ಧನುಷ್​​ ಜತೆ ಫೈಟ್​ ಶೂಟ್​​ ಮಾಡುವಾಗ ಪ್ರಕಾಶ್ ರೈ ಕೈಗೆ ಗಾಯ​; ಶಸ್ತ್ರಚಿಕಿತ್ಸೆಗೆ ಸಿದ್ಧತೆ

ಧನುಷ್​​ ಜತೆ ಫೈಟ್​ ಶೂಟ್​​ ಮಾಡುವಾಗ ಪ್ರಕಾಶ್ ರೈ ಕೈಗೆ ಗಾಯ​; ಶಸ್ತ್ರಚಿಕಿತ್ಸೆಗೆ ಸಿದ್ಧತೆ

ಚೆನ್ನೈ: ತಮಿಳು ನಟ ಧನುಷ್​ ಹೊಸ ಸಿನಿಮಾದಲ್ಲಿ ನಟಿಸುವಾಗ ನಟ ಪ್ರಕಾಶ್​​ ರಾಜ್​ ತೀವ್ರ ಗಾಯಗೊಂಡಿದ್ದಾರೆ. ಸನ್​ ಪಿಕ್ಚರ್ಸ್​ ಸಂಸ್ಥೆ ನಿರ್ಮಾಣ ಮಾಡುತ್ತಿರುವ ಡಿ44 ಸಿನಿಮಾದ ಫೈಟಿಂಗ್ ಸಿಕ್ವೇನ್ಸ್​​ನಲ್ಲಿ ಬಿದ್ದು ಪ್ರಕಾಶ್​​​ ರಾಜ್​​​ ಕೈಗೆ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಇನ್ನು, ಫೈಟಿಂಗ್​​ ಸೀನ್​​ ಮುಗಿಸಿದ ನಂತರ ವೈದ್ಯರಿಗೆ ತೋರಿಸಿದ ವೇಳೆ ಕೈಗೆ ಬಲವಾದ ಪೆಟ್ಟು ಬಿದ್ದಿರೋದು ಬೆಳಕಿಗೆ ಬಂದಿದೆ. ಸದ್ಯ ಪ್ರಕಾಶ್​​ ರಾಜ್​​​ ಚೆನ್ನೈನಿಂದ ಹೈದರಾಬಾದ್​​ ಕಡೆಗೆ ಹೊರಟಿದ್ದು, ಕೈಗೆ ಸರ್ಜರಿ ಮಾಡಿಸಿಕೊಳ್ಳಲಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಪ್ರಕಾಶ್​ ರಾಜ್​​, ಕೈಗೆ ಸಣ್ಣ ಗಾಯವಾಗಿದೆ. ಯಾರು ಹೆದರುವ ಅಗತ್ಯವೇನಿಲ್ಲ. ನಾನು ವೈದ್ಯರ ಸಲಹೆ ಮೇರೆಗೆ ಹುಷಾರಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಹೈದರಾಬಾದಿನ ಖಾಸಗಿ ಆಸ್ಪತ್ರೆಯಲ್ಲಿ ಸ್ನೇಹಿತ ಡಾ. ಗುರುವಾರೆಡ್ಡಿ ಕಡೆಯಿಂದ ಕೈಗೆ ಸರ್ಜರಿ ಮಾಡಿಸಿಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.

Source: newsfirstlive.com Source link