ಬಿಜೆಪಿಯಲ್ಲೀಗ ವಲಸಿಗ ಸಿಎಂ, ವಲಸಿಗ ಸಚಿವರು: ಮುಖ್ಯಂತ್ರಿಗಳ ಜೊತೆ ಇರ್ತಿದ್ದ ಪಡೆಯೇ ಬದಲು

ಬಿಜೆಪಿಯಲ್ಲೀಗ ವಲಸಿಗ ಸಿಎಂ, ವಲಸಿಗ ಸಚಿವರು: ಮುಖ್ಯಂತ್ರಿಗಳ ಜೊತೆ ಇರ್ತಿದ್ದ ಪಡೆಯೇ ಬದಲು

ಬೆಂಗಳೂರು: ರಾಜ್ಯ ಬಿಜೆಪಿಯಲ್ಲೀಗ ವಲಸಿಗರ ಬಗ್ಗೆ ಬಿಸಿಬಿಸಿ ಚರ್ಚೆಯಾಗುತ್ತಿದೆ. ಬಿಎಸ್​ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಯುತ್ತಿದ್ದಂತೆಯೇ, ಸಿಎಂ ಹಿಂದೆ ಇರುತ್ತಿದ್ದ ಮೂಲ ಬಿಜೆಪಿಗರ ಕೂಟ ಹಿಂದೆ ಸರಿದಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಇದೀಗ ಹೊಸ ಪಡೆ ಸೃಷ್ಟಿಯಾಗಿದೆ.

ವಲಸಿಗ ಸಿಎಂ ಎಂಬ ಚರ್ಚೆಯ ನಡುವೆಯೇ ಬೊಮ್ಮಾಯಿ ಹಿಂದೆ ವಲಸಿಗರ ಪಡೆ ಗಿರಕಿ ಹೊಡೆಯುತ್ತಿರೋದು ಚರ್ಚೆಗೆ ಗ್ರಾಸವಾಗಿದೆ. ಕರ್ನಾಟಕ ಬಿಜೆಪಿಯಲ್ಲಿ ಮೂಲ-ವಲಸಿಗ ಎಂಬ ಕಂದಕ ದೊಡ್ಡದಾಗ್ತಿದೆ. ಇದರ ಮುಂದುವರಿದ ಭಾಗವಾಗಿ ವಲಸಿಗ ಸಿಎಂ ಜೊತೆ ವಲಸಿಗ ಸಚಿವರು ಎಂಬ ಚರ್ಚೆಯೂ ಕೂಟ ರಾಜಕೀಯ ವಲಯದಲ್ಲಿ ದಟ್ಟವಾಗಿದೆ.

ಇದನ್ನೂ ಓದಿ: ED ದಾಳಿ ಬಳಿಕ ಜಮೀರ್ ಏಕಾಂಗಿ; ಸಿದ್ದರಾಮಯ್ಯರ ಅತಿ ಪ್ರಾಧಾನ್ಯತೆಯೇ ಮುಳುವಾಗ್ತಿದ್ಯಾ?

Image

ಡಾ.ಕೆ ಸುಧಾಕರ್, ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್, ನಾರಾಯಣಗೌಡ, ಬಿ.ಸಿ ಪಾಟೀಲ್ ಸೇರಿದಂತೆ ಹಲವುವಲಸಿಗ ಸಚಿವರ ಕೂಟ ಸಿಎಂ ಬಸವರಾಜ್ ಬೊಮ್ಮಾಯಿ ಸುತ್ತಮುತ್ತ ರೌಂಡ್ಸ್​ ಹಾಕುತ್ತಲೇ ಇರುತ್ತಾರೆ. ವಿಧಾನಸೌಧ, ಗೃಹ ಕಚೇರಿ ಕೃಷ್ಣಾ ಇಲ್ಲವೇ ಯಾವುದೇ ಕಾರ್ಯಕ್ರಮ ಇದ್ದರೂ ಜೊತೆಯಲ್ಲೇ ವಲಸಿಗರ ಪಡೆ ಹೆಜ್ಜೆ ಹಾಕುತ್ತಿದೆ.

ಇದನ್ನೂ ಓದಿ: ದೇವೇಗೌಡರ ಮನೆಗೆ ಭೇಟಿ ನೀಡಿದ್ದಕ್ಕೆ ಕಿಡಿ; ‘ಪ್ರೀತಂಗೌಡಗೆ ತಿಳುವಳಿಕೆ ಕೊರತೆ’ ಎಂದ ಸಿಎಂ

Image

ಅದರಲ್ಲೂ ಸಿಎಂ ಘೋಷಣೆಯ ಕೊನೆಯ ಕ್ಷಣದಿಂದಲೂ ಬೊಮ್ಮಾಯಿ ಹಿಂದೆಯೇ ಸವಿವ ಡಾ.ಕೆ ಸುಧಾಕರ್ ತಿರುಗುತ್ತಿದ್ದಾರೆ. ಬಸವರಾಜ್ ಬೊಮ್ಮಾಯಿ ಬಿಟ್ಟು ಎಲ್ಲೂ ಕದಲುತ್ತಿಲ್ಲ. ಬೊಮ್ಮಾಯಿ ಕೃಪಾಕಟಾಕ್ಷದಿಂದಲೇ ಸುಧಾಕರ್ ಆರೋಗ್ಯ, ವೈದ್ಯಕೀಯ ಶಿಕ್ಷಣ ಖಾತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗುತ್ತಿದೆ.

ಈ ಹಿಂದಿನ ಪರಿಸ್ಥಿತಿಯೇ ಬೇರೆ!
ಈ ಮೊದಲು ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾ ಇರುತ್ತಿದ್ದ ಪಡೆಯೇ ಬೇರೆಯಾಗಿತ್ತು. ಆರ್.ಅಶೋಕ್, ಬಸವರಾಜ್ ಬೊಮ್ಮಾಯಿ, ಡಾ.ಅಶ್ವಥ್ ನಾರಾಯಣ್, ಸೋಮಣ್ಣ, ಗೋವಿಂದ್ ಕಾರಜೋಳ, ರೇಣುಕಾಚಾರ್ಯ ಸೇರಿದಂತೆ ಹಲವು ನಾಯಕರ ಪಡೆ ಇರುತ್ತಿತ್ತು. ಬದಲಾದ ಸನ್ನಿವೇಶದಲ್ಲಿ ಬೊಮ್ಮಾಯಿ ಸೈನ್ಯವೇ ಬೇರೆಯಾಗಿದೆ. ವಲಸಿಗರ ಪಡೆ ಬೊಮ್ಮಾಯಿ ಬೆನ್ನ ಹಿಂದೆಯೇ ನಿಂತು ಸಾಥ್ ನೀಡುತ್ತಿದ್ದಾರೆ.

ಇದನ್ನೂ ಓದಿ: ರೆಬೆಲ್​​ ಸಚಿವ ಆನಂದ್​ ಸಿಂಗ್​​ ಸಿಗಲಿದೆಯಾ ಫವರ್​​ಫುಲ್​​ ಖಾತೆ?

Source: newsfirstlive.com Source link