ನೀರಜ್ ಚೋಪ್ರಾ ಚಿನ್ನ ಗೆದ್ದ ದಿನಕ್ಕೆ ವಿಶೇಷ ಮಾನ್ಯತೆ; ‘ರಾಷ್ಟ್ರೀಯ ಭರ್ಜಿ ಎಸೆತ ದಿನ’ವೆಂದು ಘೋಷಣೆ

ನೀರಜ್ ಚೋಪ್ರಾ ಚಿನ್ನ ಗೆದ್ದ ದಿನಕ್ಕೆ ವಿಶೇಷ ಮಾನ್ಯತೆ; ‘ರಾಷ್ಟ್ರೀಯ ಭರ್ಜಿ ಎಸೆತ ದಿನ’ವೆಂದು ಘೋಷಣೆ

ನವದೆಹಲಿ: ಟೋಕಿಯೋ ಒಲಿಂಪಿಕ್ಸ್​ನಲ್ಲಿ ಜಾವೆಲಿನ್ ಥ್ರೋ ಕ್ರೀಡೆಯಲ್ಲಿ ಭಾರತೀಯ ಕ್ರೀಡಾಪಟು ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಈ ಹಿನ್ನೆಲೆ ಈ ಸನ್ನಿವೇಶವನ್ನು ಹಚ್ಚಹಸಿರಾಗಿ ಉಳಿಯುವಂತೆ ಮಾಡಲು ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ(AFI) ನಿರ್ಧರಿಸಿದೆ.

ಇದನ್ನೂ ಓದಿ: ಚಿನ್ನ ಗೆದ್ದ ಬಡ ರೈತನ ಮಗ ನೀರಜ್ ಚೋಪ್ರಾ; ಸೇನೆಯಿಂದ ಟೋಕಿಯೋ ಒಲಿಂಪಿಕ್ಸ್​ವರೆಗಿನ ಪಯಣ

ಆಗಸ್ಟ್ 7 ನೇ ತಾರೀಖನ್ನು ರಾಷ್ಟ್ರೀಯ ಜಾವೆಲಿನ್ ಡೇ ಹೆಸರಿನಲ್ಲಿ ಆಚರಿಸಲು ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ ನಿರ್ಧರಿಸಿದೆ. ಅಥ್ಲೀಟ್​ಗಳಿಗೆ ಸನ್ಮಾನ ಮಾಡುವ ಕಾರ್ಯಕ್ರಮದಲ್ಲ ದೇಶದಾದ್ಯಂತ ಜಾವೆಲಿನ್ ಕ್ರೀಡೆಯನ್ನು ಪ್ರೋತ್ಸಾಹಿಸಲು ಆಗಸ್ಟ್ 7 ನೇ ತಾರೀಖನ್ನು ರಾಷ್ಟ್ರೀಯ ಜಾವೆಲಿನ್ ದಿನವಾಗಿ ಆಚರಿಸಲಾಗುವುದು ಎಂದು ಎಎಫ್​ಐ ಪ್ಲಾನಿಂಗ್ ಕಮಿಷನ್ ಚೇರ್​​ಮನ್ ಲಲಿತ್ ಭಾನೋಟ್ ಹೇಳಿದ್ದಾರೆ.

ಇದನ್ನೂ ಓದಿ: ಸ್ಥೂಲಕಾಯದಿಂದ ಬಳಲುತ್ತಿದ್ದ ನೀರಜ್ ಚೋಪ್ರಾ; ಫಿಟ್ ಅಂಡ್ ವಿನ್ನರ್ ಆಗಿದ್ದೇ ರೋಚಕ

ಇದಲ್ಲದೇ ಅಂತರ್​ ಜಿಲ್ಲಾ ಕಾಂಪಿಟಿಷನ್​ಗಳನ್ನು ನಡೆಸಲಾಗುವುದು.. ಅಗತ್ಯವಿದ್ದಲ್ಲಿ ಜಾವೆಲಿನ್​ಗಳನ್ನು ಪೂರೈಕೆ ಮಾಡಲಾಗುವುದು. ಇಂಥ ಸ್ಪರ್ಧೆಗಳನ್ನು ರಾಷ್ಟ್ರ ಮಟ್ಟದ ಕಾರ್ಯಕ್ರಮಗಳನ್ನಾಗಿ ಪರಿವರ್ತಿಸಲು ಚಿಂತಿಸಲಾಗಿದೆ ಎಂದಿದ್ದಾರೆ.
23 ವರ್ಷದ ಚೋಪ್ರಾ ಒಲಿಂಪಿಕ್ಸ್​​ನಲ್ಲಿ ಸ್ವತಂತ್ರವಾಗಿ ಚಿನ್ನದ ಪದಕ ಗಳಿಸಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

Source: newsfirstlive.com Source link