RSS, BJP ನಾಯಕರ ಹೆಸರಲ್ಲಿ ವಂಚನೆ ಆರೋಪ: ಯುವರಾಜ್ ವಿರುದ್ಧ ಚಾರ್ಜ್​ಶೀಟ್

RSS, BJP ನಾಯಕರ ಹೆಸರಲ್ಲಿ ವಂಚನೆ ಆರೋಪ: ಯುವರಾಜ್ ವಿರುದ್ಧ ಚಾರ್ಜ್​ಶೀಟ್

ಬೆಂಗಳೂರು: ಆರ್​ಎಸ್​​ಎಸ್​-ಬಿಜೆಪಿ ಮುಖಂಡರ ಹೆಸರು ಹೇಳಿಕೊಂಡು ವಂಚಿಸುತ್ತಿದ್ದ ಆರೋಪ ಕೇಳಿಬಂದಿರುವ ಯುವರಾಜ್ ಅಲಿಯಾಸ್​ ಸ್ವಾಮಿ ವಿರುದ್ಧ ಸಿಸಿಬಿ ಅಧಿಕಾರಿಗಳು ಚಾರ್ಜ್​​ಶೀಟ್ ಸಲ್ಲಿಸಿದ್ದಾರೆ. ಚಾರ್ಜ್​​ಶೀಟ್​ಗೆ ಸಂಬಂಧಿಸಿದ ಕಂಪ್ಲೀಟ್ ಮಾಹಿತಿ ನ್ಯೂಸ್​​ಫಸ್ಟ್​ಗೆ ಲಭ್ಯವಾಗಿದ್ದು, ಅದರ ವಿವರ ಹೀಗಿದೆ.

ಚಾರ್ಜ್ ಶೀಟ್ 1
ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಕೇಸ್ ನಂಬರ್ 12/2021 ಅಡಿಯಲ್ಲಿ ಯುವರಾಜ್ ಅಲಿಯಾಸ್ ವಿರುದ್ಧ ಎಇಇ ಹುದ್ದೆ ಕೊಡಿಸುವುದಾಗಿ ಲಕ್ಷಾಂತರ ಹಣ ಪಡೆದು ವಂಚಿಸಿರುವ ಬಗ್ಗೆ ದೂರು ದಾಖಲಾಗಿತ್ತು. ರಾಜಾಜಿನಗರ ನಿವಾಸಿ ಜಿ ನರಸಿಂಹ ಮೂರ್ತಿಯವರಿಗೆ ವಂಚನೆ ಮಾಡಿರುವ ಆರೋಪ ಕೇಳಿಬಂದಿತ್ತು. ವಾಪಸ್ ಹಣ ಕೇಳಿದಾಗಿ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿರುವ ಆರೋಪ ಯುವರಾಜ್ ಮೇಲಿತ್ತು. ಈ ಸಂಬಂಧ 9 ಮಂದಿ ಸಾಕ್ಷಿಗಳ ಸಮೇತ ಸಿಸಿಬಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಇನ್ನು ಈ ಕೃತ್ಯವನ್ನ ಪೊಲೀಸರ ಮುಂದೆ ಯುವರಾಜ್ ಒಪ್ಪಿಕೊಂಡಿದ್ದಾನೆ ಅಂತಾ ಚಾರ್ಜ್​​ಶೀಟ್​ನಲ್ಲಿ ತಿಳಿಸಿದ್ದಾರೆ.

