‘ಮೇಕೆದಾಟು ಯೋಜನಗೆ ಯಾವುದೇ ಅಡ್ಡಿ ಇಲ್ಲ.. ಬಿಜೆಪಿಯವರು ಕೂಡಲೇ ಕೆಲಸ ಆರಂಭಿಸಲಿ’

‘ಮೇಕೆದಾಟು ಯೋಜನಗೆ ಯಾವುದೇ ಅಡ್ಡಿ ಇಲ್ಲ.. ಬಿಜೆಪಿಯವರು ಕೂಡಲೇ ಕೆಲಸ ಆರಂಭಿಸಲಿ’

ಮೈಸೂರು: ಮೇಕೆದಾಟು ವಿಚಾರವಾಗಿ ಮಂಡ್ಯದಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ.. ಮೇಕೆದಾಟು ಪ್ರಾರಂಭ ಮಾಡಲು ಯಾವುದೇ ಅಡ್ಡಿ ಇಲ್ಲ. ಕಾನೂನಿನಲ್ಲೂ ಕೂಡ ಅಡ್ಡಿ ಇಲ್ಲ ಎಂದಿದ್ದಾರೆ. ತಮಿಳುನಾಡಿನವರನ್ನ ಕೇಳಿ ನಾವು ಮೇಕೆದಾಟು ಅಣೆಕಟ್ಟು ನಿರ್ಮಾಣ ಮಾಡಬೇಕಾದಂತ ಅಗತ್ಯವಿಲ್ಲ.. ಬಿಜೆಪಿಯವರಿಗೆ ಬದ್ಧತೆ ಇದ್ರೆ ಕೂಡಲೇ ಆ ಕೆಲಸ ಮಾಡಲಿ.. ನಾವಿದ್ದಾಗಲೇ ಡಿಟೈಲ್ ಎಕ್ಟಿಮಿಷನ್ ಮಾಡಿ ಕಳಿಸಿದ್ದೆವು ಎಂದು ಹೇಳಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ವಿಚಾರವಾಗಿ ಪ್ರತಿಕ್ರಿಯಿಸಿ.. KRS ಡ್ಯಾಂಗೆ ತೊಂದರೆ ಇದ್ರೆ ಅಂತಹ ಅಕ್ರಮ ಗಣಿಗಾರಿಕೆಯನ್ನ ನಿಲ್ಲಿಸಲಿ. ಕಾನೂನಿನ ಪ್ರಕಾರ ಇರುವಂಥವರು ಪಾಲನೆ ಮಾಡಲಿ. ಕಾನೂನು ಪಾಲನೆ ಮಾಡದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ನನಗೆ ಗೊತ್ತಿಲ್ಲ, ನಾನೇನು ಶಾಸ್ತ್ರ ಹೇಳ್ಲಾ..?

ಬಿಜೆಪಿ ಸರ್ಕಾರ ಪೂರ್ಣಾವಧಿ ಪೂರೈಸುವ ವಿಚಾರವಾಗಿಯೂ ಮಾತನಾಡಿ.. ನನಗೆ ಗೊತ್ತಿಲ್ಲ, ನಾನೇನು ಶಾಸ್ತ್ರ ಹೇಳ್ಲಾ..? ಎಂದಿದ್ದಾರೆ. ಇದೇ ಸಿದ್ದರಾಮಯ್ಯ ಮದ್ದೂರಿನಲ್ಲಿ ಬೊಮ್ಮಾಯಿ ಸರ್ಕಾರ ಜಾಸ್ತಿ ದಿನ ಇರಲ್ಲ ಎಂದಿದ್ದರು.

ಇನ್ನು ಹಳೆ ಮೈಸೂರು ಪ್ರಾಂತ್ಯಕ್ಕೆ ಬಿಜಪಿ ಕಡೆಗಣನೆ ವಿಚಾರವಾಗಿ ಮಾತನಾಡಿ.. ಮಂಡ್ಯಕ್ಕೆ ಮಂತ್ರಿ ಕೊಟ್ಟಿದ್ದಾರೆ, ಮೈಸೂರಿಗೆ ಮಂತ್ರಿ ಕೊಟ್ಟಿಲ್ಲ. ಹಳೇ ಮೈಸೂರು ಭಾಗಕ್ಕೆ ಪ್ರಾತಿನಿಧ್ಯ ಇಲ್ಲ.. ಬಿಜೆಪಿ ಸರ್ಕಾರ ಹಳೆ ಮೈಸೂರು ಭಾಗವನ್ನ ಕಡೆಗಣನೆ ಮಾಡಿದೆ. ಈಗ 10 ದಿನ ಆಗಿದೆ.. ಕಾದು ನೋಡೋಣಾ ಇನ್ನು ಸ್ವಲ್ಪ ದಿನ ಏನಾಗುತ್ತೆ ಅಂತ ಎಂದು ಇದೇ ವೇಳೆ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

Source: newsfirstlive.com Source link