‘ವಿಕ್ರಾಂತ್ ರೋಣ’ನ ದಾರಿ ಹಿಡಿದ ಗ್ರೇಟ್ ಡೈರೆಕ್ಟರ್ ​ಮಣಿರತ್ನಂ

‘ವಿಕ್ರಾಂತ್ ರೋಣ’ನ ದಾರಿ ಹಿಡಿದ ಗ್ರೇಟ್ ಡೈರೆಕ್ಟರ್ ​ಮಣಿರತ್ನಂ

ವಿಕ್ರಾಂತ್ ರೋಣ.. ಭಾರತೀಯ ಸಿನಿಮಾ ರಂಗದ ನಿರೀಕ್ಷಿತ ಪ್ಯಾನ್ ಇಂಡಿಯನ್ ಮೂವಿ. ವಿಕ್ರಾಂತ್ ರೋಣ ಸಿನಿಮಾ ತಂಡದ ಪ್ರಚಾರದ ಕಹಳೆ ಅನೇಕ ಸಿನಿಮಾಗಳಿಗೆ ಸ್ಫೂರ್ತಿಯಾಗುತ್ತಿದೆ ಹೊಸ ದಾರಿಯನ್ನ ತೋರಿಸಿಕೊಡುತ್ತಿದೆ. ಈಗ ವಿಕ್ರಾಂತ್ ರೋಣನ ದಾಖಲೆಯ ದಾರಿಯಲ್ಲಿ ತಮಿಳು ಸಿನಿಮಾ ರಂಗದ ಬಹುನಿರೀಕ್ಷಿತ ಚಿತ್ರವೊಂದು ಸಾಗುತ್ತಿದೆ. ಹಾಗಾದ್ರೆ ಯಾವುದು ಆ ಸಿನಿಮಾ ಅನ್ನೋ ಪ್ರಶ್ನೆಗೆ ಉತ್ತರ ನಿಮ್ಮಮುಂದೆ.

ಕಿಚ್ಚ ಸುದೀಪ್ ಅವರ ಬೆಳ್ಳಿತೆರೆಯ ಬೆಳ್ಳಿ ಮಹೋತ್ಸವದ ಸಂಭ್ರಮಕ್ಕೆ ಇಡೀ ದೇಶವೇ ಮಾತನಾಡುವ ಹಾಗೆ ಇಡೀ ವಲ್ಡ್ ನೋಡುವ ಹಾಗೆ ವಿಕ್ರಾಂತ್ ರೋಣ ಫಿಲ್ಮ್ ಟೀಮ್ ಒಂದು ಮಸ್ತ್ ಗಿಫ್ಟ್​ ಅನ್ನ ಕೊಟ್ಟಿತ್ತು.. 830 ಮಿಟರ್ ಎತ್ತರದ ವಿಶ್ವವಿಖ್ಯಾತ ಕಟ್ಟದ ದುಬೈನ ಬುರ್ಜ್ ಖಲೀಫಾದ ಮೇಲೆ ಕನ್ನಡದ ಧ್ವಜದ ಜೊತೆಗೆ ನಮ್ಮ ಇಂಡಸ್ಟ್ರಿಯ ಆಲ್ ಇಂಡಿಯಾ ಕಟೌಟ್ ಸುದೀಪ ವಿಕ್ರಾಂತ್ ರೋಣನಾಗಿ ರಾರಾಜಿಸಿದ್ರು.

blank

ಬುರ್ಜ್ ಖಲೀಫಾದ ಮೇಲೆ ಸುದೀಪ್ ರಾರಾಜಿಸಿದ್ರೆ ಬುರ್ಜ್ ಖಪೀಫಾದ ಕಟ್ಟಡದ ಕೆಳಗೆ ಸೂಪರ್ ಸ್ಟಾರ್ ರಜಿನಿಕಾಂತ್ ಅವರ 2.0 ಸಿನಿಮಾದ ಅದ್ಧೂರಿಯಾ ಕಾರ್ಯಕ್ರಮವಾಗಿತ್ತು. ಈಗ ಇದೇ ರೀತಿ ; ಅಂದ್ರೆ ನಮ್ಮ ಕಿಚ್ಚನ ವಿಕ್ರಾಂತ್ ರೋಣನ ರೀತಿ ತಮಿಳು ಸಿನಿಮಾ ರಂಗದ ನಿರೀಕ್ಷಿತ ಅದ್ಧೂರಿ ವೆಬ್​​ ಸಿರಿಸ್​​ ‘ನವರಸ’ ಚಿತ್ರದ ಡಿಪರೆಂಟ್ ಟ್ರೈಲರ್ ಗಗನ ಚುಂಬಿ ಕಟ್ಟದ ಬುರ್ಜ್ ಖಲೀಫಾದ ಮೇಲೆ ಚಿತ್ತಾರವಾಗಿದೆ.

blank

ಮಣಿರತ್ನಂ.. ಕಾಲಿವುಡ್ ಸಿನಿರಂಗ ಯಶಸ್ವಿ ಸಿನಿ ಮಾಂತ್ರಿಕ. ಏನಾದ್ರೊಂದು ಮನಮುಟ್ಟೋ ಸಿನಿಮಾಗಳನ್ನ ಕೊಡುತ್ತಾ ಬಂದಿರೋ ಮಣಿರತ್ನಂ ಈ ಬಾರಿ ನವರಸ ವೆಬ್​​ ಸಿರಿಸ್​ ಮೂಲಕ ಪ್ರೇಕ್ಷಕರ ಮುಂದೆ ಇಡಲು ಮುಂದಾಗಿದ್ದಾರೆ.

ನೆಟ್​ ಫಿಕ್ಸ್ ನಲ್ಲಿ ಮೂಡಿ ಬರಲಿರೋ ಈ ನವರಸ ವೆಬ್​ ಸಿರಿಸ್​ನಲ್ಲಿ ಅನೇಕ ಸ್ಟಾರ್ ಪ್ರತಿಭವಂತರ ದಂಡೇ ಇದೆ. ಸೂರ್ಯ, ಅರವಿಂದ್ ಸಾಮಿ, ಸಿದ್ಧಾರ್ಥ್, ಅಥರ್ವ್, ವಿಜಯ ಸೇತು ಪತಿ, ರೇವತಿ, ಅಂಜಲಿ ಸೇರಿದಂತೆ ಅನೇಕ ಪ್ರತಿಭವಂತರು ಈ ವೆಬ್ ಸೀರಿಸ್​​ನಲ್ಲಿ ಕಾಣಸಿಗಲಿದ್ದಾರೆ.. ಆಗಸ್ಟ್ 6ರಿಂದ ಈ ನವರಸ ವೆಬ್​ ಸರಣಿ ನೆಟ್​​ಫ್ಲಿಕ್ಸ್​​ನಲ್ಲಿ ಲಭ್ಯವಿದೆ.

blank

Source: newsfirstlive.com Source link