ನೆರೆ ಪರಿಹಾರ ವಿಳಂಬ; ‘ದೇವರೇ.. ಶಿವನೇ.. ಅಂತ ನಿನ್ನೆಯಷ್ಟೇ ಸರ್ಕಾರ ಬಂದಿದೆ’ ಎಂದ ಈಶ್ವರಪ್ಪ

ನೆರೆ ಪರಿಹಾರ ವಿಳಂಬ; ‘ದೇವರೇ.. ಶಿವನೇ.. ಅಂತ ನಿನ್ನೆಯಷ್ಟೇ ಸರ್ಕಾರ ಬಂದಿದೆ’ ಎಂದ ಈಶ್ವರಪ್ಪ

ಬೆಳಗಾವಿ: ನೆರೆ ಪೀಡಿತ ಬೆಳಗಾವಿ ಜಿಲ್ಲೆಗೆ ಇನ್ನೂ ಹಣ ಬಿಡುಗಡೆ ಮಾಡದ ವಿಚಾರವಾಗಿ ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ.. ನಿನ್ನೆ ತಾನೆ ದೇವರೇ.. ಶಿವನೇ.. ಅಂತಾ ಗವರ್ನಮೆಂಟ್ ಬಂದಿದೆ ಎಂದಿದ್ದಾರೆ.

ಇದನ್ನೂ ಓದಿ: ಕೆ.ಎಸ್​​ ಈಶ್ವರಪ್ಪಗೆ ಸಂಸ್ಕಾರ, ಸಂಸ್ಕೃತಿ ಎರಡು ಇಲ್ಲ; ಮಾಜಿ ಸಿಎಂ ಸಿದ್ದರಾಮಯ್ಯ

ನೆರೆಹಾನಿ ಬಗ್ಗೆ ಇನ್ನೂ ವರದಿ ಬಂದಿಲ್ಲ.. ವರದಿ ಬಂದ ಮೇಲೆ ಎಷ್ಟು ನಷ್ಟ ಆಗಿದೆ ನೋಡುತ್ತೇವೆ. ವರದಿ ಬಂದ ಮೇಲೆ ಖಂಡಿತ ಹಣ ಬಿಡುಗಡೆ ಮಾಡ್ತೇವೆ. ಇಡೀ ಕರ್ನಾಟಕದಲ್ಲಿ ನೆರೆಯಿಂದ ಹಾನಿಯಾದ ಬಗ್ಗೆ ಸರ್ವೇ ಮಾಡಿ ಜಿಲ್ಲಾ ಉಸ್ತುವಾರಿ ಸಚಿವರು ವರದಿ ಕಳಿಸುತ್ತಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ದೇಶದಲ್ಲೇ ಅತ್ಯಂತ ಕೆಟ್ಟ ಕನಸುಗಾರ -ಕೆ.ಎಸ್​ ಈಶ್ವರಪ್ಪ

ಕಳೆದ ಬಾರಿ ಪ್ರವಾಹ ವೇಳೆ 1,800 ಕೋಟಿ ರೂಪಾಯಿ ರಸ್ತೆ ದುರಸ್ತಿಗಾಗಿ ಬಿಡುಗಡೆ ಮಾಡಿದ್ವಿ. ಎಲ್ಲಾ ಜಿಲ್ಲೆಗಳಿಗೆ ಎಷ್ಟೆಷ್ಉಟ ಹಣ ಬಿಡುಗಡೆ ಮಾಡಬೇಕೆಂಬ ಬಗ್ಗೆ ಸಿಎಂ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ತೇವೆ. ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಹೋಗಿ ಸರ್ವೇ ಮಾಡಿಕೊಂಡು‌ ಬಂದಿದ್ದಾರೆ.. ಉಸ್ತುವಾರಿ ಸಚಿವರು ವರದಿ ನೀಡುತ್ತಿದ್ದಂತೆ ಹಣ ಬಿಡುಗಡೆ ಮಾಡ್ತೇವೆ ಎಂದಿದ್ದಾರೆ,

Source: newsfirstlive.com Source link