ತಾಲಿಬಾನಿಗಳ ಅಟ್ಟಹಾಸ; ಭಾರತೀಯರಿಗೆ ತತ್​ಕ್ಷಣವೇ ಅಫ್ಘಾನ್​ ತೊರೆಯುವಂತೆ ಕೇಂದ್ರ ಸೂಚನೆ

ತಾಲಿಬಾನಿಗಳ ಅಟ್ಟಹಾಸ; ಭಾರತೀಯರಿಗೆ ತತ್​ಕ್ಷಣವೇ ಅಫ್ಘಾನ್​ ತೊರೆಯುವಂತೆ ಕೇಂದ್ರ ಸೂಚನೆ

ನವದೆಹಲಿ: ಅಫ್ಗಾನಿಸ್ತಾನದಲ್ಲಿ ಅಮೆರಿಕಾ ಸೇನೆ ವಾಪಸ್ಸಾದ ನಂತರ ತಾಲಿಬಾನ್ ಉಗ್ರರು ಬಹುತೇ ಅಫ್ಗಾನಿಸ್ತಾನವನ್ನ ಹಾಗೂ ಸರ್ಕಾರಿ ಸಂಸ್ಥೆಗಳನ್ನು ವಶಕ್ಕೆ ಪಡೆದುಕೊಂಡಿದೆ. ಅಫ್ಗಾನ್ ಸೈನಿಕರು ಹಾಗೂ ತಾಲಿಬಾನ್ ಉಗ್ರರ ನಡುವೆ ಅಂತರ್ಯುದ್ಧವೇ ಏರ್ಪಟ್ಟಿದೆ ನಿತ್ಯವೂ ಸಾವು ನೋವಿನ ಬಗ್ಗೆ ವರದಿಗಳಾಗುತ್ತಿವೆ.

ಇದನ್ನೂ ಓದಿ: ಆಫ್ಘಾನ್​​ನಲ್ಲಿ ತಾಲಿಬಾನಿಗಳ ಹೇಯ ಕೃತ್ಯ; ಟೈಟ್​ ಆಗಿರೋ ಬಟ್ಟೆ ಧರಿಸಿದ್ಕೆ ಯುವತಿಗೆ ಗುಂಡಿಟ್ಟ ಉಗ್ರರು

blank

ಈ ಹಿನ್ನೆಲೆ ಅಫ್ಗಾನಿಸ್ತಾನದಲ್ಲಿರುವ ಭಾರತೀಯರು ತಕ್ಷಣವೇ ಭಾರತಕ್ಕೆ ಹಿಂತಿರುಗಲು ಎಲ್ಲ ತಯಾರಿಗಳನ್ನೂ ತಕ್ಷಣವೇ ಮಾಡಿಕೊಳ್ಳುವಂತೆ ಅಫ್ಗಾನಿಸ್ತಾನದಲ್ಲಿರುವ ರಾಯಭಾರಿ ಕಚೇರಿ ಸಲಹೆ ನೀಡಿದೆ. ಅಲ್ಲದೇ ಅಫ್ಗಾನಿಸ್ತಾನದಲ್ಲಿರುವ ಭಾರತೀಯ ಕಂಪನಿಗಳು ತಕ್ಷಣವೇ ತಮ್ಮ ಯೋಜನೆಯಿಂದ ಭಾರತೀಯ ಕಾರ್ಮಿಕರನ್ನ ಹಿಂಪಡೆಯುವಂತೆ ಹೇಳಿದೆ.

ಇದನ್ನೂ ಓದಿ: ತಾಲಿಬಾನಿಗಳ ಮತ್ತೊಂದು ಭೀಕರ ಕೃತ್ಯ; ಆಫ್ಘಾನ್ ಸರ್ಕಾರದ ಮಾಧ್ಯಮ ಮುಖ್ಯಸ್ಥನ ಹತ್ಯೆ

blank

ಅಫ್ಗಾನಿಸ್ತಾನದಿಂದ ಹಲವು ದೇಶಗಳಿಗೆ ಈಗಾಗಲೇ ವೈಮಾನಿಕ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಭಾರತೀಯರು ತಮಗೆ ಲಭ್ಯವಿರುವ ವಾಣಿಜ್ಯವಿಮಾನಗಳ ಮಾಹಿತಿ ಪಡೆದು ಭಾರತಕ್ಕೆ ಮರಳಲು ತಯಾರಿ ನಡೆಸಿಕೊಳ್ಳಬೇಕು.

ಇದನ್ನೂ ಓದಿ: ತಾಲಿಬಾನಿಗಳ ವಿರುದ್ಧ ಅಫ್ಗಾನಿಸ್ತಾನದ ಯುದ್ಧ; 24 ಗಂಟೆಗಳಲ್ಲಿ 262 ಉಗ್ರರು ಬಲಿ

ಇನ್ನು ಅಫ್ಗಾನಿಸ್ತಾನದಲ್ಲಿ ವರದಿ ಮಾಡಲು ಭಾರತದಿಂದ ಅಫ್ಗಾನಿಸ್ತಾನಕ್ಕೆ ಪ್ರಯಾಣ ಬೆಳೆಸಿರುವ/ಬೆಳೆಸುತ್ತಿರುವ ಮಾಧ್ಯಮ ಸಿಬ್ಬಂದಿ ತಕ್ಷಣವೇ ತಾವು ಉಳಿದುಕೊಳ್ಳುತ್ತಿರುವ ಜಾಗದ ಮಾಹಿತಿಯನ್ನ ರಾಯಭಾರಿ ಕಚೇರಿಗೆ ನೀಡಬೇಕು ಎಂದು ರಾಯಭಾರಿ ಕಚೇರಿ ಪ್ರಕಟಣೆ ಹೊರಡಿಸಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಕರ್ತವ್ಯ ನಿರತ ಪತ್ರ ಕರ್ತನ ಹತ್ಯೆ; ತಾಲಿಬಾನಿಗಳ ರಕ್ಕಸ ಕೃತ್ಯ

Source: newsfirstlive.com Source link