ಯುವಕರಿಗೆ ಉದ್ಯೋಗ ಕಲ್ಪಿಸಲು ಬ್ರಾಡ್​ಫೋರ್ಡ್​ ಗ್ಲೋಬಲ್ ಸಂಸ್ಥೆಯಿಂದ KSDC ಪ್ರಮುಖರ ಭೇಟಿ

ಯುವಕರಿಗೆ ಉದ್ಯೋಗ ಕಲ್ಪಿಸಲು ಬ್ರಾಡ್​ಫೋರ್ಡ್​ ಗ್ಲೋಬಲ್ ಸಂಸ್ಥೆಯಿಂದ KSDC ಪ್ರಮುಖರ ಭೇಟಿ

ಬೆಂಗಳೂರು: ಬ್ರಾಡ್​ಫೋರ್ಡ್​ ಗ್ಲೋಬಲ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಸುರೇಶ್ ಕುಮಾರ್ ಜಿಟಿ ಅವರು ಇಂದು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಗೌಡ ಐಆರ್​ಎಸ್​ ಅವರನ್ನ ಭೇಟಿಯಾದರು.

ಈ ವೇಳೆ ಬ್ರಾಡ್‌ಫೋರ್ಡ್ ಗ್ಲೋಬಲ್ ಸಂಸ್ಥೆ ಮತ್ತು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ಕರ್ನಾಟಕದ ಯುವಕರಿಗೆ ಕೌಶಲ್ಯ ತರಬೇತಿಯ ಮುಖಾಂತರ ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಬಗ್ಗೆ ಇಬ್ಬರು ಗಣ್ಯರು ಚರ್ಚೆ ನಡೆಸಿದರು.

KSDC ಜೊತೆ ಬ್ರಾಡ್‌ಫೋರ್ಡ್ ಗ್ಲೋಬಲ್ ಸಂಸ್ಥೆಯು ರಾಜ್ಯದ ಯುವಕರಿಗೆ ತರಬೇತಿ ನೀಡುವುದು ಮತ್ತು ಉದ್ಯೋಗ ಅವಕಾಶಗಳನ್ನ ಹೇಗೆಲ್ಲ ಕಲ್ಪಿಸಬಹುದು ಅನ್ನೋದ್ರ ಬಗ್ಗೆ ಚರ್ಚಿಸಲಾಗಿದೆ. ಮಾತ್ರವಲ್ಲ ರಾಜ್ಯ, ಅಂತಾರಾಜ್ಯ ಹಾಗೂ ವಿದೇಶಗಳಲ್ಲಿಯೂ ನಮ್ಮ ಯುವಕರು ಹೇಗೆ ಉದ್ಯೋಗವನ್ನ ಗಿಟ್ಟಿಸಿಕೊಳ್ಳಬಹುದು ಅನ್ನೋದರ ಬಗ್ಗೆ ಮಾತುಕತೆ ನಡೆಸಲಾಗಿದೆ ಅಂತಾ ಸುರೇಶ್ ಕುಮಾರ್ ತಿಳಿಸಿದ್ದಾರೆ. ಇನ್ನು ಬ್ರಾಡ್‌ಫೋರ್ಡ್ ಗ್ಲೋಬಲ್ ಸಂಸ್ಥೆಯು ಅಂತಾರಾಷ್ಟ್ರೀಯ ನೇಮಕಾತಿ ಸಂಸ್ಥೆಯಾಗಿದೆ. ಈ ಸಂಸ್ಥೆಗೆ ವಿದೇಶಾಂಗ ಸಚಿವಾಲಯವು ಪರವಾನಗಿಯನ್ನ ನೀಡಿದೆ.

Source: newsfirstlive.com Source link