ವಿರೋಧದ ಮಧ್ಯೆಯೂ ಪಂಜಾಬ್​ನಲ್ಲಿ ಸ್ಕೂಲ್ ಓಪನ್; ಕೇವಲ 2 ಶಾಲೆಯ 20 ಮಕ್ಕಳಿಗೆ ಕೊರೊನಾ

ವಿರೋಧದ ಮಧ್ಯೆಯೂ ಪಂಜಾಬ್​ನಲ್ಲಿ ಸ್ಕೂಲ್ ಓಪನ್; ಕೇವಲ 2 ಶಾಲೆಯ 20 ಮಕ್ಕಳಿಗೆ ಕೊರೊನಾ

ನವದೆಹಲಿ: ಕೊರೊನಾದ ಮೂರನೇ ಅಲೆಯ ಆತಂಕದಲ್ಲಿ ಇಡೀ ದೇಶ ಇದೆ. ಇದೀಗ ಪಂಜಾಬ್​ನ ಲೂಧಿಯಾನದಿಂದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಲೂಧಿಯಾನದಲ್ಲಿರುವ ಎರಡು ಶಾಲೆಗಳಲ್ಲಿ 20 ಮಕ್ಕಳಲ್ಲಿ ಕೊರೊನಾ ಕಾಣಿಸಿಕೊಂಡಿದೆ ಅಂತಾ ಡೆಪ್ಯೂಟಿ ಕಮಿಷನರ್ ವಿಕೆ ಶರ್ಮಾ ಮಾಹಿತಿ ನೀಡಿದ್ದಾರೆ.

ಸರ್ಕಾರದ ಆದೇಶದಂತೆ ಜುಲೈ 26 ರಿಂದ ಪಂಜಾಬ್​​ನಲ್ಲಿ ಶಾಲಾ-ಕಾಲೇಜುಗಳು ಶುರುವಾಗಿವೆ. ಇದೀಗ 20 ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರೋದು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಮತ್ತೆ ಶಾಲೆಗಳನ್ನ ಬಂದ್ ಮಾಡಲಾಗುತ್ತದೆ ಅನ್ನೋ ಮಾತುಗಳು ಕೇಳಿಬಂದಿವೆ.

blank

ಇನ್ನು 20 ಮಕ್ಕಳಿಗೆ ಕೊರೊನಾ ಸೋಂಕು ತಗುಲಿರೋದು ಪಕ್ಕಾ ಆಗುತ್ತಿದ್ದಂತೆ ಪಂಜಾಬ್ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮಕ್ಕಳ ಜೊತೆ ಆಟವಾಡಬೇಡಿ, ಶಾಲೆಗಳನ್ನ ಬಂದ್ ಮಾಡಿ, ಆನ್​ಲೈನ್ ಕ್ಲಾಸ್ ಶುರುಮಾಡಿ ಅನ್ನೋ ಆಗ್ರಹಗಳು ಕೇಳಿಬಂದಿವೆ.

ಇನ್ನು ಮೂರನೇ ಅಲೇ ವಿಶೇಷವಾಗಿ ಮಕ್ಕಳ ಮೇಲೆಯೇ ಸವಾರಿ ಮಾಡಲಿದೆ ಅಂತಾ ತಜ್ಞರು ಎಚ್ಚರಿಕೆಯನ್ನ ನೀಡಿದ್ದಾರೆ. ಹೀಗಾಗಿ ಪೋಷಕರು ಮಕ್ಕಳನ್ನ ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರ ಮಧ್ಯೆ ಕೆಲವು ರಾಜ್ಯಗಳು ಶಾಲೆಗಳನ್ನ ಆರಂಭಿಸಿವೆ.

ಇದನ್ನೂ ಓದಿ: ಸ್ಕೂಲ್​ಗಳು ಇನ್ನು ಶುರು; ಶಾಲೆ ಓಪನಿಂಗ್​ ಡೇಟ್ ಘೋಷಿಸಿದ ಸಿಎಂ

Source: newsfirstlive.com Source link