blank

ಕೇಸ್​ನಲ್ಲಿ ಯುವರಾಜ್ ಮೇಲೆ ಬಂದಿದ್ದ ಆರೋಪ!
ರಾಜಾಜಿನಗರ ಡಾಕ್ಟರ್ ನರಸಿಂಹ ಸ್ವಾಮಿಯ ಪುತ್ರ ರವೀಂದ್ರ ಎಂ ಟೆಕ್ ಮುಗಿಸಿದ್ದ. ಅವರಿಗೆ ಲೋಕೇಶ್ ಎಂಬಾತನ ಮೂಲಕ ಈ ಯುವರಾಜ್ ಪರಿಚಯವಾಗಿದ್ದನಂತೆ. ಆದರಂತೆ 20/10/19ರಲ್ಲಿ ಭೇಟಿಯಾಗಿ, ನಾನು ಆರ್​ಎಸ್​ಎಸ್ ಮುಖಂಡ, ಬಿಜೆಪಿ ಮುಖಂಡರು ನನಗೆ ಪರಿಚಯ ಅದರಲ್ಲೂ ಕೇಂದ್ರದ ನಾಯಕರು ಪರಿಚಯ ಅಂತಾ ಹೇಳಿದ್ದನಂತೆ. ನಾನು ನನಗೆ ಗೊತ್ತಿರುವ ಮಂತ್ರಿಯ ಬಳಿ ಮಾತನಾಡಿ ಎಇಇ ಕೆಲಸ ಕೊಡಿಸುವುದಾಗಿ ಹೇಳಿದ್ದನಂತೆ. ಅದಕ್ಕೆ ಆತ 75 ಲಕ್ಷ ಲಂಚವನ್ನು ಕೇಳಿದ್ದನಂತೆ. ಅದನ್ನು ಕ್ಯಾಷ್ ಮೂಲಕವೇ ಕೊಡಬೇಕು ಅಂದಿದ್ದ. ಅದಕ್ಕೆ ಒಪ್ಪಿ 30 ಲಕ್ಷ ರೂಪಾಯಿಯನ್ನು ನೀಡಿದ್ದಾರೆ. ಖುದ್ದು ಯುವರಾಜ್ ಮನೆಗೆ ಹೋಗಿ ಆತನಿಗೆ ಹಣವನ್ನ ನೀಡಿದ್ದಾನೆ. ಆದರೆ ಅಲ್ಲಿಂದ ಇಲ್ಲಿತನಕ ಆತ ಕೆಲಸ ಕೊಡಿಸಿಲ್ಲ. ಹಣವನ್ನು ವಾಪಸ್ಸು ಮಾಡಿಲ್ಲವಂತೆ. ಈ ಬಗ್ಗೆ ಕೇಳಲು ಹೋದಾಗ ಜೀವ ಬೆದರಿಕೆ ಹಾಕಿದ್ದಾನೆ. ನೀನು ಕೊಟ್ಟಿರುವ ಹಣವನ್ನು ರೌಡಿಗಳಿಗೆ ಕೊಟ್ಟು ಸುಪಾರಿ ನೀಡುತ್ತಾನೆ. ನೀನು ಕೊಟ್ಟ ಹಣದಿಂದಲೇ ನಿನ್ನನ್ನ ಕೊಲ್ಲಿಸುವುದಾಗಿ ಜೀವ ಬೆದರಿಕೆ ಹಾಕಿರುವ ಆರೋಪ ಇದೆ.

ಯುವರಾಜ್ ವಿರುದ್ಧದ ಸಾಕ್ಷಿ 1 ಲೊಕೇಶ್:

ಲೋಕೇಶ್ ಒಬ್ಬ ಕ್ಯಾಬ್ ಚಾಲಕನಾಗಿದ್ದು, 2017ರಲ್ಲಿ ಯುವರಾಜ್ ಸ್ವಾಮಿ ಕ್ಯಾಬ್ ಬುಕ್ ಮಾಡಿಕೊಂಡು ಏರ್ ಪೋರ್ಟ್ ನಿಂದ ಮನೆಗೆ ಬಂದಿದ್ದ. ಈ ವೇಳೆ ಎಂದಿನಂತೆ ಯುವರಾಜ್ ತನ್ನ ಬಗ್ಗೆ ತಾನೇ ಹೇಳಿಕೊಳ್ಳಲು ಶುರುಮಾಡಿದ್ನಂತೆ. ಎಂದಿನಂತೆ ಆರ್ಎಸ್ಎಸ್ ನಾಯಕರು & ಬಿಜೆಪಿ ನಾಯಕರು ಕ್ಲೋಸ್ ಅಂತಾ ಹೇಳಿದ್ದ. ನಿನಗೆ ಏನಾದ್ರೂ ಕೆಲಸ ಆಗಬೇಕಿದ್ರೆ ಹೇಳು ಅಂದಿದ್ದನಂತೆ. ಜೊತೆಗೆ ಅಂದಿನಿಂದ ಲೊಕೇಶ್ ನ ಕರೆಯಿಸಿಕೊಂಡು ಆತ ಏರ್ಪೋರ್ಟ್​ಗೆ ಕರೆದೊಯ್ದುತ್ತಿದ್ದನಂತೆ. ಇದೇ ರೀತಿ ದೂರುದಾರ ನರಸಿಂಹಸ್ವಾಮಿಯವರ ಮಗ ರವೀಂದ್ರಗೆ ಹೇಳಿದ್ದನಂತೆ.

