ಉಡುಪಿ ಹೋಟೆಲ್​​ನಲ್ಲಿ ಡಾಲಿಯ ಪ್ರೀತಿ ಪಾಠ

ಉಡುಪಿ ಹೋಟೆಲ್​​ನಲ್ಲಿ ಡಾಲಿಯ ಪ್ರೀತಿ ಪಾಠ

ಸ್ಯಾಂಡಲ್​ವುಡ್​​ನ ಬಹುಮುಖ ಪ್ರತಿಭಾವಂತ ಕಲಾವಿದ ಡಾಲಿ ಧನಂಜಯ್. ನಟನಾಗಿ ಚಿತ್ರರಂಗ ಬಂದವರು ಈಗ ನಿರ್ಮಾಪಕನಾಗುತ್ತಿದ್ದಾರೆ, ನಿರ್ಮಾಪಕನಾಗೋ ಜೊತೆಗೆ ಚಿತ್ರ ಸಾಹಿತಿಯೂ ಆಗುತ್ತಿದ್ದಾರೆ.

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರೋ ಸ್ಟಾರ್ ನಟ ಡಾಲಿ ಧನಂಜಯ್, ಕನ್ನಡದ ಜೊತೆಗೆ ಪಕ್ಕದ ಟಾಲಿವುಡ್​​ನಲ್ಲೂ ತನ್ನ ಅಭಿನಯ ಚತುರತೆಯನ್ನ ಚಿತ್ತಾರ ಸದ್ಯದಲ್ಲೇ ತೋರಲಿದ್ದಾರೆ. ಸಾಲು ಸಾಲು ಸಿನಿಮಾ ಕೆಲಸ ಕಾರ್ಯಗಳ ಜೊತೆಗೆ ಚಿತ್ರ ಸಾಹಿತಿಯಾಗಿದ್ದಾರೆ. ಒಂದೊಳ್ಳೆ ಪ್ರೇಮಗೀತೆಯನ್ನ ಬರೆದು ಕೇಳುಗ ಕಿವಿಗಳಿಗೆ ಇಂಪುನ ನೀಡೋ ಕೆಲಸಕ್ಕೆ ಮುಂದಾಗಿದ್ದಾರೆ.

blank

ಅಷ್ಟಕ್ಕೂ ಡಾಲಿ ಬರೆದಿರೋ ಹೊಸ ಸಾಂಗ್ ಯಾವುದು ಅನ್ನೋದಕ್ಕೆ ಉತ್ತರ ಬಡವ ರಾಸ್ಕಲ್​​. ಇದು ಡಾಲಿ ಧನಂಜಯ್ ನಟಿಸೋದ್ರ ಜೊತೆಗೆ ನಿರ್ಮಾಣವನ್ನ ಮಾಡ್ತಿರೋ ಮೊಟ್ಟ ಮೊದಲ ಚಿತ್ರ. ಟೈಟಲ್​ನಿಂದ ಗಮನ ಸೇಳೆದಿದ್ದ ಬಡವ ರಾಸ್ಕಲ್ ಸಿನಿಮಾ ಈಗ ಹಾಡಿನ ಮೂಲಕ ಚಿತ್ರಪ್ರೇಮಿಗಳ ಕುತೂಹಲ ಕೋಟೆಗೆ ಲಗ್ಗೆ ಇಟ್ಟಿದೆ. ಅಷ್ಟಕ್ಕೂ ಈ ಉಡುಪಿ ಹೋಟೆಲ್ ಸಾಂಗ್​ ಅನ್ನ ಬರೆದವರು ಡಾಲಿ ಧನಂಜಯ್​​.

blank

ಡಾಲಿ ರಂಗಭೂಮಿಯಿಂದ ಬಂದವರು ಕನ್ನಡ ಸಾಹಿತ್ಯವನ್ನ ಓದಿ ಸವಿದವರು. ಈ ಹಿಂದೆ ಮಾದಪ್ಪನ ಹಾಡನ್ನ ಬರೆದಿದ್ರು ಧನಂಜಯ್​. ಈ ಬಾರಿ ತನ್ನದೆ ಸಿನಿಮಾಕ್ಕೆ ತಾನೆ ಹಾಡು ಬರೆದು ವಾಸುಕಿ ವೈಭವ್ ಬಳಿ ಮ್ಯೂಸಿಕ್ ಮಾಡಿ ಗೆದ್ದಿದ್ದಾರೆ.

ಈ ಹಿಂದೆ ಡಿಫರೆಂಟ್ ಆಗಿ ಉಡುಪಿ ಹೋಟೆಲ್ ಹಾಡಿನ ಪ್ರೋಮೋ ಬಿಟ್ಟಿತ್ತು ಚಿತ್ರತಂಡ. ಈ ಬಾರಿ ರೊಮ್ಯಾಟಿಕ್ ಹಾಡನ್ನ ಹೊರ ಬಿಟ್ಟು ಇಂಪ್ರೇಸ್ ಮಾಡುತ್ತಿದೆ. ಡಾಲಿ ಜೊತೆಗೆ ನಾಯಕಿಯಾಗಿ ಅಪೂರ್ವ ಐಯಂಗಾರ್ ಕಂಗೊಳಿಸಿದ್ದಾರೆ. ಶಂಕರ್ ಗುರು ನಿರ್ದೇಶನದಲ್ಲಿ ಚಿತ್ರ ಮೂಡಿಬಂದಿದ್ದು ಇನೇನು ಕೆಲವೇ ದಿನಗಳಲ್ಲಿ ಎಲ್ಲವೂ ನೆಟ್ಟಗಿದ್ರೆ ಬಡವ ರಾಸ್ಕೆಲ್ ಸಿನಿಮಾ ಪ್ರೇಕ್ಷಕರ ಮುಂದೆ ಬಂದು ನಿಲ್ಲಲಿದೆ.

Source: newsfirstlive.com Source link