ಎದೆ ತುಂಬಿ ಹಾಡಲು ಬರ್ತಿದ್ದಾರೆ ‘ನಮ್ಮನೆ ಯವರಾಣಿ ಮೀರಾ’

ಎದೆ ತುಂಬಿ ಹಾಡಲು ಬರ್ತಿದ್ದಾರೆ ‘ನಮ್ಮನೆ ಯವರಾಣಿ ಮೀರಾ’

ನಮ್ಮನೆ ಯುವರಾಣಿ ಸೀರಿಯಲ್​ನ ಮೀರಾ ಪಾತ್ರದ ಮೂಲಕ ಮನೆಮಾತಾಗಿರುವ ಅಂಕಿತಾ ಅಮರ್​ ಹೊಸ ಸುದ್ದಿ ನೀಡಿದ್ದಾರೆ. ಆ ವಿಷಯ ಕೇಳಿದ್ರೆ ನೀವು ಥ್ರೀಲ್​ ಆಗ್ತೀರಾ..

ಅದೇನಪ್ಪಾ ಅಂದ್ರೆ ಅಂಕಿತಾ ಅಮರ್​ ಈಗ ಬರೀ ಆ್ಯಕ್ಟರ್​ ಅಲ್ಲ, ಆ್ಯಂಕರ್​ ಕೂಡ ಹೌದು.. ಒಂದು ಶೋ ಹೋಸ್ಟ್​ ಮಾಡೋಕೆ ರೆಡಿಯಾಗಿರುವ ಅಂಕಿತಾ, ಈ ಸಿಹಿ ಸುದ್ದಿ ಬಗ್ಗೆ ನ್ಯೂಸ್​ ಫಸ್ಟ್​ ಜೊತೆ ಹಂಚಿಕೊಂಡಿದ್ದಾರೆ. ಅವರು ಹೋಸ್ಟ್ ಮಾಡುತ್ತಿರುವ ಶೋ ಕನ್ನಡಿಗರ ಮನ ಗೆದ್ದಿದ್ದ ಸಿಂಗಿಂಗ್‌ ರಿಯಾಲಿಟಿ ಶೋ ಎದೆತುಂಬಿ ಹಾಡುವೆನು. ಸಂಗೀತ ದಂತಕತೆ ಎಸ್​.ಪಿ ಬಾಲಸುಬ್ರಮಣ್ಯಂ ಅವರೇ ಸ್ವತಃ ನಿರೂಪಕರಾಗಿ, ತೀರ್ಪುಗಾರರಾಗಿ ನಡೆಸಿಕೊಡುತ್ತಿದ್ದ ಸಿಂಗಿಂಗ್​ ಶೋ.

blank

ಕಲರ್ಸ್​ ಕನ್ನಡದಲ್ಲಿ ಎಸ್​ಪಿಬಿ ಅವರ ನೆನಪಿನಲ್ಲಿ ಮತ್ತೆ ಕನ್ನಡಿಗರ ಮನೆ ಮನಕ್ಕೆ ಸಂಗೀತದ ರಸದೌತಣ ನೀಡಲು ಸಜ್ಜಾಗಿರುವ ಈ ಶೋವನ್ನ ಅಂಕಿತಾ ಅಮರ್ ​ಹೋಸ್ಟ್​ ಮಾಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಅಂಕಿತಾ.. ನಂಗೆ ಮೊದಲು ಆಫರ್​ ಬಂದಾಗ ತುಂಬಾ ಶಾಕ್​ ಆಯ್ತು.. ನಂಬುವುದಕ್ಕೇ ಆಗ್ಲಿಲ್ಲ. ತುಂಬಾ ಖುಷಿನೂ ಆಯ್ತು. ಅಷ್ಟೇ ಜವಾಬ್ದಾರಿ ಹೆಚ್ಚಾಗಿದೆ. ಎದೆತುಂಬಿ ಹಾಡುವೆನು ಬರೀ ವೇದಿಕೆಯಲ್ಲ. ಒಂದು ಯೂನಿವರ್ಸಿಟಿ ಇದ್ದ ಹಾಗೆ. ಚಿಕ್ಕವರಿದ್ದಾಗ ಆ ಕಾರ್ಯಕ್ರಮದಲ್ಲಿ ಭಾಗವಹಿಸೋಕೆ ಅವಕಾಶ ಸಿಕ್ಕರೆ ಸಾಕಪ್ಪಾ ಅಂತಾ ಕಾಯ್ತಿದ್ದ ಶೋ.. ನಂಗೆ ಇಂತಹ ಅದ್ಭುತ ಅವಕಾಶ ಸಿಕ್ಕಾಗ ತುಂಬಾ ಖುಷಿಯಾಯ್ತು. ಎಸ್​ಪಿಬಿ ಸರ್​ಗೆ ಸೇವೆ ಸಲ್ಲಿಸೋಕೆ ಒಂದು ಅವಕಾಶ ಸಿಕ್ಕಿದೆ.

ನನ್ನ ತಂದೆ ಯಾವಾಗಲೂ ಹೇಳ್ತಿರ್ತಾರೆ.. ಕಲಾವಿದರಿಗೆ ಅಂತಿಮ ತೀರ್ಪುಗಾರರೇ ವೀಕ್ಷಕರು ಅಂತಾ.. ಅವರ ಪ್ರೀತಿ, ವಿಶ್ವಾಸ ಇಲ್ಲ​ ಅಂದ್ರೆ ಇಷ್ಟು ದೂರ ಬರೋದಕ್ಕೆ ಆಗ್ತಿರಲಿಲ್ಲ. ಅವರ ಹಾರೈಕೆ ಮುಂದೆಯೂ ಇರುತ್ತೆ ಅಂತಾ ಅನ್ಕೊಂಡಿದ್ದೀನಿ ಎಂದರು ಅಂಕಿತಾ. ಮೆಲೋಡಿ ಕಿಂಗ್​ ರಾಜೇಶ್​ ಕೃಷ್ಣನ್, ಸಗೀತ ನಿರ್ದೇಶಕ ವಿ.ಹರಿಕೃಷ್ಣ, ಸಂಗೀತ ಸಂಯೋಜಕ, ಗಾಯಕ ರಘು ದೀಕ್ಷಿತ್​ ಕಾರ್ಯಕ್ರಮದ ತೀರ್ಪುಗಾರರಾಗಿದ್ದು, ಸಾಕಷ್ಟು ನೀರಿಕ್ಷೆ ಮೂಡಿಸಿದೆ. ಎಸ್‌ಪಿಬಿ ಅವರು ಆರಂಭಿಸಿದ ಜನಪ್ರಿಯ ಸಿಂಗಿಂಗ್​ ಶೋ ಎದೆ ತುಂಬಿ ಹಾಡುವೆನು ಇದೇ ಅಗಸ್ಟ್ 14 ರಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

 

Source: newsfirstlive.com Source link