blank

ಯುವರಾಜ್ ವಿರುದ್ಧದ ಸಾಕ್ಷಿ 2 ಹರೀಶ್:

ನರಸಿಂಹಸ್ವಾಮಿಯವರ ಸಂಬಂಧಿಯಾಗಿದ್ದು, ಅವರ ಜೊತೆ ಯುವರಾಜ್ ಮನೆಗೆ ಹೋಗಿದ್ದೆವು. ಅಲ್ಲಿ ಯುವರಾಜ್ ಡ್ರೈವರ್ ಉಮೇಶ್ ಬಂದು ನಮ್ಮನ್ನು ನಾಗರಬಾವಿಯ ಎನ್​ಜಿಇಎಫ್ ಬಡಾವಣೆಯಲ್ಲಿನ ಯುವರಾಜ್ ಮನೆಗೆ ಹೋಗಿ ಮಾತುಕತೆ ನಡೆಸಿದ್ದೇವು. ಮನೆಯ ನೆಲಮಡಿಯಲ್ಲಿ ಕುಳಿತು ಮಾತನಾಡಿ, 2 ಸಾವಿರ ಮುಖಬೆಲೆಯ 15 ಕಟ್ ಗಳಲ್ಲಿ 30 ಲಕ್ಷನ್ನು ನೀಡಿ ಬಂದಿದ್ದೆವು. ಅದನ್ನ ನೀಡಿದಕ್ಕೆ ನಾನು ಸಾಕ್ಷಿಯಾಗಿದ್ದೇನೆ.

ಯುವರಾಜ್ ವಿರುದ್ಧದ ಸಾಕ್ಷಿ 3 ಡ್ರೈವರ್ ಉಮೇಶ್:

ನಾನು ಯುವರಾಜ್ ಬಳಿ 2016 ರಿಂದ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದೇನೆ. 2019 ರಲ್ಲಿ ನರಸಿಂಹಸ್ವಾಮಿ ತನ್ನ ಸ್ನೇಹಿತರ ಜೊತೆ ಯುವರಾಜ್ ಮನೆಗೆ ಬಂದಿದ್ದರು. ನಾನೇ ಬಾಗಿಲು ತೆಗೆದು ಅವರನ್ನು ಒಳಗೆ ಕೂರಿಸಿದ್ದೆ. ಈ ವೇಳೆ ಯುವರಾಜ್ ಜೊತೆ ಅವರ ಮಗ ರವೀಂದ್ರನಿಗೆ ಎಇಇ ಕೆಲಸ ಮಾಡಿಸಿಕೊಳ್ಳಲು ಬಂದು ಮಾತನಾಡಿದ್ದರು. ಈ ವೇಳೆ ನೆಲಮಹಡಿಯಲ್ಲಿ ಅವರು 30 ಲಕ್ಷವನ್ನು ಕೊಟ್ಟಿದ್ರು. ಅಂದು ಅದೇ ಹಣದಲ್ಲಿ ನನಗೆ 20 ಸಾವಿರ ಸಂಬಳವನ್ನು ಯುವರಾಜ್ ನೀಡಿದ್ದರು.

