆಯಲ್ಲಿ ತಪ್ಪು ಯಾರದ್ದೂ ಇಲ್ಲ. ಗುರು ಅವರದ್ದೂ ತಪ್ಪಿಲ್ಲ. ಈಗ ಪೊಲೀಸ್ ಕಂಪ್ಲೇಟ್ ಆಗಿದೆ. ವಿಚಾರಣೆ ನಡೆಸಿ ಕ್ರಮಕೈಗೊಳ್ಳುತ್ತಾರೆ ಎಂದು ಎಂದಿದ್ದಾರೆ.

blank

ಇತ್ತ ಪ್ರಕರಣದ ದುರಂತರದ ಸಂಬಂಧ ಬಿಡದಿ ಪೊಲೀಸರು ಈಗಾಗಲೇ ನಿರ್ಮಾಪಕ ಗುರುದೇಶ್​ ಪಾಂಡೆ ಸೇರಿದಂತೆ ಐವರ ವಿರುದ್ಧ ಎಫ್​ಐಆರ್ ದಾಖಲು ಮಾಡಿದ್ದಾರೆ. ಅಲ್ಲದೇ ಚಿತ್ರದ ಸಾಹಸ ನಿರ್ದೇಶಕ ವಿನೋದ್ A3, ಸಿನಿಮಾ ಇನ್​​​ಚಾರ್ಜ್​​ ಪರ್ನಾಂಡೀಸ್ A4, ಕ್ರೇನ್ ಆಪರೇಟರ್ ಮಹೇದವರ್ A5 ವಿರುದ್ಧ ಅವರನ್ನು ಬಂಧನ ಮಾಡಿ ಕೋರ್ಟ್​​ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಮೂವರು ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಈ ನಡುವೆ ವಿವೇಕ್​ ಕುಟುಂಬಕ್ಕೆ ಪರಿಹಾರ ನೀಡುವ ಭರವಸೆಯನ್ನು ನಿರ್ಮಾಪಕ ಗುರುದೇಶ್ ಪಾಂಡೆ ನೀಡಿದ್ದಾರೆ ಎನ್ನಲಾಗಿದೆ.

Source: newsfirstlive.com Source link