ರೆಬೆಲ್​​ ಸಚಿವ ಆನಂದ್​ ಸಿಂಗ್​​ ಸಿಗಲಿದೆಯಾ ಫವರ್​​ಫುಲ್​​ ಖಾತೆ?

ರೆಬೆಲ್​​ ಸಚಿವ ಆನಂದ್​ ಸಿಂಗ್​​ ಸಿಗಲಿದೆಯಾ ಫವರ್​​ಫುಲ್​​ ಖಾತೆ?

ನಾನು ಕೇಳಿದ್ದ ಖಾತೆ ನೀಡಲಿಲ್ಲ ಎಂದು ಅಸಮಾಧಾನ ಹೊರಹಾಕಿದ್ದ ಸಚಿವ ಆನಂದ್​​ ಸಿಂಗ್ ಬಂಡಾಯ ಶಮನಕ್ಕೆ ಸಿಎಂ ಬಸವರಾಜ್​​ ಬೊಮ್ಮಾಯಿ ಮುಂದಾಗಿದ್ದಾರೆ. ಹೌದು, ನಾನು ಮೊದಲೇ ನಿಮಗೆ ಪವರ್​​ಫುಲ್​ ಖಾತೆ ನೀಡುವುದಾಗಿ ಭರವಸೆ ನೀಡಿದ್ದೆ. ಈಗ ಉತ್ತಮ ಖಾತೆ ಕೊಡುತ್ತೇನೆ, ಯಾವುದೇ ನಿರ್ಧಾರಕ್ಕೆ ಬರಬೇಡಿ ಎಂದು ಸಿಸಿ ಪಾಟೀಲ್​​ ಮೂಲಕ ಆನಂದ್​ ಸಿಂಗ್​​ಗೆ ಹೇಳಿ ಕಳಿಸಿದ್ದಾರೆ.

ಹೌದು, ರಾಜ್ಯದ ಪ್ರಬಲ ಇಲಾಖೆಗಳಾದ ಇಂಧನ‌, ಲೋಕೋಪಯೋಗಿ‌, ಗೃಹ ಅಥವಾ ಜಲಸಂಪನ್ಮೂಲ ಇಲಾಖೆ ಆನಂದ್​ ಸಿಂಗ್​​ಗೆ ಬೇಡಿಕೆಯಿಟ್ಟಿದ್ದಾರೆ. ನನಗೆ ಯಾವುದೇ ಕಾರಣಕ್ಕೂ ಪರಿಸರ ಇಲಾಖೆ ಬೇಡ ಎಂದಿರುವ ಆನಂದ್​ ಸಿಂಗ್​​ಗೆ ಬೊಮ್ಮಾಯಿ ಮಾಸ್ಟರ್​​ ಪ್ಲಾನ್​​ ಮಾಡಿದ್ದಾರೆ. ಆನಂದ್​ ಸಿಂಗ್​​ ಬೆನ್ನಲ್ಲೇ ಸಿ.ಸಿ ಪಾಟೀಲ್ ಜತೆಗೆ ಸಿಎಂ ಬೊಮ್ಮಾಯಿ ಮಾತುಕತೆ ನಡೆಸಿರುವುದು ಹೀಗೊಂದು ಅನುಮಾನ ಹುಟ್ಟಿಹಾಕಿದೆ. ಆನಂದ್​ ಸಿಂಗ್​​ ರಾಜೀನಾಮೆ ನೀಡದಂತೆ ನೋಡಿಕೊಳ್ಳಿ, ನಾನು ಏನಾದ್ರೂ ಒಂದು ಮಾಡುತ್ತೇನೆ ಎಂದು ಸಿಸಿ ಪಾಟೀಲ್​​ಗೆ ಹೇಳಿದ್ದಾರೆ. ಈಗ ಸಿಸಿ ಪಾಟೀಲ್​​ ಖಾತೆಯೇ ಆನಂದ್​ ಸಿಂಗ್​​ಗೆ ನೀಡುವ ಸಾಧ್ಯತೆ ಇದೆ.