ಆರೋಪಿ ಯುವರಾಜ್ @ ಸ್ವಾಮಿಯಿಂದ ತಪ್ಪೊಪ್ಪಿಗೆ

2019ರ ಮಾರ್ಚ್​​ನಲ್ಲಿ ಏರ್​ಪೊರ್ಟ್​ನಲ್ಲಿ ಡ್ರೈವರ್​ ಆಗಿ ಕೆಲಸ ಮಾಡುವ ಲೋಕೇಶ್​ ಕಾರನ್ನ ನಾನು ಬುಕ್ ಮಾಡಿಕೊಂಡಿದ್ದೆ. ಈ ವೇಳೆ ಆತನ ಜೊತೆ ಪರಿಚಯವಾಗಿ ಆನಂತರ ಆತನ ಮೂಲಕ ಪಿಕ್ ಅಪ್ ಡ್ರಾಫ್ ಮಾಡಿಸಿಕೊಳ್ಳುತ್ತಿದೆ. 2019ರಲ್ಲಿ ಆತನ ಮೂಲಕ ನರಸಿಂಹಸ್ವಾಮಿ ಎಂಬುವವರು ತನ್ನ ಮಗನಿಗೆ ಎಇಇ ಕೆಲಸ ಕೊಡಿಸಿ ಅಂತಾ ಬಂದಿದ್ದು ನಿಜ.. ಅದಕ್ಕೆ ನಾನು ನನ್ನ ಮನೆಯ ನೆಲಮಡಿಯಲ್ಲಿ ಕುಳಿತು ಮಾತನಾಡಿ 75 ಲಕ್ಷ ಹಣವನ್ನು ಕ್ಯಾಷ್ ಕೇಳಿದ್ದೆ. ಅದಕ್ಕೆ ಒಪ್ಪಿದ ಅವರು 30 ಲಕ್ಷ ಹಣವನ್ನು ಹಣದಲ್ಲಿ ಕೊಟ್ಟಿದ್ದರು. ನಾನು ಅದನ್ನು ನಾನು ನನ್ನ ಮತ್ತು ಕುಟುಂಬದ ಖರ್ಚಿಗಾಗಿ ಬಳಸಿಕೊಂಡಿದ್ದೇನೆ. ಅವರಿಗೆ ಇಲ್ಲಿತನಕ ಯಾವುದೇ ಕಲಸವನ್ನು ಸಹ ಕೊಡಿಸಿಲ್ಲ. ಹಾಗೂ ಕೇಳಲು ಬಂದಾಗಿ ಜೀವ ಬೆದರಿಕೆ ಹಾಕಿದ್ದು ನಿಜ. ಅದನ್ನು ಜಾಮೀನು ಪಡೆದು ಹೊರ ಬಂದ ತಕ್ಷಣ ವಾಪಸ್ ನೀಡುತ್ತೇನೆ.

blank

ಕೇಸ್ ನಲ್ಲಿ ಯುವರಾಜ್ ಮೇಲೆ ಬಂದಿದ್ದ ಆರೋಪ

2016 ರಲ್ಲಿ ತನ್ನ ಬಳಿ ಡ್ರೈವರ್ ಆಗಿ ಕೆಲಸಕ್ಕೆ ಬಂದಿದ್ದ ಉಮೇಶ್ ಅಕೌಂಟ್ ಅನ್ನ ದುರ್ಬಳಕೆ ಮಾಡಿಕೊಂಡಿದ್ದನಂತೆ ಯುವರಾಜ್ @ ಸ್ವಾಮಿ. ತಾನೇ ಕರ್ನಾಟಕ ಬ್ಯಾಂಕ್​ನಲ್ಲಿ ಅಕೌಂಟ್ ತೆರೆಯಲು ಹೇಳಿ, ಬಳಿಕ ಅವರ ಅಕೌಂಟ್ ಗೆ ಕೋಟಿಗಟ್ಟಲೇ ಕ್ರೆಡಿಟ್ ಮಾಡಿದ್ದಾರೆ. ಇನ್ಕಮ್ ಟ್ಯಾಕ್ಸ್ ಡಿಪಾರ್ಟಮೆಂಟ್ ನಿಂದ ನೊಟೀಸ್ ಬಂದಾಗ ವಿಷಯ ತಿಳಿದು ಉಮೇಶ್ ಯುವರಾಜ್ ಪ್ರಶ್ನಿಸಿದಾಗ, ಯುವರಾಜ್ & ಪತ್ನಿ ಪ್ರೇಮ ಹಲ್ಲೆ ಮಾಡಿ ಮನೆಯಾಚೆ ಹಾಕಿದ ಆರೋಪ ಇದೆ.

