SSLC ಪರೀಕ್ಷೆಯಲ್ಲಿ ತಾಯಿ-ಮಗ ಇಬ್ಬರು ಪಾಸ್

SSLC ಪರೀಕ್ಷೆಯಲ್ಲಿ ತಾಯಿ-ಮಗ ಇಬ್ಬರು ಪಾಸ್

ಹಾಸನ: ಎಸ್​ಎಸ್​​ಎಲ್​ಸಿ ಪರೀಕ್ಷೆಯಲ್ಲಿ ತಾಯಿ ಹಾಗೂ ಮಗ ಇಬ್ಬರೂ ಪಾಸ್​ ಆಗಿರುವ ಅಪರೂಪದ  ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ನಡೆದಿದೆ.

ಸಕಲೇಶಪುರ ತಾಲೂಕಿನ ಲಕ್ಷ್ಮೀಪುರ ಗ್ರಾಮದ ಸಿ.ಎನ್.ತೀರ್ಥ ಹಾಗೂ ಅವರ ಮಗ ಬಿ.ಆರ್.ಹೇಮಂತ್ ಈ ಬಾರಿಯ ಎಸ್​​ಎಸ್​​ಎಲ್​ಸಿ ಪರೀಕ್ಷೆಯಲ್ಲಿ ಉತೀರ್ಣರಾಗಿದ್ದಾರೆ.

ಅಂದಹಾಗೇ ತೀರ್ಥ ಅವರು ಎಂಟನೇ ತರಗತಿ ಓದುತ್ತಿರುವಾಗ ಅರ್ಧಕ್ಕೆ ಶಾಲೆ ಬಿಟ್ಟಿದ್ದರು. ಈ ಬಾರಿ ಪರೀಕ್ಷೆ ತೆಗೆದುಕೊಂಡಿದ್ದ ಅವರು ಬಾಳ್ಳುಪೇಟೆಯ ರಂಗನಾಥ ಪ್ರೌಢಶಾಲೆಯಲ್ಲಿ ಪರೀಕ್ಷೆ ಬರೆದಿದ್ದರು. ಇನ್ನು ವಳಲಹಳ್ಳಿ ಗ್ರಾಮದ ಶ್ರೀ ಮಲ್ಲೇಶ್ವರ ಪ್ರೌಢಶಾಲೆಯಲ್ಲಿ ಓದುತ್ತಿದ್ದ ಬಿ.ಆರ್.ಹೇಮಂತ್ ಪರೀಕ್ಷೆ ಬರೆದಿದ್ದರು. ಹೇಮಂತ್ 562 ಅಂಕ ಪಡೆದುಕೊಂಡಿದ್ದರೆ, ತಾಯಿ ತೀರ್ಥ ಅವರು 235 ಅಂಕ ಪಡೆದು ಉತೀರ್ಣರಾಗಿದ್ದಾರೆ.

Source: newsfirstlive.com Source link