ಮಾಳವಿಕಾ, ಶೃತಿ ಮತ್ತು ಸುಧಾರಾಣಿ ಅವರಿಂದ ಒಂದೊಳ್ಳೆ ಕೆಲಸ..

ಮಾಳವಿಕಾ, ಶೃತಿ ಮತ್ತು ಸುಧಾರಾಣಿ ಅವರಿಂದ ಒಂದೊಳ್ಳೆ ಕೆಲಸ..

ಕೆಜಿಎಫ್ ಚಾಪ್ಟರ್ 2 ಸಿನಿಮಾದಲ್ಲಿ ಹಿರಿಯ ನಟಿ ಶೃತಿ ಮತ್ತು ಸುಧಾರಾಣಿ ಕೆಲಸ ಮಾಡಿದ್ದಾರೆ ಅನ್ನೋ ವಿಚಾರವನ್ನ ತಿಳಿದುಕೊಂಡ್ವಿ.. ಆದ್ರೆ ನಟಿ ಶೃತಿ ಮತ್ತು ಸುಧಾರಾಣಿಯವರು ಒಂದೊಳ್ಳೆ ಕೆಲಸವನ್ನ ಮಾಡಿದ್ದಾರೆ, ಅದೇನು ಅನ್ನೊದು ನಿಮಗೆ ಗೊತ್ತಾ..? ಈ ಸ್ಟೋರಿ ನೋಡಿದ್ರೆ ನಮ್ಮ ಸ್ಯಾಂಡಲ್​ವುಡ್ ನಟಿಯರು ಗ್ರೇಟ್ ಅಂತ ನೀವು ಖಂಡತ ಹೇಳ್ತಿರಾ.

blank

ಶೃತಿ, ತಾರಾ, ಮಾಲಾಶ್ರೀ, ಸುಧಾರಾಣಿ, ಮಾಳವಿಕಾ, ಪ್ರೇಮಾ, ಅನುಪ್ರಭಾಕರ್ ಇವರೆಲ್ಲ 90ರ ದಶಕದ ಕನ್ನಡದ ಸ್ಟಾರ್ ನಟಿಮಣಿಯರು. ಕನ್ನಡದ ಜೊತೆ ಜೊತೆಗೆ ಅಕ್ಕ ಪಕ್ಕದ ಇಂಡಸ್ಟ್ರಿಗಳಲ್ಲೂ ಮಿಂಚಿ ಮಿನುಗಿದವರು. ಈ ನಟಿ ಮಣಿಯರಲ್ಲೆ ಆಗಾಗ ಒಟ್ಟಿಗೆ ಸೇರುತ್ತಾರೆ ಕಷ್ಟ ಸುಖಗಳನ್ನ ಹಂಚಿಕೊಳ್ಳುವ ಸ್ನೇಹಿತೆರಾಗಿ ಕಾಲ ಕಳೆಯುತ್ತಾರೆ.

blank

ಸುಮ್ನೆ ಆಗಾಗ ಸೇರಿಕೊಂಡು ಹರಟೆ ಹೊಡೆದು ಪಾರ್ಟಿ ಗಿರ್ಟಿ ಮಾಡಿ ಎಂಜಾಯ್ ಮಾಡಿದ್ರೆ ಅಷ್ಟು ವಿಶೇಷ ಏನ್ ಆಗ್ತಿದ್ದಿಲ್ಲ. ಆದ್ರೆ ಒಬ್ಬರ ಕಷ್ಟ ಒಬ್ಬರು ಮರುಗಬೇಕು, ಸಾತ್ವನದ ಸಹಕಾರ ನೀಡಬೇಕು. ಆಗ್ಲೇ ಸ್ನೇಹಕ್ಕೆ ಒಂದು ಬೆಲೆ ಮಾನವಿತೆ ನೆಲೆ. ಈ ಹಿಂದೆ ಈ 90ರ ದಶಕದ ಸ್ಟಾರ್ ಹೀರೋಯಿನ್ಸ್ ತಂಡ ಮೇಘನಾ ರಾಜ್ ಸರ್ಜಾ ಮನೆಗೆ ಹೋಗಿ ಸಾತ್ವಾನದ ನುಡಿಯನ್ನ ಆಡಿದ್ರು. ಮೊನ್ನೆ ಮಾಲಾಶ್ರೀ ಅವರ ಪತಿ ರಾಮು ಅವರ ಅಗಲಿಕೆಯಾದಗಲು ಶೃತಿ ಅವರು ಮನಮುಡಿಯೋ ಪತ್ರ ಬರೆದು ಅವರ ನೋವಿನಲ್ಲಿ ಭಾಗಿಯಾಗಿದ್ದರು.

blank

ಈಗ ನಟಿ ಶೃತಿ ಮತ್ತು ಸುಧಾರಾಣಿ ಹಾಗೂ ಮಾಳವಿಕಾ ಅವಿನಾಶ್ ಹಿರಿಯ ನಟಿ ಲೀಲಾವತಿ ಅವರ ಮನೆ ತೆರಳಿ ಅವರ ಆರೋಗ್ಯವನ್ನ ವಿಚಾರಿಸಿ ಬಂದಿದ್ದಾರೆ. ಲೀಲಾವತಿ ಅಮ್ಮನವರು ಕೆಲ ದಿನಗಳ ಹಿಂದೆ ಜಾರಿ ಬಿದ್ದು ಸೊಂಟಕ್ಕೆ ಪೆಟ್ಟು ಮಾಡಿಕೊಂಡಿದ್ದರು. ಈ ಕಾರಣಕ್ಕೆ ಲೀಲಾವತಿ ಅವನ್ನ ಶೃತಿ, ಸುಧಾರಾಣಿ ಹಾಗೂ ಮಾಳಿವಿಕಾ ಮಾತನಾಡಿಸಿ ಅವರಿಗೆ ಧೈರ್ಯ ಸ್ಥೈರ್ಯ ತುಂಬಿ ಬಂದಿದ್ದಾರೆ. ಒಟ್ಟಿನಲ್ಲಿ 90ರ ದಶಕದ ಸ್ಟಾರ್ ನಟಿಯರ ಈ ಒಳ್ಳೆಯ ಕೆಲಸ ಅನೇಕ ಮನಸುಗಳಿಗೆ ಆತ್ಮಸ್ಥೈರ್ಯ ತುಂಬುತ್ತಿದೆ.

Source: newsfirstlive.com Source link