ಕಾಶ್ಮೀರದಲ್ಲಿ ಸ್ಫೋಟ ಬೆನ್ನಲ್ಲೇ ರೆಡ್​ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ರಕರ್ತ; ಗ್ರೆನೇಡ್ ಜೊತೆ ಅರೆಸ್ಟ್

ಕಾಶ್ಮೀರದಲ್ಲಿ ಸ್ಫೋಟ ಬೆನ್ನಲ್ಲೇ ರೆಡ್​ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ರಕರ್ತ; ಗ್ರೆನೇಡ್ ಜೊತೆ ಅರೆಸ್ಟ್

ನವದೆಹಲಿ: ಇಂದು ಸಂಜೆ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಸೆಕ್ಯೂರಿಟಿ ಫೋರ್ಸ್​ ನಿಲ್ಲಿಸಿದ್ದ ವಾಹನದ ಮೇಲೆ ಉಗ್ರರು ಗ್ರೇನೆಡ್ ದಾಳಿ ಮಾಡಿದ್ದು, 7 ಮಂದಿ ನಾಗರಿಕರು ಗಾಯಗೊಂಡಿದ್ದಾರೆ. ಇನ್ನೊಂದು ಪ್ರತ್ಯೇಕ ಪ್ರಕರಣದಲ್ಲಿ ಅನುಮಾನಾಸ್ಪದವಾಗಿ ಎರಡು ಗ್ರೆನೇಡ್​ಗಳನ್ನ ಇಟ್ಟುಕೊಂಡಿದ್ದ ಜರ್ನಲಿಸ್ಟ್​ನನ್ನ ಪೊಲೀಸರು ಬಂಧಿಸಿದ್ದಾರೆ.

ಇನ್ನು ಗ್ರೆನೇಡ್ ದಾಳಿ ಬಗ್ಗೆ ಮಾತನಾಡಿರುವ ಡೆಪ್ಯೂಟಿ ಇನ್ಸ್​​ಪೆಕ್ಟರ್​ ಜನರಲ್ ಕಿಶೋರ್​​, ಇಂದು ಸಂಜೆ ಹರಿ ಸಿಂಗ್ ಸ್ಟ್ರೀಟ್​ ಬಳಿ ನಿಲ್ಲಿಸಿದ್ದ ಎಸ್​ಎಸ್​ಬಿ ವಾಹನದ ಮೇಲೆ ಹ್ಯಾಂಡ್ ಗ್ರೆನೇಡ್ ಎಸೆದಿದ್ದಾರೆ. ಆ ಗ್ರೆನೇಡ್​ ವಾಹನಕ್ಕೆ ತಾಗಿ ರಸ್ತೆಗೆ ಬಿದ್ದಿದೆ. ಘಟನೆಯಲ್ಲಿ ಏಳು ನಾಗರಿಕರು ಗಾಯಗೊಂಡಿದ್ದಾರೆ, ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದಿದ್ದಾರೆ.

ಘಟನೆಯಲ್ಲಿ ವಾಹನ ಕೂಡ ಜಖಂಗೊಂಡಿದೆ. ಇನ್ನು ಉಗ್ರರಿಗಾಗಿ ಕಾರ್ಯಾಚರಣೆಯನ್ನ ಆರಂಭಿಸಿದ್ದೇವೆ ಎಂದಿದ್ದಾರೆ. ಇದೇ ಶ್ರೀನಗರದ ಲಾಲ್​ಚೌಕ್ ಬಳಿ ಎರಡು ಗ್ರೆನೇಡ್​​ಗಳನ್ನ ಇಟ್ಕೊಂಡಿದ್ದ ಜರ್ನಲಿಸ್ಟ್​ನನ್ನ ಪೊಲೀಸರು ಬಂಧಿಸಿದ್ದಾರೆ. ಆದಿಲ್ ಫಾರೂಕ್ ಬಂಧಿತ ಆರೋಪಿ. ಗ್ರೆನೇಡ್ ದಾಳಿಯಾದ ಕೆಲವೇ ನಿಮಿಷಗಳಲ್ಲಿ ಈತನನ್ನ ಪೊಲೀಸರು ಬಂಧಿಸಿದ್ದಾರೆ.

Source: newsfirstlive.com Source link