ಆನಂದ್​ ಸಿಂಗ್​​ ಸಮಾಧಾನಕ್ಕೆ ಸಿಎಂ ಮುಂದಿರುವ ತಂತ್ರಗಳೇನು?

ಲೋಕೋಪಯೋಗಿ ಖಾತೆ ಬದಲಾವಣೆ ಮಾಡುವ ಸಾಧ್ಯತೆ ಇದೆ. ಸಿ.ಸಿ ಪಾಟೀಲ್ ಲೋಕೋಪಯೋಗಿ‌ ಖಾತೆ ನಿಭಾಯಿಸುತ್ತಿದ್ದಾರೆ.
ಇಂಧನ ಖಾತೆ ಬದಲಾವಣೆ ಮಾಡೋಕೆ ಆಗಲ್ಲ, ಸುನೀಲ್ ಕುಮಾರ್ ಹೊಸ ಮುಖ, ಜೊತೆಗೆ ಸಂಘ ಪರಿವಾರದಿಂದ ಬಂದವರು ಎಂಬುದು ಸಿಎಂ ಯೋಚನೆ.

ಜಲಸಂಪನ್ಮೂಲ ಖಾತೆ ಬದಲಾವಣೆ ‌ಮಾಡಿದರೆ, ಹಿರಿಯ ನಾಯಕ ಗೋವಿಂದ ಕಾರಜೋಳಗೆ ಅಸಮಾಧಾನ ಆಗುವ ಸಾಧ್ಯತೆ ಇದೆ.
ಡಿಸಿಎಂ ಸ್ಥಾನದಿಂದ ತೆಗೆದಿರುವ ಗೋವಿಂದ ಕಾರಜೋಳರಿಗೆ ಬಿ. ಗ್ರೇಡ್ ಇಲಾಖೆ ಕೊಟ್ಟರೆ ಹಿಂದುಳಿದ ಸಮುದಾಯಕ್ಕೆ ಬೇರೆ ತರನಾದ ಸಂದೇಶ ಹೋಗುತ್ತೆ ಎಂದು ಕೂಡ ಆಲೋಚಿಸಿದ್ದಾರೆ ಸಿಎಂ.

ಇದನ್ನೂ ಓದಿ: ರಾಜೀನಾಮೆ ನೀಡಿ ಶಾಸಕನಾಗಿ ಉಳಿಯುವ ಬಗ್ಗೆ ಸಿಎಂಗೆ ಹೇಳಿರುವೆ -ಆನಂದ್ ಸಿಂಗ್

ಗೃಹ ಇಲಾಖೆಯಲ್ಲಿ ಅರಗ ಜ್ಞಾನೇಂದ್ರ ಈಗಷ್ಟೇ ಕೆಲಸ ಆರಂಭಿಸಿದ್ದಾರೆ. ಯಡಿಯೂರಪ್ಪ ಸಮಕಾಲೀನರು, ಜೊತೆಗೆ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಸಿದವರು. ಇವೆಲ್ಲವು ನೋಡಿದರೆ ಲೋಕೋಪಯೋಗಿ‌ ಇಲಾಖೆ‌ಯೇ ಆನಂದ್​​ ಸಿಂಗ್​​ಗೆ ಸೂಕ್ತ.
ಹಾಗಾಗಿ ಸಿಸಿ ಪಾಟೀಲ್​​ ಖಾತೆ ಬದಲಿಸಿ, ಲೋಕೋಪಯೋಗಿ ಖಾತೆ ಆನಂದ್​ ಸಿಂಗ್​​ಗೆ ನೀಡುವುದು ಒಂದು ನಿರ್ಧಾರಕ್ಕೆ ಬಂದಿದ್ದಾರೆ.

 

Source: newsfirstlive.com Source link