ಯುವರಾಜ್ ವಿರುದ್ಧದ ಸಾಕ್ಷಿ 1 ಡ್ರೈವರ್ ಉಮೇಶ್

ಯುವರಾಜ್ @ ಸ್ವಾಮಿ ಮನೆಗೆ ಅನೇಕ ಮಂದಿ ಬಂದು ಹೋಗಿದ್ದಾರೆ. ಬೇರೆ ಬೇರೆ ಏನೇನೋ ಕೆಲಸಗಳ ಬಗ್ಗೆ ಹೇಳಿಕೊಂಡು ಮನೆಗೆ ಬರುತ್ತಿದ್ದರು. ಈ ವೇಳೆ 2019 ರಲ್ಲಿ ಕರ್ನಾಟಕ ಬ್ಯಾಂಕ್​ಗೆ ಹೋಗಿ ಅಲ್ಲಿನ ಮ್ಯಾನೇಜರ್ ಗೆ ಹೇಳಿದ್ದೇನೆ. ಅಕೌಂಟ್ ಓಪನ್ ಮಾಡು ಅಂತಾ ಹೇಳಿದ್ದರು. ಅಲ್ಲಿ ಹೋಗಿ ನಾನು ಅಕೌಂಟ್ ಒಪನ್ ಮಾಡಿಸಿದ ಮೇಳೆ ಒಮ್ಮೆ 5 ಲಕ್ಷ ಅರ್ಜೆಂಟ್ ಇದೆ ನಿನ್ನ ಅಕೌಂಟ್​್ಗೆ ಹಾಕಿಸುತ್ತೇನೆ. ತೆಗೆದುಕೊಂಡು ಬಾ ಎಲ್ಲರಿಗೂ ಸಂಬಳ ಕೊಡಬೇಕು ಅಂತಾ ಹಾಕಿದ್ರು. ಆದಾದ ಬಳಿಕ ಆ ಎಟಿಎಂ ಕಾರ್ಡ್ ಪಡೆದುಕೊಂಡು ಆಗಾಗ ನನ್ನ ಚೆಕ್ ಬುಕ್​ನಲ್ಲಿ ಸಹಿ ಪಡೆದು ಚೆಕ್ ಪಡೆದುಕೊಳ್ಳುತ್ತಿದ್ದರು. ಒಮ್ಮೆ ಡೌಟ್ ಬಂದು, ಚೆಕ್ ಮಾಡಿದಾಗ ಅಕೌಂಟ್​ನಲ್ಲಿ 1.4 ಕೋಟಿ ಹಾಕಿರುವುದು ಪತ್ತೆಯಾಗಿತ್ತು. ಆಗ ನಾನು ಕೇಳಿದಾಗ, ನನಗೆ ಸೆಂಟ್ರಲ್ ಮಿನಿಸ್ಟರ್, ಐಟಿ ಇಲಾಖೆ ಪರಿಚಯವಿದೆ ಏನು ಭಯಪಡಬೇಡ ಅಂದಿದ್ದರು. ಅದಾದ ಕೆಲ ದಿನಗಳ ನಂತರ ಐಟಿ ಇಲಾಖೆಯಿಂದ ನೋಟಿಸ್ ಬಂದಿತ್ತು. ಆಗ ನಾನು ಪುನಃ ಕೇಳಿದಾಗಿ ಕಿರುಕುಳ ನೀಡಲು ಶುರುಮಾಡಿದ್ರು. ಅಲ್ಲದೇ ಅದನ್ನ ಸರಿ ಮಾಡುತ್ತೆವೆ ಅಂತಾ 4 ಖಾಲಿ ಹಾಳೆಗಳಿಗೆ ಸಹಿ ಹಾಕಿಸಿಕೊಂಡ್ರು. ಆನಂತರ ಕೆಲ ದಿನಗಳ ನಂತರ ನಾನು ಕೆಲಸ ಬಿಡುವುದಾಗಿ ಹೇಳಿದೆ. ಆಗ ಇಲ್ಲ ನೀನು ಕೆಲಸಕ್ಕೆ ಬರಲೇ ಬೇಕು ಅಂತಾ ಕರೆಯಿಸಿ ಯುವರಾಜ್ & ಪ್ರೇಮ ಇಬ್ಬರು ಹಲ್ಲೆ ಮಾಡಿದ್ದರು. ಇದರಿಂದ ನೊಂದು ನಾನು ಅನ್ನಪೂರ್ಣೇಶ್ವರಿ ನಗರ ಠಾಣೆಗೆ ದೂರು ನೀಡಿದ್ದೇನೆ.

