ರಾಜಕೀಯ ಪಕ್ಷಗಳಿಗೆ ಚಾಟಿ: ಬಿಜೆಪಿ, ಕಾಂಗ್ರೆಸ್ ಸೇರಿ 8 ಪಕ್ಷಗಳಿಗೆ ‘ಸುಪ್ರೀಂ’ ದಂಡ ವಿಧಿಸಿದ್ದು ಯಾಕೆ..?

ರಾಜಕೀಯ ಪಕ್ಷಗಳಿಗೆ ಚಾಟಿ: ಬಿಜೆಪಿ, ಕಾಂಗ್ರೆಸ್ ಸೇರಿ 8 ಪಕ್ಷಗಳಿಗೆ ‘ಸುಪ್ರೀಂ’ ದಂಡ ವಿಧಿಸಿದ್ದು ಯಾಕೆ..?

ನವದೆಹಲಿ: ಮಹತ್ವದ ಬೆಳವಣಿಗೆ ಒಂದರಲ್ಲಿ ಇಂದು ಸುಪ್ರೀಂ ಕೋರ್ಟ್​ ಪ್ರಮುಖ 8 ರಾಜಕೀಯ ಪಕ್ಷಗಳಿಗೆ ಭಾರೀ ಮೊತ್ತದ ದಂಡವನ್ನ ವಿಧಿಸಿದೆ.

ಸಿಪಿಐ(ಎಂ)ಗೆ, ಎನ್​​ಸಿಪಿಗೆ ಬರೋಬ್ಬರಿ 5 ಲಕ್ಷ ರೂಪಾಯಿ ಹಾಗೂ ಬಿಜೆಪಿ, ಕಾಂಗ್ರೆಸ್​, ಜನತಾ ದಳ, ಆರ್​ಜೆಡಿ, ಸಿಪಿಐ, ಎಲ್​ಜೆಪಿ ಪಕ್ಷಗಳಿಗೆ ತಲಾ ಒಂದು ಲಕ್ಷ ರೂಪಾಯಿ ದಂಡವನ್ನ ವಿಧಿಸಿದೆ. 2020ರಲ್ಲಿ ನಡೆದ ಬಿಹಾರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನ್ಯಾಯಾಂಗ ನಿಂದನೆ ಮಾಡಿರುವ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ದಂಡವನ್ನ ವಿಧಿಸಿದೆ.

ದಂಡ ವಿಧಿಸಿದ್ದು ಯಾಕೆ..?
ವಿಧಾನಸಭೆ ಚುನಾವಣೆ ವೇಳೆ ತಮ್ಮ ಅಭ್ಯರ್ಥಿಗಳ ಅಪರಾಧಗಳ ಹಿನ್ನೆಲೆಯನ್ನ ಬಹಿರಂಗಪಡಿಸುವಲ್ಲಿ ವಿಫಲವಾಗಿರೋದಕ್ಕೆ ಸುಪ್ರೀಂಕೋರ್ಟ್​ ದಂಡ ವಿಧಿಸಿದೆ. 8 ಪಕ್ಷಗಳಿಗೆ ದಂಡ ವಿಧಿಸಿರುವ ಸುಪ್ರೀಂ ಕೋರ್ಟ್​, ಅಭ್ಯರ್ಥಿಗಳನ್ನ ಆಯ್ಕೆ ಮಾಡಿದ 48 ಗಂಟೆಗಳಲ್ಲಿ ಅಭ್ಯರ್ಥಿಗಳನ್ನ ಅವರ ವೆಬ್​ಸೈಟ್​ಗಳಲ್ಲಿ ಪ್ರಕಟಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಅದು ನಾಮಿನೇಷನ್ ಸಲ್ಲಿಸುವ ಎರಡು ವಾರಗಳ ಮೊದಲು ಅಲ್ಲ ಎಂದಿದೆ.

blank

ಈ ಹಿಂದೆ ವಿಚಾರಣೆ ಒಂದರಲ್ಲಿ ಸಂದರ್ಭದಲ್ಲಿ ಆದೇಶ ನೀಡಿದ್ದ ಸುಪ್ರೀಂಕೋರ್ಟ್​, ಯಾವುದೇ ಶಾಸಕ ಅಥವಾ ಸಂಸದರ ಮೇಲಿರುವ ಕ್ರಿಮಿನಲ್ ಪ್ರಕರಣಗಳನ್ನ ಸರ್ಕಾರ ದಿಢೀರ್ ಎಂದು ವಾಪಸ್ ಪಡೆದುಕೊಳ್ಳುವಂತಿಲ್ಲ. ಆಯಾ ರಾಜ್ಯಗಳ ಆದೇಶವಿಲ್ಲದೇ ನಾಯಕರ ಮೇಲಿನ ಕ್ರಿಮಿನಲ್ ಪ್ರಕರಣಗಳನ್ನ ಸರ್ಕಾರ ವಾಪಸ್ ಪಡೆದುಕೊಳ್ಳಬಾರದು ಅಂತಾ ಆದೇಶ ನೀಡಿತ್ತು.

ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ನ್ಯಾಯಾಂಗ ನಿಂದನೆ ಮಾಡಿವೆ ಎಂದು ವಕೀಲೆ ಆಶ್ವಿನಿ ಕುಮಾರ್ ಉಪಾಧ್ಯ ಅನ್ನೋರು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇವರು ಕ್ರಿಮಿನಲ್ ಅಪರಾಧ ಹಿನ್ನೆಲೆ ಉಳ್ಳ ನಾಯಕರು ಜೀವನ ಪರ್ಯಂತ ಯಾವುದೇ ಚುನಾವಣೆಗೆ ಸ್ಪರ್ಧಿಸದಂತೆ ಆದೇಶ ನೀಡಬೇಕು ಅಂತಾ ಕೋರಿ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ನ್ಯಾಯಾಂಗ ನಿಂದನೆ: ಬಿಜೆಪಿ, ಕಾಂಗ್ರೆಸ್​ ಸೇರಿ 8 ರಾಜಕೀಯ ಪಕ್ಷಗಳಿಗೆ ದಂಡ ವಿಧಿಸಿದ ಸುಪ್ರೀಂ ಕೋರ್ಟ್

Source: newsfirstlive.com Source link