12 ವರ್ಷಗಳ ಕಾಲ ನಡೆಯಲಿರೋ ಹನುಮದ್ ಜನ್ಮಭೂಮಿ ಕಿಷ್ಕಿಂಧ ರಥಯಾತ್ರೆಗೆ ಚಾಲನೆ

12 ವರ್ಷಗಳ ಕಾಲ ನಡೆಯಲಿರೋ ಹನುಮದ್ ಜನ್ಮಭೂಮಿ ಕಿಷ್ಕಿಂಧ ರಥಯಾತ್ರೆಗೆ ಚಾಲನೆ

ಬೆಂಗಳೂರು: 12 ವರ್ಷಗಳ ಕಾಲ ದೇಶದಾದ್ಯಂತ ನಡೆಯುವ ಹನುಮದ್ ಜನ್ಮಭೂಮಿ ಕಿಷ್ಕಿಂಧ ರಥಯಾತ್ರೆಗೆ ಬೆಂಗಳೂರಿನಿಂದ ಚಾಲನೆ ನೀಡಲಾಗಿದೆ. ಬೆಂಗಳೂರಿನ ಮೆಜೆಸ್ಟಿಕ್​​ನಲ್ಲಿನ ತುಳಸಿ ಆಟದ ಮೈದಾನದ ಬಳಿಯಿಂದ ಆರಂಭಗೊಂಡ ರಥಯಾತ್ರೆ, ಬೆಂಗಳೂರು ಸುತ್ತಲಿನ ಪ್ರದೇಶದಲ್ಲಿ 2 ತಿಂಗಳ ಕಾಲ ನಡೆಯಲಿದೆ.

blank

ನಂತರ ದೇಶದಾದ್ಯಂತ 12 ವರ್ಷಗಳ ಕಾಲ ಆಂಜನೇಯನ ರಥ ಸಂಚರಿಸಲಿದ್ದು ಆಂಜನೇಯನ ಜನ್ಮಸ್ಥಳದ ಬಗೆಗಿನ ಜಾಗೃತಿಗಾಗಿ ಈ ರಥಯಾತ್ರೆ ಆಯೋಜಿಸಲಾಗಿದೆ. ಕೊಪ್ಪಳ ಜಿಲ್ಲೆಯ ಆನೆಗೊಂದಿ ಬಳಿಯ ಕಿಷ್ಕಿಂಧೆಯ ಅಂಜನಾದ್ರಿಗೆ ವಾಯುಪುತ್ರ ಹನುಮನ ಜನ್ಮಸ್ಥಾನ ಎಂದು ಪ್ರಸಿದ್ದವಾಗಿದೆ, ವಾಲ್ಮೀಕಿ ರಾಮಾಯಣ ಗ್ರಂಥದಲ್ಲಿ, ಅನೇಕ ಶಿಲಾ ಶಾಸನಗಳಲ್ಲಿ ಈ ಬಗ್ಗೆ ದಾಖಲೆಯಿದೆ. ಆದರೆ, ಇತ್ತೀಚಿಗೆ ಆಂಧ್ರಪ್ರದೇಶದ ತಿರುಮಲದಲ್ಲಿ ಅಂಜನಾದ್ರಿಯೇ ಆಂಜನೇಯನ ಜನ್ಮ ಸ್ಥಳ ಎಂದು ಟಿಟಿಡಿ ಹೇಳಿಕೊಳ್ಳುತ್ತಿದೆ. ಇದಕ್ಕಾಗಿ ತನ್ನದೇ ಪಂಡಿತರ ಬಳಗದಿಂದ ದಾಖಲೆಗಳನ್ನು ಸೃಷ್ಠಿಸಿಕೊಂಡಿದೆ. ಟಿಟಿಡಿ ವಿಚಿತ್ರ ವರ್ತನೆಗೆ ಪ್ರತಿಕ್ರಿಯೆಯಾಗಿ ಹನುಮದ್ ಜನ್ಮಭೂಮಿ ಕಿಷ್ಕಿಂಧ ಟ್ರಸ್ಟ್​ನಿಂದ ರಥಯಾತ್ರೆ ಆಯೋಜನೆ ಮಾಡಲಾಗಿದ್ದು ಈ ಮೂಲಕ ಶ್ರೀ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಎಲ್ಲೆಡೆ ಪ್ರಚಾರಕ್ಕೆ ತೊಡಗಿಕೊಂಡಿದ್ದಾರೆ.

Source: newsfirstlive.com Source link