ಕೇಸ್ ನಂಬರ್ 40/2020 ಸೆನ್ ಪೊಲೀಸ್ ಠಾಣೆ

ಮೇ 2020 ರಲ್ಲಿ ಬಿಜೆಪಿ ಕಾರ್ಯಕರ್ತ ಮಧುರಾಜ್ ಜೊತೆಯಲ್ಲಿ ಯುವರಾಜ್​ನ ಕರೆದುಕೊಂಡು ಸುಧೀಂದ್ರ ರೆಡ್ಡಿ ಮನೆಗೆ ಹೋಗಿದ್ದನಂತೆ. ನಿಮಗೆ ಕೆ.ಎಸ್.ಆರ್ ಟಿ ಛೇರ್ಮನ್ ಹುದ್ದೆ ಕೊಡಿಸುವುದಾಗಿ ನಂಬಿಸಿದ್ದರಂತೆ. ಅದಕ್ಕಾಗಿ 1 ಕೋಟಿ ಹಣವನ್ನು ಪಡೆದು ಹುದ್ದೆ ಕೊಡಿಸದೇ ವಂಚನೆ ಮಾಡಿದ್ದಾನಂತೆ. ಬಳಿಕ ಮೊದ ಮೊದಲು ಫೋನ್ ರಿಸಿವ್ ಮಾಡದೇ ತಪ್ಪಿಸಿಕೊಳ್ಳುತ್ತಿದ್ದನಂತೆ. ಆನಂತರ ನಿನಗೆ ಹಣ ವಾಪಸ್ಸು ಕೊಡಲ್ಲ. ಹಣ ಕೇಳಿದ್ರೆ ನಿನಗೊಂದು ಗತಿ ಕಾಣಿಸುತ್ತೆನೆಂದು ಬೆದರಿಕೆ. ಈ ಬಗ್ಗೆ ಯಾರ ಬಳಿಯಾದ್ರೂ ಚರ್ಚೆ ಮಾಡಿದ್ರೆ ಹುಷಾರ್ ಅಂತಾ ಬೆದರಿಕೆ ಆರೋಪ ಯುವರಾಜ್ ಮೇಲೆ ಇದೆ.

