ವಿದ್ಯಾರ್ಥಿನಿಯರ ಮೇಲೆ ಲಾಠಿಚಾರ್ಜ್​​; ಜಾರ್ಖಂಡ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

ವಿದ್ಯಾರ್ಥಿನಿಯರ ಮೇಲೆ ಲಾಠಿಚಾರ್ಜ್​​; ಜಾರ್ಖಂಡ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

ನವದೆಹಲಿ: ಜಾರ್ಖಂಡ್​ನ ಧನ್​ಬಾದ್​​ನಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್​ ನಡೆಸಿರೋದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಜಾರ್ಖಂಡ್ ಅಕಾಡೆಮಿಕ್ ಕೌನ್ಸಿಲ್ (JAC) ಪ್ರಕಟಿಸಿದ್ದ 10 ಮತ್ತು 12 ತರಗತಿ ಫಲಿತಾಂಶಕ್ಕೆ ಅಸಮಾಧಾನ ವ್ಯಕ್ತಪಡಿಸಿ ನೂರಾರು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಪೊಲೀಸರು ಪರಿಸ್ಥಿತಿಯನ್ನ ನಿಯಂತ್ರಿಸಲು ವಿದ್ಯಾರ್ಥಿನಿಯರ ಮೇಲೆ ಲಾಠಿ ಪ್ರಹಾರ ನಡೆಸಿದ್ದರು.

ತನಿಖೆಗೆ ಆದೇಶ
ಇನ್ನು ಈ ಬಗ್ಗೆ ಹರಿಯಾಣ ಶಿಕ್ಷಣ ಸಚಿವ ಜಗರ್​ನಾಥ್ ಪ್ರತಿಕ್ರಿಯಿಸಿ.. ವಿದ್ಯಾರ್ಥಿನಿಯ ಮೇಲೆ ಲಾಠಿಚಾರ್ಜ್​ ಮಾಡಿರುವ ಬಗ್ಗೆ ಈಗಾಗಲೇ ತನಿಖೆಗೆ ಆದೇಶ ನೀಡಲಾಗಿದೆ. ಫಲಿತಾಂಶ ನಿರೀಕ್ಷೆಗೆ ತಕ್ಕಂತೆ ಬಾರದಿದ್ದರೆ ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನ ಹಾಕಲು ಅವಕಾಶ ಇದೆ. ಯಾವುದೇ ವಿದ್ಯಾರ್ಥಿಗಳು ಮರುಮೌಲ್ಯಮಾಪನ ಹಾಕಲು ಅಥವಾ ಮರು ಪರೀಕ್ಷೆ ಬರೆಯಲು ಬಯಸಿದ್ರೆ ಶಿಕ್ಷಣ ಮಂಡಳಿಯನ್ನ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ಜಾರ್ಖಂಡ್​ ಬಿಜೆಪಿ ಘಟಕ ವಿದ್ಯಾರ್ಥಿನಿಯರ ಮೇಲೆ ಕ್ರಮ ತೆಗೆದುಕೊಂಡಿದ್ದನ್ನ ಖಂಡಿಸಿದೆ. ಜೊತೆಗೆ ಟ್ವೀಟ್ ಮಾಡಿರುವ ಬಿಜೆಒ ಮಾಹಿತಿ ಮತ್ತು ತಂತ್ರಜ್ಞಾನ ವಿಭಾದ ಉಸ್ತುವಾರಿ ಅಮಿತ್ ಮಾಳವಿಯಾ.. ಜಾರ್ಖಂಡ್‌ನ ಧನ್​​ಬಾದ್​​ನಲ್ಲಿ ಪ್ರತಿಭಟನೆ ಮಾಡ್ತಿದ್ದ ವಿದ್ಯಾರ್ಥಿನಿಯರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಇಲ್ಲಿನ ಪರಿಸ್ಥಿತಿಯನ್ನ ನಿಭಾಯಿಸಲು ಯಾವುದೇ ಮಹಿಳಾ ಪೊಲೀಸ್ ಅಧಿಕಾರಿಗಳನ್ನ ಕರೆದುಕೊಂಡು ಬರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Source: newsfirstlive.com Source link