ಕಿಚ್ಚ-ಶಿವಣ್ಣನ ಕಲಿ ಕಥೆಯನ್ನ ಧ್ರುವಗೆ ಮಾಡ್ತಾರಾ ದಿ ಶೋ ಮ್ಯಾನ್​ ಪ್ರೇಮ್..?

ಕಿಚ್ಚ-ಶಿವಣ್ಣನ ಕಲಿ ಕಥೆಯನ್ನ ಧ್ರುವಗೆ ಮಾಡ್ತಾರಾ ದಿ ಶೋ ಮ್ಯಾನ್​ ಪ್ರೇಮ್..?

ಅದೇನೋ ಗೊತ್ತಿಲ್ಲಪ್ಪ.. ಜೋಗಿ ಪ್ರೇಮ್ ಯಾವುದೇ ಸಿನಿಮಾ ಮಾಡ್ಲಿ ಆ ಸಿನಿಮಾ ಸೌಂಡ್ ಮಾಡುತ್ತೆ.. ಜೋಗಿ ಪ್ರೇಮ್ ಮತ್ತು ಧ್ರುವ ಸರ್ಜಾ ಮುಂದಿನ ಸಿನಿಮಾದ ಬಗ್ಗೆ ಇನ್ನೂ ಕೂಡ ಶ್ರೀಕಾರ, ಓಂಕಾರ ಹಾಕೋ ಮೊದ್ಲೇ ಹೊಸ್ ಹೊಸ ವೆರೈಟಿ ವೆರೈಟಿ ಸಮಾಚಾರಗಳು ಹೊರ ಬರುತ್ತಿವೆ. ಅದೇನಂದ್ರೆ, ಶಿವಣ್ಣ ಮತ್ತು ಕಿಚ್ಚ ಸುದೀಪ್​​ ಅವರಿಗೆ ಮಾಡಿದೊಂದು ಸಬ್ಜೆಕ್ಟ್​ ಅನ್ನ ಧ್ರುವಗೆ ಮಾಡ್ತಿದ್ದಾರಂತೆ ಪ್ರೇಮ್​​.!

blank

ಏಕ್​ ಲವ್​ ಯಾ ಚಿತ್ರ ಮುಗಿಸಿ ಪ್ರೇಮ್​ ಕಿಚ್ಚ ಸುದೀಪ್​ ಜೊತೆ ಚಿತ್ರಯಾತ್ರೆ ಹೋಗ್ತಾರೆ ಅನ್ನೋ ಸುದ್ದಿ ಸದ್ದು ಮಾಡಿತ್ತು. ಅಲ್ಲದೆ ಈ ಸಿನಿಮಾ ಕಿಚ್ಚ ಸುದೀಪ್​ ಹುಟ್ಟು ಹಬ್ಬಕ್ಕೆ ರಿವೀಲ್​ ಆಗುತ್ತೆ ಅನ್ನೋ ಮಾತಿತ್ತು.. ಅದ್ರೆ ಈಗ ಸದ್ದಿಲ್ಲದೆ ಮತ್ತೊಂದು ಸುದ್ದಿಯೊಂದು ಪ್ರೇಮ್​ ಅಂಗಳದಿಂದ ಬಂದಿದೆ.. ಅದೇನಪ್ಪ ಅಂದ್ರ ಪ್ರೇಮ್​ ನಟ ಧ್ರುವ ಸರ್ಜಾ ಚಿತ್ರಕ್ಕೆ ನಿರ್ದೇಶನ ಮಾಡ್ತಾರಂತೆ ಇದು ಪ್ರೇಮ್ ಸಿನಿ ಜಿಂದಗಿಯ 9ನೇ ಸಿನಿಮಾ.

blank

ಈ ಹಿಂದೆ ಶಿವಣ್ಣ ಮತ್ತು ಕಿಚ್ಚ ಸುದೀಪ್ ಕಾಂಬಿನೇಷನಲ್ಲಿ ದಿ ವಿಲನ್ ಸಿನಿಮಾ ತೆರೆಕಂಡಿತ್ತು.ಆದ್ರೆ ದಿ ವಿಲನ್ ಸಿನಿಮಾಕ್ಕೂ ಮುನ್ನ ಕಲಿ ಎಂಬುವ ಸಿನಿಮಾವನ್ನ ಅದ್ಧೂರಿ ಬಜೆಟ್​ನಲ್ಲಿ ಮಾಡಲು ಹೊರಟ್ಟಿದ್ದರು ಪ್ರೇಮ್.. ಕೊನೆ ಮುಮೆಂಟ್​​​ನಲ್ಲಿ ನಾನಾ ಕಾರಣಗಳಿಂದ ‘ಕಲಿ’ ಪ್ರಾಜೆಕ್ಟ್ ಡ್ರಾಪ್ ಆಯ್ತು..ದಿ ವಿಲನ್ ಸಿನಿಮಾ ಸೆಟ್ಟೇರಿತು.ಈಗ್ಯಾಕೆ ವಿಚಾರ ಅನ್ನೋದನ್ನ ಬಿಡಿಸಿ ಹೇಳ್ತಿವಿ ಕೇಳಿ. ಯೆಸ್​..ಇಂಥದೊಂದು ಸುದ್ದಿ ಗಾಂಧಿನಗರದಲ್ಲಿ ಓಡಾಡುತ್ತಿದೆ.ಕಲಿ ಅನ್ನೋ ಬಿಗ್ ಬಜೆಟ್ ಸಿನ್ಮಾವನ್ನ ಜೋಗಿ ಪ್ರೇಮ್ ಮಾಡಲು ಹೊರಟಿದ್ರು..ಆದ್ರೆ ಆ ಸಿನಿಮಾ ಮಾಡಲು ಆಗದೆ ಇದ್ದಾಗ ಬೇಸರವು ಆಗಿದ್ರು.. ಬಟ್ ಈಗ ಶಿವಣ್ಣ- ಕಿಚ್ಚನಿಗೆ ಮಾಡಿಕೊಂಡಿದ್ದ ಕಲಿ ಸಿನಿಮಾದ ಕಥೆಯನ್ನ ಬದಲಿಸಿ ಪ್ರೇಮ್ ಸಿನಿ ಯುದ್ಧಕ್ಕೆ ನಿಂತಿದ್ದಾರೆ ಎನ್ನಲಾಗುತ್ತಿದೆ.

Source: newsfirstlive.com Source link