ಭೂಮಿಪೂಜೆಗೆಂದು ತೆರಳಿದ್ದ ಶಾಸಕ ಮಧ್ಯದಲ್ಲೇ ವಾಪಸ್: ಗ್ರಾಮಸ್ಥರ ಸಿಟ್ಟಿಗೆ ಗುರಿಯಾದ ಸಿದ್ದು ಸವದಿ

ಭೂಮಿಪೂಜೆಗೆಂದು ತೆರಳಿದ್ದ ಶಾಸಕ ಮಧ್ಯದಲ್ಲೇ ವಾಪಸ್: ಗ್ರಾಮಸ್ಥರ ಸಿಟ್ಟಿಗೆ ಗುರಿಯಾದ ಸಿದ್ದು ಸವದಿ

ಬಾಗಲಕೋಟೆ: ಕಸ ನಿರ್ವಹಣಾ ಘಟಕ ನಿರ್ಮಾಣದ ಭೂಮಿಪೂಜೆಗೆಂದು ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಕಾಲತಿಪ್ಪೆ ಗ್ರಾಮಕ್ಕೆ ತೆರಳಿದ್ದ ಶಾಸಕ ಸಿದ್ದು ಸವದಿ ಭೂಮಿ ಪೂಜೆ ಕೈಬಿಟ್ಟು ಕಾರ್ಯಕ್ರಮದ ಮಧ್ಯದಲ್ಲೇ ವಾಪಸ್ಸಾಗಿದ್ದಾರೆ. ಗ್ರಾಮಸ್ಥರ ವಿರೋಧ ಇದಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಪುರಸಭೆ ಸದಸ್ಯರ ತಳ್ಳಾಟ ನೂಕಾಟ ಪ್ರಕರಣ; ಶಾಸಕ ಸಿದ್ದು ಸವದಿ ವಿರುದ್ಧ ದೂರು

blank

ಕಸ ನಿರ್ವಹಣ ಘಟಕ ನಿರ್ಮಾಣಕ್ಕೆ ವಿರೋಧ ವ್ಯಕ್ತಡಿಸಿದ ಗ್ರಾಮಸ್ಥರು ಶಾಸಕರ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಗೋಲಬಾವಿ ಪಂಚಾಯಿತಿ ವ್ಯಾಪ್ತಿಯ ಕಸ ನಿರ್ವಹಣಾ ಘಟಕವನ್ನು ಕಾಲತಿಪ್ಪೆಯಲ್ಲಿ ನಿರ್ಮಿಸಲುಅಧಿಕಾರಿಗಳು ಮುಂದಾಗಿದ್ದರು.

ಇದನ್ನೂ ಓದಿ: ‘ನಿನಗೆ ತಾಕತ್ತಿದ್ರೆ ಮಹಾರಾಷ್ಟ್ರದ ಬಗ್ಗೆ ಮಾತಾಡು’- ಉಮಾಶ್ರೀಗೆ ಸಿದ್ದು ಸವದಿ ಚಾಲೆಂಜ್

ಕಾಲತಿಪ್ಪೆ ಗ್ರಾಮದಲ್ಲಿ ಇವತ್ತು ಭೂಮಿ ಪೂಜೆಗಾಗಿ ಪೊಲೀಸ್ ಬಂದೋಬಸ್ತ್​ನೊಂದಿಗೆ ಶಾಸಕರು ತೆರಳಿದ್ದರು. ಗ್ರಾಮದಲ್ಲಿ ಈಗಾಗಲೇ ಜಾಗದ ಸಮಸ್ಯೆ ಇದೆ.. ಜೊತೆಗೆ ನಿರ್ಮಾಣ ಮಾಡಲು ಹೊರಟಿರುವ ಕಸ ನಿರ್ವಹಣಾ ಘಟಕದ ಸಮೀಪದಲ್ಲಿ ಸರ್ಕಾರಿ ಶಾಲೆ ಇದೆ.. ಇದರಿಂದ ಮಕ್ಕಳಿಗೆ ತೊಂದ್ರೆ ಆಗಲಿದೆ ಎಂದು ಗ್ರಾಮಸ್ಥರು ವಾದಿಸಿದ್ದಾರೆ. ಗದ್ದಲ ಜಾಸ್ತಿ ಆಗಿದ್ದರಿಂದ ಭೂಮಿ ಪೂಜೆ ಕೈಬಿಟ್ಟು ನೀವೆ ಸೂಕ್ತ ಜಾಗ ತೋರಿಸಿ, ಅಲ್ಲಿ ಮಾಡೋಣ ಎಂದು ವಾಪಸ್ಸಾಗಿದ್ದಾರೆ.

ಇದನ್ನೂ ಓದಿ: ಸೋದರನನ್ನು ಕಳೆದುಕೊಂಡ ವ್ಯಕ್ತಿಗೆ ‘ನಾಲಾಯಕ್ ಫೋನ್ ಇಡು’ ಎಂದು ಉದ್ಧಟತನ ತೋರಿದ ಸಿದ್ದು ಸವದಿ

Source: newsfirstlive.com Source link