‘ಮರಳಿ ಮನಸ್ಸಾಗಿದೆ’.. ಅಂತಿದ್ದಾರೆ ಹರಿಣಿ ಶ್ರೀಕಾಂತ್​

‘ಮರಳಿ ಮನಸ್ಸಾಗಿದೆ’.. ಅಂತಿದ್ದಾರೆ ಹರಿಣಿ ಶ್ರೀಕಾಂತ್​

ಸ್ಟಾರ್​ ಸುರ್ವಣದಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಸೀರಿಯಲ್​ ಮರಳಿ ಮನಸ್ಸಾಗಿದೆ.. ಈ ಸೀರಿಯಲ್​ ಮಾಹಿತಿಯನ್ನ ಈಗಾಗಲೇ ನಾವು ನಿಮಗೆ ನೀಡಿದ್ದೆವೆ, ಈಗ ಹೊಸ ಸುದ್ದಿಯೊಂದು ಟೀಮ್​ನಿಂದ ಹೊರ ಬಂದಿದೆ.

ಆ ಸುದ್ದಿ ಎನಪ್ಪಾ ಅಂದ್ರೆ ಮರಳಿ ಮನಸ್ಸಾಗಿದೆ ಟೀಮ್​ಗೆ ಈಗ ಹರಿಣಿ ಎಂಟ್ರಿ ಕೊಟ್ಟಿದ್ದಾರೆ. ಚಂದನ್‌, ದಿವ್ಯಾ ವಾಗುಕರ್ ಹಾಗೂ ಶಿಲ್ಪಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಧಾರಾವಾಹಿ ಸಾಕಷ್ಟು ಕೂತುಹಲ ಮೂಡಿಸಿದ್ದು, ಹರಿಣಿ ಶ್ರೀಕಾಂತ್​ ಅವರು ಹೀರೋ ತಾಯಿ ಸುಜಾತಾ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಖಡಕ್ ಪೊಲೀಸ್ ಆಫೀಸರ್‌ ವಿಕ್ರಾಂತ್​ ನಾಯಕ್​ ರೋಲ್‌ಗೆ ಚಂದನ್‌ಕುಮಾರ್ ಬಣ್ಣ ಹಚ್ಚಿದ್ದು, ಇಷ್ಟವಿಲ್ಲದಿದ್ದರೂ ಕೊಟ್ಟ ಮಾತಿಗೆ ಬೆಲೆ ಕೊಟ್ಟು ವಿಕ್ರಾಂತ್​​ ಹುಡುಗಿಯನ್ನು ಮದುವೆಯಾಗ್ತಾನೆ. ಆದ್ರೆ ಆ ಹುಡುಗಿಗೂ ಈ ಮದುವೆ ಇಷ್ಟವಿರುವುದಿಲ್ಲ.. ಇನ್ನೊಂದು ಕಡೆ ಪ್ರೀತಿಸುತ್ತಿರುವ ಹುಡುಗಿ.. ಹೀಗೆ ಒಬ್ಬರನ್ನೊಬ್ಬರು ಇಷ್ಟಪಡದೆ ಮದುವೆಯಾಗಿ ಮುಂದೆ ಅವರು ಹೇಗೆ ಇರ್ತಾರೆ ಏನೆಲ್ಲಾ ಕಷ್ಟಗಳು ಬರಬಹುದು ಎಂಬುದೇ ಈ ಧಾರಾವಾಹಿಯ ಒನ್​ ಲೈನ್​ ಸ್ಟೋರಿ.

blank

ಸದ್ಯ ರಾಜಾರಾಣಿ ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿರುವ ಹರಿಣಿ ಶ್ರೀಕಾಂತ್ ​ಇಷ್ಟು ದಿನ ಸೌಮ್ಯ ಪಾತ್ರಗಳ ಮೂಲಕ ಕಾಣಿಸಿಕೊಂಡಿದ್ದರು. ಆದ್ರೆ ಈ ಧಾರಾವಾಹಿಲ್ಲಿ ಸೌಮ್ಯತೆಯ ಜೊತೆಗೆ ಖಡಕ್​ ಲುಕ್​ ಇರಲಿದೆ ಎಂಬುವುದು ವಿಶೇಷ.
ಈಗಾಗಲೇ ಮರಳಿ ಮನಸ್ಸಾಗಿದೆ ಮನೆ ಮನೆ ತಲುಪಿದ್ದು, ಟೈಟಲ್​ ಟ್ರಾಕ್​ ಕೂಡ ಜನರ ಮನಸ್ಸು ಗೆದ್ದಿದೆ. ಒಟ್ನಲ್ಲಿ ಮರಳಿ ಮನಸ್ಸಾಗಿದೆ ಮೂಲಕ ಮತ್ತೆ ರಂಜಿಸಲಿರುವ ಹರಿಣಿ ಆ್ಯಂಡ್​ ಟೀಮ್​ಗೆ ಆಲ್​ ದಿ ಬೆಸ್ಟ್.

Source: newsfirstlive.com Source link