ಯುವರಾಜ್ ವಿರುದ್ಧದ ಸಾಕ್ಷಿ 1 ಸುಧೀಂದ್ರ ರೆಡ್ಡಿ

2019ರಲ್ಲಿ ನನಗೆ ಬಿಜೆಪಿಯ ಕಾರ್ಯಕರ್ತ ಮಧುರಾಜ್ ಪರಿಚಯವಾಗಿದ್ದ. ಆತ ಮೇ ತಿಂಗಳ ಮೊದಲ ವಾರ 2020 ರಲ್ಲಿ ನಮ್ಮ ಮನೆಗೆ ಯುವರಾಜ್ @ ಸ್ವಾಮಿ ಎಂಬಾತನನ್ನು ಕರೆದುಕೊಂಡು ಬಂದ. ಅವರು ನಾನು ಬಿಜೆಪಿ ನಾಯಕರ ಭವಿಷ್ಯ ಹೇಳುತ್ತೇನೆ ಅಂತಾ ಪರಿಚಯ ಮಾಡಿಕೊಡು, ಅವರ ಜೊತೆ ಇರುವ ಫೋಟೋಗಳನ್ನು ನನಗೆ ತೋರಿಸಿದ್ರು. ಅದನ್ನು ನಾನು ನಂಬಿದ ಬಳಿಕ ನಿಮಗೆ ಭವಿಷ್ಯದಲ್ಲಿ ಉನ್ನತ ಹುದ್ದೆಗೆ ಹೋಗುವ ಲಕ್ಷಣಗಳಿವೆ ಅಂತಾ ನಂಬಿಸಿದ್ರು. ನಿಮಗೆ KSRTC ಚೇರ್ಮನ್ ಹುದ್ದೆ ಕೊಡಿಸುತ್ತೇನೆ ಅಂತಾ ಹೇಳಿದ್ರು. ಅದಕ್ಕೆ 1 ಕೋಟಿ ಹಣಕ್ಕೆ ಡಿಮ್ಯಾಂಡ್ ಇಟ್ಟರು. ಅದಕ್ಕೆ ಒಪ್ಪಿ 4 ವಾರ ಚೆಕ್ ನಲ್ಲಿ ಹಾಗೂ 3 ಬಾರಿ ಕ್ಯಾಷನಲ್ಲಿ 1 ಕೋಟಿ ಹಣ ನೀಡಿದ್ದನೆ. ಆನಂತರ ನೋಡಿದ್ರೆ ನನಗೆ ಯಾವುದೇ ಕೆಲಸ ಕೊಡಿಸಿಲ್ಲ. ಕಾರಣ ನನಗೆ ಕೊರೊನಾ ಅಂತಾ ಕೆಲ ದಿನ ಡ್ರಾಮಾ ಮಾಡಿ ಜೀವಬೆದರಿಕೆ ಹಾಕಿರುವ ಆರೋಪ ಇದೆ.

blank

ಆರೋಪಿ ಯುವರಾಜ್ @ ಸ್ವಾಮಿಯಿಂದ ತಪ್ಪೊಪ್ಪಿಗೆ
ನನಗೆ ಗೋವಿಂದರಾಜನಗರದ ಬಿಜೆಪಿ ಕಾರ್ಯಕರ್ತ ಮಧುರಾಜ್ ಮೂಲಕ ಸುಧೀಂದ್ರ ರೆಡ್ಡಿ ಎಂಬಾತ 2020 ರ ಮೇ ತಿಂಗಳಲ್ಲಿ ಪರಿಚಯವಾದ್ರು. ಅವರಿಗೆ ಕೆಎಸ್ಆರ್ಟಿಸಿ ಛೇರ್ ಮನ್ ಹುದ್ದೆ ಕೊಡಿಸುವುದಾಗಿ ನಾನು ಹೇಳಿದ್ದು ನಿಜ. ಅದಕ್ಕೆ ಅವರ ಬ್ಯಾಂಕ್ ಖಾತೆಯಿಂದ & ಕ್ಯಾಶ್ ಮೂಲಕ 1 ಕೋಟಿ ರೂಪಾಯಿ ಪಡೆದುಕೊಂಡಿದ್ದೇನೆ. ಆದರೆ ಅವರಿಗೆ ನಾನು ಕೆಲಸವನ್ನು ಕೊಡಿಸಿಲ್ಲ. ಹಾಗೂ ಅವರಿಂದ ಪಡೆದ ಹಣವನ್ನು ನಾನು ನನ್ನ ಮನೆಯಲ್ಲಿ 26 ಲಕ್ಷ ಮನೆಯಲ್ಲಿ ಇಟ್ಟಾಗ, ಪೊಲೀಸರು ಮಾಡಿದ್ದಾರೆ. ಉಳಿದ ಹಣವನ್ನು ಕಾಡುಕೊತ್ತನಹಳ್ಳಿ ಗ್ರಾಮದ ತೋಟದ ಮನೆಯ ಬೆಡ್ ರೂಂ ನ ಬೀರುವಿನಲ್ಲಿ ಇಟ್ಟಿದ್ದೇನೆ. ಅದನ್ನು ನೀವು ಕರೆದುಕೊಂಡು ಹೋದರೆ ನೀಡುತ್ತೇನೆ. ಮತ್ತಷ್ಟು ಹಣವನ್ನು ಕಾರುಗಳ ಖರೀದಿಗೆ ಬಳಸಿಕೊಂಡಿದ್ದೇನೆ.
ಇನ್ನು ಯುವರಾಜ್ ಮನೆಯ ಮೇಲೆ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ ಬರೋಬ್ಬರಿ 89ಕ್ಕೂ ಹೆಚ್ಚು ದಾಖಲೆಗಳ ಸೀಜ್ ಮಾಡಿದ್ದರು. ಯುವರಾಜ್ ಪರ್ಸನಲ್ ಹಾಗೂ ಬ್ಯಾಂಕ್ & ಆಸ್ತಿ ದಾಖಲೆಗಳನ್ನ ಸೀಜ್ ಮಾಡಿದ್ದರು. ಈ ವೇಳೆ ಅನೇಕ ಗಣ್ಯರಿಗೆ ಸಂಬಂಧಿಸಿದ ದಾಖಲೆಗಳು ಸಹ ಸಿಕ್ಕಿದ್ದವು.

