ರಮೇಶ್​​ ಜಾರಕಿಹೊಳಿಗೆ ಮತ್ತೊಂದು ಸಂಕಷ್ಟ; ಚೆಕ್​​​ ಬೌನ್ಸ್​ ಕೇಸ್​​ಗೆ ಮರುಜೀವ

ರಮೇಶ್​​ ಜಾರಕಿಹೊಳಿಗೆ ಮತ್ತೊಂದು ಸಂಕಷ್ಟ; ಚೆಕ್​​​ ಬೌನ್ಸ್​ ಕೇಸ್​​ಗೆ ಮರುಜೀವ

ಬೆಂಗಳೂರು: ಸಿಡಿ ಪ್ರಕರಣದ ಬೆನ್ನಲ್ಲೀಗ ಮಾಜಿ ಸಚಿವ ಮತ್ತು ಬಿಜೆಪಿ ಹಿರಿಯ ನಾಯಕ ರಮೇಶ್ ಜಾರಕಿಹೊಳಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈ ಹಿಂದೆ ಜಾರಕಿಹೊಳಿ ವಿರುದ್ಧ ವಜಾಗೊಂಡಿದ್ದ ಪ್ರಕರಣವೊಂದಕ್ಕೆ ಮರುಜೀವ ನೀಡಿ ಕರ್ನಾಟಕ ಹೈಕೋರ್ಟ್​ ಆದೇಶ ಹೊರಡಿಸಿದೆ.

ಮಾಜಿ ಸಚಿವ ರಮೇಶ್​​ ಜಾರಕಿಹೊಳಿಯವರು ಸಹಕಾರಿ ಬ್ಯಾಂಕ್​​ ನೀಡಿದ್ದ 5.2 ಕೋಟಿ ರೂಪಾಯಿ ಚೆಕ್​​ ಬೌನ್ಸ್​ ಆಗಿತ್ತು. ಈ ಸಂಬಂಧ ಸಹಕಾರಿ ಬ್ಯಾಂಕ್​​​ ರಮೇಶ್​​ ಜಾರಕೊಹೊಳಿ ವಿರುದ್ಧ ದೂರು ದಾಖಲಿಸಿತ್ತು. ಆದರೆ, ವಿಚಾರಣೆ ವೇಳೆ ಬ್ಯಾಂಕ್​​ ಪರ ವಕೀಲರು ಹಾಜರಾಗದ ಕಾರಣ ಚಿಕ್ಕೋಡಿ ಕೋರ್ಟ್​ ಪ್ರಕರಣ ವಜಾಗೊಳಿಸಿತ್ತು.

ಇದನ್ನೂ ಓದಿ: ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾರ, ತುರಾಯಿಗೆ ಬ್ರೇಕ್.. ಕನ್ನಡ ಪುಸ್ತಕ ನೀಡಲು ಸಿಎಂ ಆದೇಶ

ಈಗ ಹೈಕೋರ್ಟ್ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ನೇತೃತ್ವದ ಏಕ ಸದಸ್ಯ ಪೀಠ ಚಿಕ್ಕೋಡಿ ಕೋರ್ಟ್​ ಚೆಕ್​​​ ಬೌನ್ಸ್​ ಪ್ರಕರಣ ಸಂಬಂಧ ನೀಡಿದ್ದ ಆದೇಶವನ್ನು ರದ್ದುಗೊಳಿಸಿದೆ. ಈ ಮೂಲಕ ಕೇಸ್​ ವಜಾಗೊಳಿಸಿದ ಚಿಕ್ಕೋಡಿ ನ್ಯಾಯಾಲಯದ ಆದೇಶ ಕಾನೂನು ರೀತಿಯಲ್ಲ ಎಂದು ತಿಳಿಸಿದೆ. ಅಲ್ಲದೇ ಕೂಡಲೇ ಕೇಸ್​​ ಮರು ತನಿಖೆಗೆ ಸೂಚನೆ ನೀಡಿದೆ.

Source: newsfirstlive.com Source link