ಪಂಚಮಸಾಲಿಗೆ 2ಎ ಮೀಸಲಾತಿ: ಸೆಪ್ಟೆಂಬರ್ ತಿಂಗಳು ಹತ್ತಿರವಾಗುತ್ತಿದೆ.. ಮತ್ತೆ ಎಚ್ಚರಿಸಿದ ಮೃತ್ಯುಂಜಯ ಶ್ರೀ

ಪಂಚಮಸಾಲಿಗೆ 2ಎ ಮೀಸಲಾತಿ: ಸೆಪ್ಟೆಂಬರ್ ತಿಂಗಳು ಹತ್ತಿರವಾಗುತ್ತಿದೆ.. ಮತ್ತೆ ಎಚ್ಚರಿಸಿದ ಮೃತ್ಯುಂಜಯ ಶ್ರೀ

ದಾವಣಗೆರೆ: ಪಂಚಮಸಾಲಿ 2ಎ ಮೀಸಲಾತಿ ಹೋರಾಟ ವಿಚಾರಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್‌ 31ರೊಳಗೆ 2ಎ ಮೀಸಲಾತಿಯನ್ನ ನೀಡಬೇಕು ಇಲ್ಲವಾದರೆ ಮತ್ತೆ ಸತ್ಯಾಗ್ರಹ ಮುಂದುವರೆಸುತ್ತೇವೆ ಎಂದು ನೂತನ ಸಿಎಂ ಬಸವರಾಜ ಬೊಮ್ಮಾಯಿವರಿಗೆ ಪಂಚಮಸಾಲಿ ಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಸೆ.15ರೊಳಗೆ 2ಎ ಮೀಸಲಾತಿ ಸಿಗಬೇಕು -ಬೊಮ್ಮಾಯಿಗೆ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ

ಕೇಂದ್ರ ಸರ್ಕಾರ ಹಿಂದುಳಿದ ವರ್ಗಗಗಳ ಮೀಸಲಾತಿ ನೀಡುವ ಸ್ವಾತಂತ್ರ್ಯವನ್ನ ರಾಜ್ಯ ಸರ್ಕಾರಗಳಿಗೆ ನೀಡಿದೆ. ಪಂಚಮಸಾಲಿ ಹೋರಾಟ ನಡೆಸಿದಾಗ ಪಂಚಮಸಾಲಿ ಬೊಮ್ಮಾಯಿ ಅವರು ಮಾತು ಕೊಟ್ಟಿದ್ದರು. ಆಗಸ್ಟ್ 12 ಕ್ಕೆ ಪಂಚಮಸಾಲಿ ಸಮುದಾಯದ ಸಭೆ ನಡೆಸುತ್ತೇವೆ.. ಮತ್ತೆ 2ಎ ಮೀಸಲಾತಿ ಹೋರಾಟದ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ದಾವಣಗೆರೆಯಲ್ಲಿ ಪಂಚಮಸಾಲಿ ಶ್ರೀ ಸುದ್ದಿಗೋಷ್ಠಿ ವೇಳೆ ಹೇಳಿಕೆ ನೀಡಿದ್ದಾರೆ.

Source: newsfirstlive.com Source link