ಅರವಿಂದ್ ಅಂದ್ರೆ​ ಇಷ್ಟ.. ನಾವಿಬ್ಬರೂ ಕೊನೆಯವರೆಗೂ ಜೊತೆಯಲ್ಲೇ ಇದ್ವಿ- ದಿವ್ಯಾ ಉರುಡುಗ

ಅರವಿಂದ್ ಅಂದ್ರೆ​ ಇಷ್ಟ.. ನಾವಿಬ್ಬರೂ ಕೊನೆಯವರೆಗೂ ಜೊತೆಯಲ್ಲೇ ಇದ್ವಿ- ದಿವ್ಯಾ ಉರುಡುಗ

ಬಿಗ್​ ಮನೆಯಲ್ಲಿ ಟಫ್​ ಫೈಟ್​ ನೀಡಿ ಟಾಪ್​ ಥ್ರೀ ತಲುಪಿದ್ದ ದಿವ್ಯಾ ಉರುಡುಗ ಬಗ್ಗೆ ಸಾಕಷ್ಟು ಪಾಸಿಟಿವ್​ ಮತ್ತು ನೆಗೆಟಿವ್​ ಕಮೆಂಟ್​ಗಳು ಹರಿದಾಡುತ್ತಲೇ ಇದ್ದು, ಇದ್ರಲ್ಲಿ ಮುಖ್ಯವಾಗಿ ದಿವ್ಯಾ ಯುಗೆ ಮೊದಲ ಇನ್ನಿಂಗ್ಸ್​ನಲ್ಲಿ ಇದ್ದ ಚಾರ್ಮ್​ ಇರಲಿಲ್ಲ.. ಅದೇ ಅವರ ಸೋಲಿಗೆ ಕಾರಣವಾಯ್ತು ಎಂಬ ಮಾತುಗಳು ಕೇಳಿ ಬಂದಿದ್ದವು.. ಈ ಬಗ್ಗೆ ದಿವ್ಯಾ ನ್ಯೂಸ್​ ಫಸ್ಟ್​ ಜೊತೆ ಮಾತನಾಡಿದ್ದಾರೆ.

ದಿವ್ಯಾ ಉರುಡುಗ ಬಿಗ್​ ಬಾಸ್​ ಮನೆಯಿಂದ ಹೊರ ಬಂದ್ಮೇಲೆ ಇದೇ ಮೊದಲ ಬಾರಿಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.. ನಾನು ಮೊದಲ ಇನ್ನಿಂಗ್ಸ್​ನಲ್ಲಿ ಹೇಗೆ ಇದ್ನೋ ಈಗ್ಲೂ ಹಾಗೇ ಇದ್ದೀನಿ. ಇನ್​ಫ್ಯಾಕ್ಟ್​ ಸೆಕೆಂಡ್​ ಇನ್ನಿಂಗ್ಸ್​ನಲ್ಲಿಯೇ ತುಂಬಾ ಚೆನ್ನಾಗಿ ಟಾಸ್ಕ್​ಗಳನ್ನ ಮಾಡಿದ್ದೀನಿ. ಎರಡು ಸಾರಿ ಕ್ಯಾಪ್ಟನ್​ ಆದೆ. ಕಿಚ್ಚನ ಚಪ್ಪಾಳೆ ಪಡೆದೆ ಎಂದಿದ್ದಾರೆ.

ಇನ್ನು ಎಲ್ಲರ ಸ್ನೇಹಿತರು ಔಟ್​ ಆಗ್ತಿದ್ರು. ಆದರೆ ಅರವಿಂದ್​ ಮತ್ತು ನಾನು ಕೊನೆಯವರೆಗೂ ಇದ್ವಿ. ಬೇರೆಯವರು ಫ್ರೆಂಡ್ಸ್​ಗಳನ್ನ ಚೇಂಜ್​ ಮಾಡ್ತಿದ್ರು. ಆದ್ರೆ ನಾನು ಹಂಗಲ್ಲ, ಮೊದಲಿನಿಂದ ಹಿಡಿದು ಕೊನೆಯವರೆಗೂ ಅರವಿಂದ್​ ಜೊತೆ ಇದ್ದೆ. ಅವರ ಕೇರ್​ ನಂಗೆ ಇಷ್ಟ ಎಂದು ಹೇಳಿದ್ದಾರೆ.

Source: newsfirstlive.com Source link