ಮನೆ ಮಂದಿಯ ಮುಗಿಲು ಮುಟ್ಟಿದ ಆಕ್ರಂದನ; ಪಂಚಭೂತಗಳಲ್ಲಿ ಲೀನನಾದ ಫೈಟರ್ ವಿವೇಕ್

ಮನೆ ಮಂದಿಯ ಮುಗಿಲು ಮುಟ್ಟಿದ ಆಕ್ರಂದನ; ಪಂಚಭೂತಗಳಲ್ಲಿ ಲೀನನಾದ ಫೈಟರ್ ವಿವೇಕ್

ಬೆಂಗಳೂರು: ‘ಲವ್​ ಯು ರಚ್ಚು’ ಚಿತ್ರೀಕರಣದ ವೇಳೆ ವಿದ್ಯುತ್​ ಶಾಕ್ ತಗುಲಿ ಮೃತಪಟ್ಟ ಫೈಟರ್​ ವಿವೇಕ್ ಅವರ ಅಂತ್ಯಸಂಸ್ಕಾರ ನೆರವೇರಿದೆ. ಚಾಮರಾಜ ಪೇಟೆಯಲ್ಲಿರುವ ಹಿಂದೂ ರುದ್ರ ಭೂಮಿಯಲ್ಲಿ ಹಿಂದೂ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ಮಾಡಲಾಗಿದೆ.

ಇದನ್ನೂ ಓದಿ: ‘ಲವ್​ ಯೂ ರಚ್ಚು’ ಚಿತ್ರದ ಶೂಟಿಂಗ್​​ ವೇಳೆ ಫೈಟರ್​​ ಸಾವು ಕೇಸ್​​​; ಐವರು ಆರೋಪಿಗಳ ವಿರುದ್ಧ FIR

blank

ನಿನ್ನೆ ಬಿಡದಿಯ ಜೋಗನಪಾಳ್ಯದಲ್ಲಿ ಶೂಟಿಂಗ್ ನಡೆಯುತ್ತಿದ್ದಾಗ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ವಿವೇಕ್ ಮೃತಪಟ್ಟಿದ್ದರು. ಇಂದು ಬೆಳಗ್ಗೆ ಮಾಗಡಿ ರಸ್ತೆ ಬಳಿಯಿರುವ ವಿವೇಕ್ ನಿವಾಸಕ್ಕೆ ​ಪಾರ್ಥೀವ ಶರೀರವನ್ನ ತರಲಾಗಿತ್ತು. ಮನೆಯವರು, ಸಂಬಂಧಿಕರು ಅಂತಿಮ ದಶರ್ನ ಪಡೆದ ಬಳಿಕ ರುದ್ರಭೂಮಿಗೆ ಪಾರ್ಥಿವ ಶರೀರ ತಂದು ನಂತರ ಚಿತೆಗೆ ಅಗ್ನಿ ಸ್ಪರ್ಷ ಮಾಡಲಾಗಿದೆ.

blank

ಇದನ್ನೂ ಓದಿ: ಫೈಟರ್ ವಿವೇಕ್​​ ​​ಸಾವು ಪ್ರಕರಣ; ಮೂವರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

ಇನ್ನು ಪ್ರಕರಣ ಸಂಬಂಧ ಪೊಲೀಸ್​​ ಐವರ ವಿರುದ್ಧ ಎಫ್​​ಐಆರ್ ಮಾಡಿದ್ದು, ​ನಿರ್ದೇಶಕ ಶಂಕರ್ ರಾಜ್ A1, ನಿರ್ಮಾಪಕ ಗುರುದೇಶ ಪಾಂಡೆ A2, ಸಾಹಸ ನಿರ್ದೇಶಕ ವಿನೋದ್ A3, ಸಿನಿಮಾ ಇನ್​​​ಚಾರ್ಜ್​​ ಪರ್ನಾಂಡೀಸ್ A4, ಕ್ರೇನ್ ಆಪರೇಟರ್ ಮಹೇದವರ್ A5 ವಿರುದ್ಧ ಎಫ್​ಐಆರ್​ ದಾಖಲಿಸಿದ್ದಾರೆ. ಸದ್ಯ ಮೂವರನ್ನ ಬಂಧಿಸಿದ್ದು, ಅವರನ್ನ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

blank

ಇದನ್ನೂ ಓದಿ: ಫೈಟರ್​​​ ವಿವೇಕ್​​​ ಅಂತಿಮ ದರ್ಶನದ ವೇಳೆ ಭಾವುಕರಾದ ನಟ ಅಜಯ್​​ ರಾವ್​​ ಹೇಳಿದ್ದೇನು?

Source: newsfirstlive.com Source link