ಚಾರ್ಜ್ ಶೀಟ್​ನಲ್ಲಿ ಸಿಕ್ಕ ದಾಖಲೆಗಳು ಏನು..?

  • ಸಚಿವ ಮುರಗೇಶ್ ನಿರಾಣಿ ಲೇಟರ್ ಹೆಡ್ & ಬಯೋಡೆಟಾ
  • ಪ್ರಮೋದ್ ಮಧ್ವರಾಜ್ ಲೇಟರ್ ಹೆಡ್ & ಬಯೋಡೆಟಾ
  • ಉಮೇಶ್ ಕತ್ತಿಯವರ ಲೇಟರ್ ಹೆಡ್ & ಬಯೋಡೆಟಾ
  • ಶ್ರೀರಾಮುಲುರವರಿಗೆ ಸೇರಿದ ಕೆಲ ದಾಖಲೆಗಳು ಸಹ ಸೀಜ್
  • ಮುತ್ತಪ್ಪ ರೈಗೆ ಸೆಕ್ಯೂರಿಟಿ ಕೋರಿ ಶ್ರೀರಾಮುಲು ಹೆಸರಲ್ಲಿ ಪತ್ರ
  • ಶ್ರೀರಾಮುಲು ಲೇಟರ್ ಹೆಡ್ ನಲ್ಲಿ ಗೃಹ ಇಲಾಖೆಗೆ ಬರೆದಿರುವ ಪತ್ರ
  • ಬಿಜೆಪಿ ಪಾರ್ಟಿ ಹೆಸರಿನ ಅನೇಕ ಲೇಟರ್ ಹೆಡ್ ಸಮೇತ ಪತ್ರಗಳು
  • ಉಪಚುನಾವಣೆಗೆ ವಸಂತ್ ಬೆಳವಾಯಿ ಟಿಕೇಟ್ ಕೋರಿಕೆ ಪತ್ರ
  • ಟಿ ಶ್ಯಾಮ್ ಭಟ್ ವಯಕ್ತಿಕ ಸೇವಾ ವಿವಿರ ಇರುವ ದಾಖಲೆಗಳು
  • ನಿವೃತ್ತ ಜಡ್ಜ್ ಇಂದ್ರಕಲಾ ಅವರ ಪರ್ಸನಲ್ ಪ್ರೋಫೈಲ್​​ಗಳು ಲಭ್ಯ

ವಿಶೇಷ ವರದಿ: ವಿಷ್ಣು ಪ್ರಸಾದ್, ಕ್ರೈಂ ಬ್ಯೂರೋ

Source: newsfirstlive.com Source link