ಮಾಗಡಿ ನಿವಾಸಕ್ಕೆ ಬಂದ ಫೈಟರ್ ವಿವೇಕ್ ಪಾರ್ಥೀವ ಶರೀರ.. ಮುಗಿಲು ಮುಟ್ಟಿದ ಪೋಷಕರ ರೋಧನ

ಮಾಗಡಿ ನಿವಾಸಕ್ಕೆ ಬಂದ ಫೈಟರ್ ವಿವೇಕ್ ಪಾರ್ಥೀವ ಶರೀರ.. ಮುಗಿಲು ಮುಟ್ಟಿದ ಪೋಷಕರ ರೋಧನ

ಬೆಂಗಳೂರು: ನಿನ್ನೆ ಲವ್​ಯೂ ರಚ್ಚು ಸಿನಿಮಾ ಶೂಟಿಂಗ್​ ವೇಳೆ ವಿದ್ಯುತ್ ಶಾಕ್ ತಗುಲಿ ಫೈಟರ್ ವಿವೇಕ್ ಸಾವನ್ನಪ್ಪಿದ್ದರು. ಇಂದು ಮಾಗಡಿ ರಸ್ತೆಯ ನಿವಾಸಕ್ಕೆ ವಿವೇಕ್​ ಪಾರ್ಥೀವ ಶರೀರವನ್ನ ಕರೆತರಲಾಗಿದೆ.

blank

 

ನಿವಾಸದ ಬಳಿಗೆ ಮೃತದೇಹ ಬರ್ತಿದ್ದಂತೆ ಕುಟುಂಬಸ್ಥರ ರೋಧನ ಮುಗಿಲುಮುಟ್ಟಿದೆ. ಮನೆಗೆ ಆಧಾರವಾಗಿದ್ದ ಮಗನನ್ನ ಕಳೆದುಕೊಂಡ ತಾಯಿಯ ನೋವು ಎಂಥ ಕಲ್ಲೆದೆಯನ್ನ ಕರಗಿಸುವಂತಿದೆ. ಇನ್ನು ಚಾಮರಾಜಪೇಟೆ ಚಿತಾಗಾರದಲ್ಲಿ ವಿವೇಕ್ ಪಾರ್ಥೀವ ಶರೀರದ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆದಿದೆ. ಸಾಯಂಕಾಲ 4 ಗಂಟೆಗೆ ಅಂತ್ಯಸಂಸ್ಕಾರ ನಡೆಸಲಾಗುವುದು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

blank

ವಿವೇಕ್ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ನಟ ಅಜಯ್ ರಾವ್ ಆಗಮಿಸಿದ್ದಾರೆ. ಅಜಯ್ ರಾವ್ ಜೊತೆಗೆ ನಿರ್ಮಾಪಕ ಭಾ.ಮ. ಹರೀಶ್ ಕೂಡ ಆಗಮಿಸಿದ್ದಾರೆ.

blank

blank

Source: newsfirstlive.com Source link